ಕುಮಟಾ(kumta): ವಾಕರಸಾ ಸಂಸ್ಥೆಯ (NWKRTC) ಬಸ್ಸಿಗೆ ಡಿಕ್ಕಿ ಹೊಡೆದು (Accident) ಸೈಕಲ್ ಸವಾರ ಗಾಯಗೊಂಡ (cyclic injured) ಘಟನೆ ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಸೈಕಲ್ ಸವಾರನ ವಿರುದ್ಧ ಬಸ್ ಚಾಲಕ ದೂರು ದಾಖಲಿಸಿದ್ದಾರೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ ತಾಲೂಕಿನ ಹಳಕಾರ ವಿದ್ಯಾನಗರ ನಿವಾಸಿ ರಾಮಕುಮಾರ ಬಿಕಾ (೫೩) ಗಾಯಗೊಂಡ ಸೈಕಲ್ ಸವಾರ. ಇವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ (National highway) ರಾಮಲೀಲಾ ಆಸ್ಪತ್ರೆಯ ಹತ್ತಿರ ಅಪಘಾತ ನಡೆದಿದೆ. ಕುಮಟಾ ಕಡೆಯಿಂದ ದಿವಗಿ ಕಡೆಗೆ ರಸ್ತೆಯ ಬಲಬದಿಯಿಂದ ಹೋಗುತ್ತಿದ್ದ ಸೈಕಲ್ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ
ಭಟ್ಕಳ (Bhatkal) ಘಟಕದ ಬಸ್ ದಿವಗಿ ಕಡೆಯಿಂದ ಕುಮಟಾ ಕಡೆಗೆ ಬರುತ್ತಿತ್ತು. ವಿರುದ್ಧ ದಿಕ್ಕಿನಿಂದ ಸೈಕಲ್ ಬರುತ್ತಿದ್ದುದನ್ನು ಕಂಡ ಬಸ್ ಚಾಲಕ ಬಸ್ಸನ್ನು ಅಲ್ಲಿಯೇ ನಿಲ್ಲಿಸಿದ್ದಾರೆ. ಆದರೂ ಸೈಕಲ್ ಸಮೇತ ಸವಾರ ರಸ್ತೆ ಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದಾನೆ (cyclic injured). ಸೈಕಲ್ ಸವಾರನ ಎಡಬದಿಯ ಎದೆಯ ಮೂಳೆ ಮುರಿದಿದೆ. ಈ ಕುರಿತು ಬಸ್ ಚಾಲಕ, ಬಾಗಲಕೋಟೆ (Bagalkot) ಮೂಲದ ಕಮಲಪ್ಪ ಲಕ್ಷ್ಮಣ ಚಲವಾದಿ(೩೮) ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆರ್ಥಿಕ ಅರಿವು ಕುರಿತ ಕಾರ್ಯಾಗಾರ