ಗೋಕರ್ಣ(Gokarna): ಎಲ್ಲ ಗ್ರಹಗಳಿಂದ ಬರುವ ಎಲ್ಲ ದೋಷಗಳನ್ನು ಒಬ್ಬ ಗುರು ಪರಿಹಾರ ಮಾಡಬಲ್ಲ. ಗುರುದೃಷ್ಟಿ (Guru Drishti) ಮಾತ್ರದಿಂದಲೇ ಎಲ್ಲ ದೋಷಗಳು ಪರಿಹಾರವಾಗಬಲ್ಲವು. ಗುರುವಿನ ಯೋಗ್ಯತೆಯನ್ನು ಜ್ಯೋತಿಷ್ಯ (Astrology) ಉತ್ತಮವಾಗಿ ನಿರೂಪಿಸಿದೆ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾ
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಶೋಕೆಯ ಗುರುದೃಷ್ಟಿಯಲ್ಲಿ (Guru Drishti) ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೪೩ನೇ ದಿನವಾದ ಭಾನುವಾರ ‘ಕಾಲ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ಅನುಗ್ರಹಿಸಿದರು. ಗ್ರಹಗಳ ಬಲ ಹೆಚ್ಚಿದಂತೆ ಫಲ ಹೆಚ್ಚು. ಬಲ ಕಡಿಮೆಯಾದಾಗ ದುಷ್ಫಲಗಳನ್ನು ನೀಡುತ್ತವೆ. ದೋಷವನ್ನು ಪರಿಹರಿಸುವ ವಿಚಾರದಲ್ಲಿ ಗುರುವಿಗೆ ಇರುವ ಬಲ ಇತರ ಯಾವ ಗ್ರಹಗಳಿಗೂ ಇಲ್ಲ. ಬುಧನಿಗೆ ಆ ಶಕ್ತಿಯ ಕಾಲುಭಾಗ ಹಾಗೂ ಶುಕ್ರನಿಗೆ ಅರ್ಧಭಾಗದಷ್ಟಿದೆ ಎಂದು ವಿವರಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : Sunil Naik/ ಸೂತ್ರವಿಲ್ಲದ ಗಾಳಿಪಟದಂತಾಗಿದೆ ಭಟ್ಕಳ ಕ್ಷೇತ್ರ
ಎಷ್ಟೇ ದುರ್ಬಲನಾದರೂ ಗುರು ತನ್ನ ಸ್ವಭಾವವನ್ನು ಬಿಡುವುದಿಲ್ಲ. ಮುಪ್ಪು, ಹಸಿವು, ಆಯಾಸದಿಂದ ಮುದಿಸಿಂಹವೊಂದು ಹೇಗೆ ಒಣ ಹುಲ್ಲನ್ನು ತಿನ್ನುವುದಿಲ್ಲ. ಮದ್ದಾನೆಯ ಕುಂಭಸ್ಥಳ ಸೀಳಿ ಆಹಾರ ಸಂಪಾದಿಸಬೇಕು ಎಂಬ ಯೋಚನೆ ಅದರದ್ದಾಗಿರುತ್ತದೆ. ಅಂತೆಯೇ ಸಂತ ಕೂಡ ಎಂಥದ್ದೇ ಕಷ್ಟಸ್ಥಿತಿಯಲ್ಲೂ ತನ್ನ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ ಎಂದು ಬಣ್ಣಿಸಿದರು.
ಇದನ್ನೂ ಓದಿ : Kumta journalist/ ಪತ್ರಕರ್ತರ ಜೊತೆ ಸಿಪಿಐ ವರ್ತನೆಗೆ ಖಂಡನೆ
ಹನ್ನೆರಡನೇ ಮನೆಯಲ್ಲಿ ಅಥವಾ ಎಂಟನೇ ಮನೆಯಲ್ಲಿ ಗುರು ಇದ್ದರೆ, ಭೌತಿಕ ಬದುಕು ಅಷ್ಟು ಒಳ್ಳೆಯದಲ್ಲದಿರಬಹುದು. ಆದರೆ ಹನ್ನೆರಡನೇ ಮನೆಯ ಗುರು ಮುಕ್ತಿಕಾರಕ. ಹನ್ನೊಂದನೇ ಮನೆಯಲ್ಲಿ ಗುರು ಅತ್ಯಂತ ಉತ್ತಮ ಫಲವನ್ನು ನೀಡುತ್ತಾನೆ. ಆಧ್ಯಾತ್ಮಿಕ, ಪಾರಮಾರ್ಥಿಕ ದೃಷ್ಟಿಯಿಂದ ಹನ್ನೆರಡನೇ ಮನೆಯ ಗುರು ಶ್ರೇಷ್ಠ ಎಂದರು.
