ಭಟ್ಕಳ (Bhatkal): ದಿ ಜನತಾ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ (Janata Bank) ಠೇವುಗಳು ರೂ. ೧೮೬ ಕೋಟಿ ೧೧ ಲಕ್ಷದಷ್ಟಿದೆ. ಇವುಗಳಲ್ಲಿ ಏರಿಕೆ ಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಈ ವರ್ಷದಲ್ಲಿ ಸಂಘವು ರೂ. ೩ ಕೋಟಿ ೭ ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. ೧೦ರಂತೆ ಲಾಭಾಂಶ ನೀಡಲು ಉದ್ದೇಶಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ, ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ (Mankal Vaidya) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಶನಿವಾರ ಪಟ್ಟಣದ ಮುಗಳಿಕೋಣೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಸಂಘದ (Janata Bank) ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. ಸಂಘದ ಬೆಳವಣಿಗೆಗೆ ಸದಸ್ಯರ ಮತ್ತು ಠೇವುದಾರರ ಪ್ರೋತ್ಸಾಹ ಹಾಗೂ ನಮ್ಮ ಸಂಘದ ಮೇಲಿರುವ ದೃಢವಿಶ್ವಾಸವೇ ಕಾರಣವಾಗಿದೆ. ಸಂಘದಲ್ಲಿ ವಿವಿಧ ಠೇವಣಿ ಯೋಜನೆಗಳಿದ್ದು, ಗ್ರಾಹಕರು ಹಣವನ್ನು ಈ ಯೋಜನೆಗಳಲ್ಲಿ ತೊಡಗಿಸಿ ಲಾಭ ಪಡೆಯಬಹುದು ಎಂದರು.

ಇದನ್ನೂ ಓದಿ : ಆಗಸ್ಟ್‌ ೩೧ರಂದು ವಿವಿಧೆಡೆ ಅಡಿಕೆ ಧಾರಣೆ

ವರ್ಷದ ಆರಂಭಕ್ಕೆ ಸಂಘದಲ್ಲಿ ೩೧೨೭೪ ಶೇರುದಾರ ಸದಸ್ಯರಿದ್ದು, ಒಟ್ಟೂ ಸದಸ್ಯರ ಸಂಖ್ಯೆ ೩೨೮೭೬ ಇದೆ. ಸಂಘದ ಶೇರು ಬಂಡವಾಳ ರೂ. ೧೧ ಕೋಟಿ ೩೦ ಲಕ್ಷದಷ್ಟಿದೆ. ಸಂಘದ ಸದಸ್ಯರಿಂದ ರೂ. ೨೨೪ ಕೋಟಿ ಸಾಲ ಬರಬೇಕಿದೆ. ಸಾಲದ ವ್ಯವಹಾರದಲ್ಲಿ ಶೇಕಡಾ ೧೨.೭೮ ರಷ್ಟು ವೃದ್ಧಿಯಾಗಿದೆ ಎಂದು ಮಾಹಿತಿ ನೀಡಿದರು.

ವಿಡಿಯೋ ಸಹಿತ ಇದನ್ನೂ ಓದಿ : ಅನುದಾನ ತಾರತಮ್ಯ ಖಂಡಿಸಿ ಜಾಲಿ ಪಪಂ ಸದಸ್ಯರಿಂದ ಧರಣಿ

ಸಂಘವು ಪ್ರತಿ ವರ್ಷ ತಾನು ಗಳಿಸಿದ ಲಾಭಾಂಶದಲ್ಲಿ ತನ್ನ ಕಾರ್ಯಕ್ಷೇತ್ರದಲ್ಲಿ ಬರುವ ಶಾಲಾ ಕಾಲೇಜುಗಳಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಧನ ಸಹಾಯ ಮಾಡುತ್ತಿದೆ. ಮನೆ ಮತ್ತು ಆಸ್ತಿಗಳನ್ನು ಕಳೆದುಕೊಂಡ ಸದಸ್ಯರಿಗೆ, ಬಡಜನತೆಗೆ ಹಾಗೂ ಮಾರಕ ರೋಗಗಳಿಂದ ಪೀಡಿತರಾದ ಬಡಜನರಿಗೆ ಅವರ ಚಿಕಿತ್ಸೆಗೆ ಹೆಚ್ಚಿನ ರೀತಿಯಲ್ಲಿ ಧನ ಸಹಾಯ ಈವರೆಗೂ ಮಾಡುತ್ತಾ ಬಂದಿದೆ. ಕೆಲವು ಸಾರ್ವಜನಿಕ ಚಟುವಟಿಕೆಗಳಿಗೆ, ಕ್ರೀಡೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಗಳಿಗೆ ಮತ್ತು ಕೆಲವು ಸರಕಾರಿ ಆಸ್ಪತ್ರೆಗಳಿಗೆ ವಸ್ತು ರೂಪದಲ್ಲಿ ಧನ ಸಹಾಯ ಮಾಡುತ್ತ ಬಂದಿದ್ದೇವೆ. ಸಂಘವು ಈಗಾಗಲೇ ಪ್ರಧಾನ ಕಛೇರಿ ಸೇರಿ ೧೭ ಶಾಖೆಗಳನ್ನು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ :  ಭಟ್ಕಳ ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳು

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಿರ್ದೇಶಕರಾದ ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಗೊಯ್ದಗೊಂಡ, ಅಲ್ಬರ್ಟ ಡಿಕೋಸ್ತಾ, ಲಕ್ಷ್ಮಿ ಮಾದೇವ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗೇಶ ದೇವಾಡಿಗ ಹಾಗೂ ನೂರಾರು ಸಂಖ್ಯೆಯ ಸದಸ್ಯರು ಇದ್ದರು.

ವಿಡಿಯೋ ಸಹಿತ ಇದನ್ನೂ ಓದಿ : Kick boxing/ ಭಟ್ಕಳದ ಧನ್ವಿತಾ ವಾಸು ಮೊಗೇರ ವರ್ಲ್ಡ್ ಚಾಂಪಿಯನ್