ಕಾರವಾರ (Karwar): ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ (police report) ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ ತಾಲೂಕಿನ ಕಿನ್ನರ ಅಂಬೇಜೂಗ ಮೂಲದ, ಹಾಲಿ ಬಾಂಡಿಶಿಟ್ಟಾದಲ್ಲಿ ವಾಸವಾಗಿದ್ದ ಸಂಜನಾ ಗಜಾನನ ತಳೇಕರ (೩೯) ಆತ್ಮಹತ್ಯೆ ಮಾಡಿಕೊಂಡವರು. ಇವರು ಗಂಡ ಗಜಾನನ ತಳೇಕರ ಮತ್ತು ಮಗಳು ಸಾಕ್ಷಿಯೊಂದಿಗೆ ಬಾಂಡಿಶಿಟ್ಟಾದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅನಾರೋಗ್ಯದಿಂದ ಇದ್ದ ಸಂಜನಾ ಅವರಿಗೆ ಗೋವಾ (Goa) ಮತ್ತು ಕಾರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ತಮಗಾದ ಅನಾರೋಗ್ಯದಿಂದ ಬೇಸರದಲ್ಲಿ ಇರುತ್ತಿದ್ದರು.

ಇದನ್ನೂ ಓದಿ : ಆರ್ಥಿಕ ಅರಿವು ಕುರಿತ ಕಾರ್ಯಾಗಾರ

ಸೆ. ೪ರಂದು ಬೆಳಿಗ್ಗೆ ೯ ಗಂಟೆಗೆ ಬಾಡಿಗೆ ಮನೆಯಿಂದ ಮಗಳನ್ನು ಹೆಂಜಾ ನಾಯ್ಕ ವೃತ್ತದ ಬಳಿ ಇರುವ ಕನ್ನಡ ಶಾಲೆಗೆ ಬಿಟ್ಟು ಬಂದಿದ್ದರು. ಆ ನಂತರ ತಮ್ಮ ಸಂಬಂಧಿಕರಿಂದ ಸೀಮೆ ಎಣ್ಣೆ ಕ್ಯಾನ್‌ ಕೊಟ್ಟು ಬರುವುದಾಗಿ ಪಕ್ಕದ ಮನೆಯ ಮಂಗಲಾ ಎಂಬುವವರಿಗೆ ಹೇಳಿ ಹೋಗಿದ್ದರು. ಮಧ್ಯಾಹ್ನ ೧೨ರ ಸುಮಾರಿಗೆ ಶಿರವಾಡದ ದೇವತಿವಾಡಾದಲ್ಲಿ ಗಿಡಗಂಟಿಗಳು ಬೆಳೆದ ಗುಡ್ಡ ಪ್ರದೇಶದಲ್ಲಿ ಸ್ಥಳೀಯರಿಗೆ ಶವ ಕಂಡುಬಂದಿದೆ. ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಸಂಜನಾ ಪತ್ತೆಯಾಗಿದ್ದಾರೆ. ಶವ ನೋಡಿದ ಸ್ಥಳೀಯರಾದ ಮನೋಜ ಮಹಾದೇವ ನಾಯ್ಕ ಶವ ನೋಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಠಕ್ಕೆ ಇದ್ದಂತೆ ಶಿಷ್ಯರಿಗೂ ಚೌಕಟ್ಟು ಅಗತ್ಯ: ಶ್ರೀ

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮೃತರ ಸಹೋದರ, ಹೊಸಾಳಿ ತೊರ್ಲೆಬಾಗ ನಿವಾಸಿ ನಿಲೇಶ ನಾಗೇಶ ಪಡುವಳಕರ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ತಂಗಿಯ ಶವದ ಪರೀಕ್ಷೆ ನಡೆಸಿ, ಸಾವಿನ ನಿಖರ ಕಾರಣ ತಿಳಿಯಬೇಕೆಂದು ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡ (case registered) ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ (police report).

ಇದನ್ನೂ ಓದಿ :  ಶಿವಮೊಗ್ಗದಲ್ಲಿ ಭಟ್ಕಳ ವಿದ್ಯಾರ್ಥಿಗಳ ಸಾಧನೆ