ಭಟ್ಕಳ (Bhatkal) : ನಿಂತಿದ್ದ ಲಾರಿಗೆ (Lorry) ಹಿಂಬದಿಯಿಂದ ಬೈಕ್‌ (bike) ಡಿಕ್ಕಿಯಾಗಿ (accident) ಸವಾರ ಸ್ಥಳದಲ್ಲಿಯೇ ಮೃತಪಟ್ಟ (spot death) ಘಟನೆ ಮುರುಡೇಶ್ವರದಲ್ಲಿ (Murudeshwar) ನಡೆದಿದೆ. ಈ ಕುರಿತು ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಮೃತ ಬೈಕ್‌ ಸವಾರ ಮತ್ತು ನಿಂತಿದ್ದ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ(complaint).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಾಲಿ ಗುಡಿಹಿತ್ತಲು ನಿವಾಸಿ ನಾರಾಯಣ ಸುಕ್ರಪ್ಪ ನಾಯ್ಕ (೪೧) ಮೃತ ಬೈಕ್‌ ಸವಾರ. ಇವರು ಶಿರಾಲಿ ಕಡೆಯಿಂದ ಹೊನ್ನಾವರದ ಕಡೆಗೆ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುರುಡೇಶ್ವರದ ಎಸ್‌ಬಿಐ ಬ್ಯಾಂಕ್‌ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.

ವಿಡಿಯೋ ಸಹಿತ ಇದನ್ನೂಓದಿ : ಗ್ಯಾರಂಟಿ ಯೋಜನೆಗಳ ಕಾರ್ಯಾಲಯ ಉದ್ಘಾಟನೆ

ಈ ಕುರಿತು ಹೆಸ್ಕಾಂ ಮೀಟರ್‌ ರೀಡರ್‌ ಗುಡಿಹಿತ್ತಲು ಬೆರ್ಮುಮನೆ ನಿವಾಸಿ ರವೀಶ ಅನಂತ ನಾಯ್ಕ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ (Case Registered). ಲಾರಿ ಚಾಲಕ ಜಾರ್ಖಂಡದ ಹಜಾರಿಬಾಗ್‌ ನಿವಾಸಿ ತೌಹಿದ್‌ ಅನ್ಸಾರಿ ಮೊಹ್ಮದ್‌ ಸಫೀಕ್‌ ಅನ್ಸಾರಿ ಇತರ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವ ರೀತಿಯಲ್ಲಿ ರಸ್ತೆ ಮೇಲೆ ಲಾರಿ ನಿಲ್ಲಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ದೂರಲಾಗಿದೆ. ಹೊನ್ನಾವರದ ಕಡೆ ಮುಖಮಾಡಿ ಲಾರಿ ನಿಲ್ಲಿಸಿಟ್ಟ ವೇಳೆ ಅತಿವೇಗ ಮತ್ತು ದುಡುಕಿನಿಂದ ಬೈಕ್‌ ಚಲಾಯಿಸಿಕೊಂಡು ಬಂದಿದ್ದರಿಂದ ರಸ್ತೆ ಮೇಲೆ ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್‌ ಡಿಕ್ಕಿಯಾಗಿದೆ ಎಂದು ದೂರಿನಲ್ಲಿ (complaint) ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಶುಚಿ ರುಚಿ ವಾಹನಕ್ಕೆ ಚಾಲನೆ