ಭಟ್ಕಳ (Bhatkal): ವಿವಿಧ ಬೇಡಿಕೆ (Demand) ಈಡೇರಿಸುವಂತೆ ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕರ ಸಂಘದ ವತಿಯಿಂದ ಹೊನ್ನಾವರದ (Honnavar) ಆರ್‌ಟಿಓ (RTO)ಅಧಿಕಾರಿಗೆ ಮನವಿ (request) ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದಲ್ಲಿ ಸುಮಾರು ೨೫೦ ರಿಂದ ೨೬೦ ಟೂರಿಸ್ಟ್ ಕಾರ್ ವಾಹನಗಳು ಸರಕಾರಕ್ಕೆ ಪ್ರತಿ ತಿಂಗಳು ಟ್ಯಾಕ್ಸ್‌ ಕಟ್ಟುತ್ತಿವೆ. ಚಾಲಕ- ಮಾಲಕರು ಇದೇ ವೃತ್ತಿಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಆದರೆ ಕೆಲವೊಂದು ಖಾಸಗಿ ಕಾರಿನವರು ಮಂಗಳೂರು, ಗೋವಾ ಮುಂತಾದ ಊರುಗಳಿಗೆ ಪ್ರಯಾಣಿಕರನ್ನು ಕೂರಿಸಿಕೊಂಡು ಬಾಡಿಗೆ ಮಾಡುತ್ತಿದ್ದಾರೆ. ಖಾಸಗಿ ಕಾರಿನವರಿಗೆ ತಮ್ಮ ವಾಹನಗಳನ್ನು ಸ್ವಂತಕ್ಕೆ ಬಳಸಲು ಮಾತ್ರ ಅವಕಾಶವಿರುತ್ತದೆ ಬಾಡಿಗೆ ಹೊಡೆಯಲು ಅವಕಾಶವಿರುವುದಿಲ್ಲ. ಅದೇ ರೀತಿ ಕೆಲವೊಂದು ಬಾಡಿಗೆ ರಿಕ್ಷಾದವರು ಸಿಗಂದೂರು(Sigandur), ಕುಂದಾಪುರ(Kundapur), ಕೊಲ್ಲೂರು(Kollur) ಮುಂತಾದ ಊರುಗಳಿಗೆ ಬಾಡಿಗೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಸರಕಾರದವರು ಕೇವಲ ೭ ಕಿ.ಮೀ. ಪರ್ಮಿಟ್‌ ನೀಡಿದ್ದಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳ ದುರ್ಮರಣ

ಈ ೨ ವಿಷಯಗಳನ್ನು ಸಂಘ ಗಂಭೀರವಾಗಿ ಪರಿಗಣಿಸಿದೆ. ನಾವು ನಿಮಗೆ ಖಾಸಗಿ ಕಾರು ಮತ್ತು ರಿಕ್ಷಾ ವಿಚಾರದಲ್ಲಿ ಮಾಹಿತಿ ನೀಡಿದಾಗ ತಕ್ಷಣ ಬಂದು ವಾಹನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.  ಕಳೆದ ೪೫ ವರ್ಷಗಳಿಂದ ಭಟ್ಕಳ ವಾ.ಕ.ರ.ಸಾ. (NWKRTC) ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಬಾಡಿಗೆ ಮಾಡುತ್ತಿರುವ ನಮಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಜಾಗದ ಸಮಸ್ಯೆ ಉಂಟಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ಜಾಗವನ್ನು ಗುರುತಿಸಿ ಪಾರ್ಕಿಂಗ್ ಮಾಡಿ ಬಾಡಿಗೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಇದನ್ನೂ ಓದಿ :  ಬಸ್ಸಿಗೆ ಡಿಕ್ಕಿ ಹೊಡೆದ ಸೈಕಲ್‌ ಸವಾರನ ವಿರುದ್ಧ ದೂರು

ಮನವಿ (Demand) ಸಲ್ಲಿಕೆ ಸಂದರ್ಭದಲ್ಲಿ ಭಟ್ಕಳ ಕಾರು ಚಾಲಕ-ಮಾಲಕರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಉಪಾಧ್ಯಕ್ಷ ಅಬ್ದುಲ ಸಮಿ, ಮುಂತಾದವರು ಉಪಸ್ಥಿತರಿದ್ದರು.