ಇದನ್ನೂ ಓದಿ : Complaint/ ಮೃತ ಬೈಕ್ ಸವಾರ ಸಹಿತ ಲಾರಿ ಚಾಲಕನ ವಿರುದ್ಧ ದೂರು
ಶುಕ್ರ ವಿವಾಹಕಾರಕ ಗ್ರಹ. ಅಂತೆಯೇ ಕುಜ ಕೂಡ ವಿವಾಹಕ್ಕೆ ಪ್ರಮುಖ. ಕುಜ ಕಲಹಕಾರಕ. ಆದ್ದರಿಂದ ವಿವಾಹ ಕಾಲದಲ್ಲಿ ಕುಜನ ಸ್ಥಾನವನ್ನು ನೋಡುವುದು ಅಗತ್ಯ. ಜಾತಕದ ಒಂದು, ಎರಡು, ನಾಲ್ಕು, ಏಳು, ಎಂಟು ಮತ್ತು ಹನ್ನೆರಡನೇ ಭಾವದಲ್ಲಿದ್ದಾಗ ಕುಜ ದೋಷಕಾಕರನಾಗುತ್ತಾನೆ. ಶುಕ್ರನಿಂದ ಈ ಸ್ಥಾನಗಳಲ್ಲಿ ಕುಜನಿದ್ದಾಗ ಕೂಡ ದೋಷಕಾರಕ. ದೇಹನಾಶ, ಧನನಾಶ, ಸುಖನಾಶ, ವಿರಹ, ಮರಣ ಮತ್ತು ವ್ಯಯ ಫಲಗಳನ್ನು ನೀಡುತ್ತಾನೆ. ರಾಹು, ಶನಿ ಮತ್ತು ರವಿ ಕೂಡಾ ಇಂಥದ್ದೇ ಕಲಹಕ್ಕೆ ಕಾರಣ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ : Kasapa condemns/ ಪತ್ರಕರ್ತರ ಮೇಲೆ ಅನುಚಿತ ವರ್ತನೆಗೆ ಖಂಡನೆ
ಅಖಿಲ ಹವ್ಯಕ (Havyaka) ಮಹಾಸಭಾ ವತಿಯಿಂದ ನಿರ್ದೇಶಕ ಆರ್.ಜಿ.ಹೆಗಡೆ ಹೊಸಾಕುಳಿ ಭಾನುವಾರ ಸರ್ವಸೇವೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ಭಾರತೀ ಪ್ರಕಾಶನ ಹೊರತಂದಿರುವ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳು, ನಿತ್ಯಾರಾಧನೆ ಮತ್ತು ಶ್ರೀರಾಮ ಕರ್ಣಾಮೃತ ಕೃತಿಗಳನ್ನು ಎಂ.ಆರ್.ಹೆಗಡೆ ಮತ್ತು ಬಿ.ಕೆ.ಹೆಗಡೆ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಭಾರತೀಪ್ರಕಾಶನದ ಜಾಲತಾಣ ಅನಾವರಣವನ್ನು ಶ್ರೀ ಪರಿವಾರದ ಸದಸ್ಯರು ನೆರವೇರಿಸಿದರು. ೨೫ರ ಸಂಭ್ರಮದಲ್ಲಿರುವ ಭಾರತೀಪ್ರಕಾಶನದ ನೂತನ ಲಾಂಛನದ ಅನಾವರಣವೂ ಈ ಸಂದರ್ಭದಲ್ಲಿ ನಡೆಯಿತು.
ಇದನ್ನೂ ಓದಿ : ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣಕ್ಕೆ ಮನವಿ
ಶ್ರೀಮಠದ (Ramachandrapura Math) ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವೀರಾಗ್ರಣಿ ಪ್ರಶಸ್ತಿ