ಗೋಕರ್ಣ(Gokarna): ಜ್ಯೋತಿಷ್ಯಕ್ಕೆ (astrology) ಹಲವು ಆಯಾಮಗಳಿವೆ. ಖಗೋಳವನ್ನು ವಿಶ್ಲೇಷಿಸುವ ಹಲವು ವಿಧಗಳನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಅಂಥ ಅಪೂರ್ವ ವಿಜ್ಞಾನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಸ್ವಾಮೀಜಿ (Raghaveshwar Shri) ನುಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೪೬ನೇ ದಿನವಾದ ಬುಧವಾರ ಉಪ್ಪಿನಂಗಡಿ ಮಂಡಲದ ಬೆಳ್ಳಾರೆ, ಪಂಜ, ಚೊಕ್ಕಾಡಿ, ಪುತ್ತೂರು, ದರ್ಬೆ, ಬೆಟ್ಟಂಪಾಡಿ ವಲಯಗಳ ಭಕ್ತರ ಸರ್ವಸೇವೆ ಸ್ವೀಕರಿಸಿ, ಕಾಲ ಸರಣಿಯ ಪ್ರವಚನ ಮುಂದುವರಿಸಿದರು. ಭಾರತೀಯ ಕಾಲಗಣನೆಯ ಅಂಶಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಹೀಗೆ ಪ್ರತಿಯೊಂದೂ ನಮ್ಮ ಜೀವನಕ್ಕೆ ಹತ್ತಿರವಾದವುಗಳು. ಪಂಚಾಂಗದ ತಿಥಿ ನಮ್ಮ ಸಂಪತ್ತು, ವಾರ ಆಯಸ್ಸು, ನಕ್ಷತ್ರ ನಮ್ಮ ಶುದ್ಧತೆಯನ್ನು, ಯೋಗ ಆರೋಗ್ಯವನ್ನು ಹಾಗೂ ಕರಣ ಕಾರ್ಯಸಿದ್ಧಿಯನ್ನು ತಿಳಿಸುತ್ತದೆ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ : ಶಿಕ್ಷಕರ ಪರಿಶ್ರಮ ಸ್ಮರಿಸಿದ ಉಸ್ತುವಾರಿ ಸಚಿವ
ತತ್ಕಾಲ ಲಗ್ನ, ಲಗ್ನಾಂಶ, ಚಂದ್ರಾಧಿಷ್ಟಿತ ರಾಶಿ, ಸ್ಥಿತ್ಯಾರೂಢ, ಸ್ಪಷ್ಟಾಂಗ, ಅಕ್ಷರಾರೂಢ, ಕವಡೆ, ಶಿಶುಹಸ್ತ ಹೀಗೆ ಅನೇಕ ವಿಧಾನಗಳಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು ಎಂದು ವಿವರಿಸಿದರು. ಕೇವಲ ಪಂಚಾಂಗದ ಪರಿಜ್ಞಾನದಿಂದಲೇ ಹಲವು ಅಂಶಗಳನ್ನು ಹೇಳಲು ಸಾಧ್ಯವಿದೆ. ಯಾವುದೇ ವ್ಯಕ್ತಿಯ ಪೂರ್ವಜನ್ಮದ ಕರ್ಮಗಳು ಆ ವ್ಯಕ್ತಿಯನ್ನು ನಿರ್ದಿಷ್ಟ ಕಾಲಘಟ್ಟದಲ್ಲಿ ನಮ್ಮೆಡೆಗೆ ಆತನನ್ನು ಕರೆತರುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಕವನ ರಚನಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಭಾರತೀಯರಾಗಿ ಪಂಚಾಂಗದ ಐದು ಅಂಶಗಳ ಕನಿಷ್ಠ ಪರಿಜ್ಞಾನ ಎಲ್ಲರಿಗೂ ಬೇಕು. ತಿಥಿಯ ನಿತ್ಯಾನುಸಂಧಾನ ಇದ್ದರೆ ಐಶ್ವರ್ಯ ಪ್ರಾಪ್ತವಾಗುತ್ತದೆ. ಆಯಸ್ಸು, ಪಾಪ ಪರಿಹಾರ, ಆರೋಗ್ಯ ಮತ್ತು ಕಾರ್ಯಸಿದ್ಧಿ ಇವು ಕ್ರಮವಾಗಿ ವಾರ, ನಕ್ಷತ್ರ, ಯೋಗ, ಕರಣಗಳ ಕಾಲಾನುಸಂಧಾನ ಮಾತ್ರದಿಂದಲೇ ಕಾಲ ನಮ್ಮನ್ನು ಅನುಗ್ರಹಿಸುತ್ತಾನೆ. ಈ ಅಂಶಗಳು ಜೀವನಕ್ಕೆ ಮುಖ್ಯ ಎಂದು ವಿವರಿಸಿದರು.
