ಕಾರವಾರ (karwar) : ತಮ್ಮ ವಾರ್ಡಗಳಿಗೆ ಅನುದಾನ ನಿಗದಿಪಡಿಸದೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಾಲಿ ಪಟ್ಟಣ ಪಂಚಾಯತನ (town panchayat) ಮೂವರು ಸದಸ್ಯರು ಜಿಲ್ಲಾಧಿಕಾರಿಗೆ (District Commissioner) ದೂರು ನೀಡಿದ್ದಾರೆ (complaint to DC).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ವಾರ್ಡ್ ನಂ. ೨, ೮ ಮತ್ತು ೯ರ ಸದಸ್ಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಅನುದಾನ ಹಂಚಿಕೆಯ ಕ್ರಿಯಾ ಯೋಜನೆಯನ್ನು ರದ್ದು ಗೊಳಿಸಿ, ಪುನಃ ಕ್ರಿಯಾ ಯೋಜನೆ ತಯಾರಿಸುವಂತೆಯೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ನಿವೃತ್ತರಾದ ಶಿಕ್ಷಕಿಗೆ ಬೀಳ್ಕೊಡುಗೆ

ಹಾಲಿ ಪಟ್ಟಣ ಪಂಚಾಯತದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿ ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿಯೇ ಆಡಳಿತಾಧಿಕಾರಿಗಳಾದ ಭಟ್ಕಳ ತಹಶೀಲ್ದಾರರು ಮತ್ತು ಪಟ್ಟಣ ಪಂಚಾಯತನ ಮುಖ್ಯಾಧಿಕಾರಿಗಳು ತರಾತುರಿಯಲ್ಲಿ ಸರಕಾರದ ೧೫ನೇ ಹಣಕಾಸು ಯೋಜನೆಯಡಿ ೨೦೨೩-೨೪ನೇ ಸಾಲಿನ ೫೦ ಲಕ್ಷ, ೨೦೨೪-೨೫ನೇ ಸಾಲಿನ ೯೦ ಲಕ್ಷ ಮತ್ತು 2024-25 ನೇ ಸಾಲಿನ ಎಸ್.ಎಫ್.ಸಿ.ಮುಕ್ತನಿಧಿ ಅನುದಾನದಲ್ಲಿ ೨೫ ಲಕ್ಷ ರೂ. ಅನುದಾನವನ್ನು ಬಳಕೆ ಮಾಡಿಕೊಂಡು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ದೂರಲಾಗಿದೆ (complaint to DC). ಈ ಎಲ್ಲಾ ಅನುದಾನ ಬಳಕೆ ಮಾಡುವಾಗ ವಾರ್ಡ್ ನಂ. ೨, ೮ ಮತ್ತ ೯ಗಳಿಗೆ ಅನುದಾನ ನಿಗದಿಪಡಿಸದೆ ನಿರ್ಲಕ್ಷ್ಯ ತೋರಿಸಿದ್ದಾರೆ. ಅಲ್ಲದೇ ಆ.೧೭ರಂದು ಕರೆದ ಟೆಂಡರಿನಲ್ಲಿ ಸರಕಾರಿ ರಜಾ ದಿನದಂದು ಅಂದರೆ ಸೆ.೧ರಂದು ಸಂಜೆ ೫ ಗಂಟೆಗೆ ಟೆಂಡರ್ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಅಲ್ಲದೇ ಆ.೨೧ ರಂದು ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಆದ ದಿನದಂದು ಟೆಂಡರ್ ಪ್ರಕಟಣೆ ಕರೆದು, ಅಧ್ಯಕ್ಷರ ಸಹಿ ಪಡೆಯಲಾಗಿದೆ. ಕಾರಣ ಆಡಳಿತ ಕಮಿಟಿಯ ಸಭೆಯನ್ನು ಕರೆಯದೇ ಅಧ್ಯಕ್ಷರ ಒಪ್ಪಿಗೆ ಹೇಗೆ ಪಡೆದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ :  ಕಾರು ಡಿಕ್ಕಿಯಾಗಿ ಸ್ಕೂಟರ್‌ ಮೇಲಿದ್ದ ನಾಲ್ವರಿಗೆ ಗಾಯ

ಜಿಲ್ಲಾಧಿಕಾರಿಯವರು ವಿಶೇಷ ಅಧಿಕಾರ ಬಳಸಿ ಜಾಲಿ ಪಟ್ಟಣ ಪಂಚಾಯತ ಆಡಳಿತಾಧಿಕಾರಿಯಾಗಿದ್ದ ಭಟ್ಕಳ ತಹಶೀಲ್ದಾರ ಹಾಗೂ ಜಾಲಿ ಪಪಂ ಮುಖ್ಯಾಧಿಕಾರಿ ತಯಾರಿಸಿದ ಎಲ್ಲಾ ಕ್ರಿಯಾಯೋಜನೆಗಳನ್ನು ಮತ್ತು ಈ ಕ್ರಿಯಾ ಯೋಜನೆಯಡಿ ಕೈಗೊಂಡ ಟೆಂಡರನ್ನು ರದ್ದುಪಡಿಸಬೇಕು. ಪುನಃ ಕ್ರಿಯಾಯೋಜನೆಯನ್ನು ತಯಾರಿಸಲು ಆದೇಶ ನೀಡಿ ಜಾಲಿ ಪಟ್ಟಣ ವಂಚಾಯತ ವ್ಯಾಪ್ತಿಯ ವಾರ್ಡ ನಂ. ೨, ೮ ಮತ್ತು ೯ನೇ ವಾರ್ಡಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಅನುದಾನ ನಿಗದಿಪಡಿಸಿ ನ್ಯಾಯದೊರಕಿಸಿಕೊಡಬೇಕು ಎಂದು ಸದಸ್ಯರಾದ ಪದ್ಮಾವತಿ ಸುಬ್ರಾಯ ನಾಯ್ಕ, ದಯಾನಂದ ಮಂಜುನಾಥ ನಾಯ್ಕ ಮತ್ತು ಲೀಲಾವತಿ ಗಜಾನನ ಆಚಾರ್ಯ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೈಕಿನಲ್ಲಿ ಬಂದು ಅಡಿಕೆ ಕದ್ದೊಯ್ದರು