ಭಟ್ಕಳ (Bhatkal): ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪರಿಶ್ರಮ ಸದಾ ಸ್ಮರಣೀಯ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ (Incharge Minister) ಮಂಕಾಳ ವೈದ್ಯ (Mankal Vaidya) ಶಿಕ್ಷಕರ ದಿನಾಚರಣೆಯಲ್ಲಿ (Teacher’s day celebration) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಗುರುವಾರ ಭಟ್ಕಳದ ನ್ಯೂ ಇಂಗ್ಲೀಷ ಸ್ಕೂಲ್‌ನ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ಏರ್ಪಡಿಸಲಾದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ (Teacher’s day celebration) ನಿಮಿತ್ತ ಉತ್ತಮ ಶಿಕ್ಷಕ (best teacher) ಪ್ರಶಸ್ತಿ ಪ್ರದಾನ ಹಾಗೂ ನಿವ್ರತ್ತ ಶಿಕ್ಷಕರಿಗೆ (retired teacher) ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣ, ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಇಂದು ನಾನು ಶಿಕ್ಷಕರ ಮುಂದೆ ನಿಂತು ಮಾತನಾಡಲು, ನನ್ನ ಬೆನ್ನೆಲುಬಾಗಿ ನಿಂತು ಸದಾ ಮಾರ್ಗದರ್ಶನ ನೀಡುತ್ತಿರುವದು ಇದೇ ಶಿಕ್ಷಕ ವೃಂದ ಎಂದರು.

ಇದನ್ನೂ ಓದಿ : ಕವನ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿಕ್ಷಕರು ನವ ಭಾರತದ ಶಿಲ್ಪಿಗಳು. ಎಲ್ಲ ವರ್ಗದ ಜನರು ಇವರಿಂದಲೇ ವಿದ್ಯೆ ಕಲಿತು ಜೀವನದಲ್ಲಿ ಸಾಧನೆಗಳನ್ನು ಮಾಡಿರುವುದು ಮರೆಯುವಂತ್ತಿಲ್ಲ. ಗುರುಗಳಿಗೆ ಸಮಾನವಾದ ವ್ಯಕ್ತಿತ್ವ ಮತ್ತೊಂದು ಇಲ್ಲ. ಶಿಕ್ಷಕ ಹುದ್ದೆ ಅತ್ಯಂತ ಗೌರವ ಹೊಂದಿದ ಹುದ್ದೆಯಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಕರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದರು.

ಇದನ್ನೂ ಓದಿ : ಸೆಪ್ಟೆಂಬರ್‌ ೫ರಂದು ವಿವಿಧೆಡೆ ಅಡಿಕೆ ಧಾರಣೆ

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಬಿಇಒ ವೆಂಕಟೇಶ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ ನಾಗರಾಜ ನಾಯ್ಕಡ, ಭಟ್ಕಳ ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಸಂತ ಶಾಸ್ತ್ರಿ, ಅಧ್ಯಕ್ಷ ಜಾಫರ್ ಸಾದ್ದಿಖ್, ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ, ಭಟ್ಕಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಎಂ. ಟಿ. ಗೌಡ, ನಾಗರಾಜ ಪಟಗಾರ, ಬಿ.ಆರ್.ಸಿ. ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಮುಂತಾದವರಿದ್ದರು.

ಇದನ್ನೂ ಓದಿ : ಬಾಡಿಗೆ ಓಡಿಸುವ ಖಾಸಗಿ ವಾಹನಗಳ ಮೇಲೆ ಕ್ರಮಕ್ಕೆ ಆಗ್ರಹ

ಬಿಇಒ ವೆಂಕಟೇಶ ನಾಯಕ ಸ್ವಾಗತಿಸಿದರು. ಶಿಕ್ಷಕರಾದ ಪರಮೇಶ್ವರ ನಾಯ್ಕ, ಪ್ರತಿಭಾ ಕರ್ಕಿಕರ್ ನಿರೂಪಿಸಿದರು. ಮಂಜುಳಾ ಶಿರೂರಕರ ಸಂಗಡಿಗರು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಭಟ್ಕಳದ ಅರ್ಬನ್ ಬ್ಯಾಂಕ್, ಸಾಲಗದ್ದೆ ಸ್ಪೋರ್ಟ್ಸ ಕ್ಲಬ್, ರಂಜನ್ ಇಂಡೇನ್ ಎಜೆನ್ಸಿ ಹಾಗೂ ದಿ. ಕೆ.ವಿ.ಪ್ರಭು ಸ್ಮರಣಾರ್ಥ ಕೊಡುಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ವಿಡಿಯೋ ಸಹಿತ ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳ ದುರ್ಮರಣ