ಇದನ್ನೂ ಓದಿ :ಸೆಪ್ಟೆಂಬರ್ ೫ರಂದು ವಿವಿಧೆಡೆ ಅಡಿಕೆ ಧಾರಣೆ
ಗ್ರಹಸ್ಥಿತಿಯ ನೆರವು ಇಲ್ಲದೆಯೂ ಜ್ಯೋತಿಷ್ಯದಲ್ಲಿ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು. ಕಾಲ-ದೇಶ ತಿಳಿದುಕೊಂಡರೆ ಬಹುತೇಕ ಅಂಶಗಳು ತಿಳಿಯುತ್ತವೆ. ಯಾವುದೇ ಪ್ರಶ್ನೆ ಅಥವಾ ವಿಷಯಕ್ಕೆ ದೈವಾನುಗ್ರಹ ಇದೆಯೇ ಎಂದು ತಿಳಿದುಕೊಳ್ಳುವುದು ಪ್ರಾಥಮಿಕ ಹಂತ. ಗುರು ಅನುಕೂಲ/ ಪ್ರತಿಕೂಲ ಸ್ಥಿತಿಯಲ್ಲಿದೆಯೇ ಎಂದು ತಿಳಿದುಕೊಳ್ಳುವ ಮೂಲಕ ಇದನ್ನು ಕಂಡುಹಿಡಿಯಬಹುದು. ಗ್ರಹಗತಿಯನ್ನು ನಿಖರವಾಗಿ ಅಧ್ಯಯನ ಮಾಡಬೇಕು. ಪ್ರಶ್ನೆ ಕೇಳುವ ವ್ಯಕ್ತಿ ಯಾವ ದಿಕ್ಕಿನಲ್ಲಿ ನಿಂತಿದ್ದಾನೆ ಎನ್ನುವುದರ ಆಧಾರದಲ್ಲಿ ಭವಿಷ್ಯ ಹೇಳಬಹುದು. ದಿಕ್ಕಿನಲ್ಲಿ ನಿಂತು ಪ್ರಶ್ನೆ ಕೇಳಿದರೆ ಪುರುಷರಿಗೆ ಶುಭ, ಮಹಿಳೆಯರಿಗ ಅಶುಭ. ವಿದಿಕ್ಕಿನಲ್ಲಿ ಕೇಳಿದರೆ ಪುರುಷರಿಗೆ ಅಶುಭ ಹಾಗೂ ಸ್ತ್ರೀಯರಿಗೆ ಶುಭ ಎಂದು ತಿಳಿಸಿದರು.
ಇದನ್ನೂ ಓದಿ : ಬಾಡಿಗೆ ಓಡಿಸುವ ಖಾಸಗಿ ವಾಹನಗಳ ಮೇಲೆ ಕ್ರಮಕ್ಕೆ ಆಗ್ರಹ
ಆರು ವಲಯಗಳ ಶಿಷ್ಯಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, “ಮಠ ನಮಗೆಲ್ಲ ಆಶ್ರಯ ವೃಕ್ಷವಿದ್ದಂತೆ. ಅದು ಹೂವು ಮತ್ತು ಫಲವನ್ನೂ ನೀಡುವಂಥದ್ದು. ಮಠವೆನ್ನುವುದು ಎಲ್ಲ ಶಿಷ್ಯಭಕ್ತರನ್ನು ಸಂಸಾರ ತಾಪದಿಂದ ಕಾಪಾಡುವಂಥದ್ದು. ಸೇವೆಗೆ ಅದ್ಭುತ ಫಲ ಇದೆ. ಮಠ ಸಮಾಜದ ಪಾಪವನ್ನು ಪರಿಹರಿಸಿ ಪವಿತ್ರಗೊಳಿಸುತ್ತದೆ. ನಾವು ಒಂದು ಸಮರ್ಪಣೆ ಮಾಡುವಾಗ ಅದು ಸಂಪತ್ತಾಗಿರುತ್ತದೆ. ಆದರೆ ಮಠದಿಂದ ಅದು ಮರಳಿ ಸಮಾಜಕ್ಕೆ ಹೋಗುವಾಗ ಪ್ರಸಾದವಾಗುತ್ತದೆ. ಅದಕ್ಕೆ ಅದ್ಭುತ ಶಕ್ತಿ ಇರುತ್ತದೆ. ಶ್ರೀಮಠವೆಂಬ ಅನಘ್ರ್ಯರತ್ನವನ್ನು ಕಾಪಾಡಿಕೊಳ್ಳಲು ಸಮಸ್ತ ಶಿಷ್ಯಭಕ್ತರು ಬದ್ಧರಾಗಬೇಕು ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳ ದುರ್ಮರಣ
