ಕುಮಟಾ (Kumta) : ದಾಂಡೇಲಿ ವಸತಿ ಶಾಖೆಯಲ್ಲಿ ಈಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಸ್ಥಳೀಯ ಪತ್ರಕರ್ತರ (Kumta Journalist) ಜೊತೆ ಅನುಚಿತವಾಗಿ ವರ್ತಿಸಿದ ಅಲ್ಲಿಯ ಸಿ.ಪಿ.ಐ. ಭೀಮಣ್ಣ ಸೂರಿ ನಡೆಯನ್ನು ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾ ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ತಹಶೀಲ್ದಾರ್ ರವಿರಾಜ ದೀಕ್ಷಿತ್ ಅವರಿಗೆ ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ (kumta journalist) ವತಿಯಿಂದ  ಮನವಿ (memorandum) ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಉಪಾಧ್ಯಕ್ಷ ಜಯದೇವ ಬಳಗಂಡಿ, ಕಾರ್ಯದರ್ಶಿ ಗಣೇಶ ಜೋಶಿ, ಸದಸ್ಯರಾದ ಸುಬ್ರಾಯ ಭಟ್, ಶಂಕರ ಶರ್ಮ, ಮಂಜುನಾಥ ದೀವಗಿ, ಸುಧೀರ ಕಡನೀರ್ ಇದ್ದರು.

ಇದನ್ನೂ ಓದಿ : ಕಾಳಿ ಸೇತುವೆಯ ತಡೆಗೋಡೆ ಏರಿಸಲು ಆಗ್ರಹ