ಹೊನ್ನಾವರ (Honnavar) : ಸ್ಕೂಟರ್ಗೆ ಹಿಂಬಂದಿಯಿಂದ ಕಾರು ಡಿಕ್ಕಿಯಾಗಿ (Car collision) ಸ್ಕೂಟರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಕೂಟರ್ ಸವಾರರಾದ ಅಸದ್ ಅಯೂಬ್ ದೊನ್ನ, ರಾಹಿಲಾ ದೊನ್ನ ಮತ್ತು ಇವರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಇವರು ಮಂಕಿಯ ನಾಕುದಾ ಮೊಹಲ್ಲಾ ನಿವಾಸಿಗಳು. ನಿನ್ನೆ ಸೆ. ೨ರಂದು ಸಂಜೆ ೫.೪೫ಕ್ಕೆ ಅಪಘಾತ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರು ಮಂಕಿ ಗಣೇಶನಗರದ ಶಿವಾ ಮೋಟರ್ಸ್ ಎದುರು ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ (Car Collision). ಕಾರು ಚಾಲಕ ಸನ್ನಿ ಆನಂದ ಸಿಂಗ್ ವಿರುದ್ಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).
ಇದನ್ನೂ ಓದಿ : ಬೈಕಿನಲ್ಲಿ ಬಂದು ಅಡಿಕೆ ಕದ್ದೊಯ್ದರು