ಕಾರವಾರ (Karwar) : ನಗರದ ನಂದನಗದ್ದಾ ಗಿಂಡಿ ದೇವಸ್ಥಾನದ ಬಳಿ ಜೂಜಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು (Police raid) ಐದು ಜನರನ್ನು ಬಂಧಿಸಿದ್ದಾರೆ (Arrest). ಬಂಧಿತರಿಂದ ೫೧೦೦ ರೂ. ನಗದು ಮತ್ತು ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಓರ್ವ ಪರಾರಿಯಾಗಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆ.೩೧ರ ಸಂಜೆ ೬.೫೫ರ ವೇಳೆಗೆ ಈ ದಾಳಿ ನಡೆದಿದೆ. ಬಂಧಿತರೆಲ್ಲರೂ ಕಾರವಾರ ನಗರದ ನಿವಾಸಿಗಳು. ನಂದನಗದ್ದಾ ಜೋಷಿವಾಡದ ಸಂತೋಷ ಮುಕುಂದ ಪಡಾಲ್ಕರ್ (೪೬), ಕಡವಾಡ ನಂದವಾಳದ ವಿನಾಯಕ ಪಾಡ ನಾಯ್ಕ(೫೨), ನಂದನಗದ್ದಾ ತಾರಿವಾಡದ ಅನಿಲ ರುಮೋ ಗಿರಫ್(೩೬), ನ್ಯೂ ಕೆಎಚ್‌ಬಿ ಕಾಲೋನಿಯ ಉಮೇಶ ಕರ್ಪ ಸ್ವಾಮಿ ನಾಯರ್ (೬೧), ನಂದನಗದ್ದಾದ ಆನಂದು ಶಾನುಬಾಬು ನಾಯ್ಕ (೬೩) ಬಂಧಿತರು (Arrest). ಕಡವಾಡ ಶಿವಾನಂದ ಮಾಂಜ್ರೇಕರ ಪರಾರಿಯಾಗಿದ್ದಾರೆ. ಇವರೆಲ್ಲವರೂ ಗುಂಪಾಗಿ ಕುಳಿತು ಅಂದರ್-ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ ಪೊಲೀಸರು ಪಂಚರೊಂದಿಗೆ ದಾಳಿ ನಡೆಸಿದ್ದಾರೆ. ಪಿಎಸೈ ವಿಶ್ವನಾಥ ಎಂ. ನಿಂಗೊಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).
ಇದನ್ನೂ ಓದಿ : ಜೂಜಾಟ ಅಡ್ಡೆಗೆ ದಾಳಿ; ೯ ಜನರ ಬಂಧನ