ತಿಥಿ ಅಂದರೆ ಸೂರ್ಯ-ಚಂದ್ರರ ಅಂತರ. ಅಮಾವಾಸ್ಯೆ ದಿನ ಸೂರ್ಯ ಚಂದ್ರರು ಜತೆಗಿರುತ್ತಾರೆ. ಹನ್ನೆರಡು ಡಿಗ್ರಿ ಅಂತರವನ್ನು ತಿಥಿ ಎಂದು ಕರೆಯುತ್ತೇವೆ. ಶುಕ್ಲ ಪಕ್ಷದಲ್ಲಿ ಸೂರ್ಯಚಂದ್ರರು ದೂರವಾಗುತ್ತಾ ಹೋದರೆ ಕೃಷ್ಣಪಕ್ಷದಲ್ಲಿ ಹತ್ತಿರವಾಗುತ್ತಾ ಹೋಗುತ್ತಾರೆ. ಇದು ಸಂಪೂರ್ಣ ಖಗೋಳ ಶಾಸ್ತ್ರ ಆಧರಿತ. ಚಂದ್ರ ಯಾವ ನಕ್ಷತ್ರಪುಂಜದ ನೇರದಲ್ಲಿ ಇದ್ದಾನೆ ಎನ್ನುವುದು ಆಯಾ ದಿನದ ನಕ್ಷತ್ರವನ್ನು ಸೂಚಿಸುತ್ತದೆ. ಹೀಗೆ ಪ್ರತಿಯೊಂದಕ್ಕೂ ವೈಜ್ಞಾನಿಕ ಆಧಾರವಿದೆ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ : ಬಸ್ಸಿಗೆ ಡಿಕ್ಕಿ ಹೊಡೆದ ಸೈಕಲ್ ಸವಾರನ ವಿರುದ್ಧ ದೂರು
ಇಂದು ಅಪರೂಪದ ಮಳೆತಜ್ಞರೊಬ್ಬರ ಸಾಧನೆಗಳ ಅನಾವರಣ ನಡೆದಿದೆ. ಅವರ ಪ್ರಕೃತಿ ವೀಕ್ಷಣೆಯ ಪರಿ ಅನನ್ಯ. ಸೂಕ್ಷ್ಮ ವಿಷಯವನ್ನು ಗಮನಿಸುವುದು ಅಗತ್ಯ. ಪ್ರಕೃತಿ ನಮ್ಮ ಮುಂದೆ ತೆರೆದಿಡುವ ಸತ್ಯವನ್ನು ನೋಡುವ ಕಣ್ಣುಗಳು ನಮ್ಮದಾಗಬೇಕು. ೧೮ ಸಾವಿರ ದಿನಗಳ ಮಳೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ ಇಟ್ಟಿರುವ ಸತ್ಯನಾರಾಯಣ ಪ್ರಸಾದರ ಸಾಧನೆ ಅಮೋಘ. ಇಂಥ ಅನಾವರಣ ಅತ್ಯಂತ ಅರ್ಥಪೂರ್ಣ ಎಂದು ಹೇಳಿದರು.
ಇದನ್ನೂ ಓದಿ : ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ
18 ಸಾವಿರ ದಿನಗಳಿಂದ ಮಳೆ ಅಂಕಿ ಅಂಶಗಳ ದಾಖಲಾತಿ ಮಾಡುತ್ತಾ ಬಂದಿರುವ ಮಳೆತಜ್ಞ ಸತ್ಯನಾರಾಯಣ ಪ್ರಸಾದ್ ಅವರ ಸಾಧನೆಯ ಅನಾವರಣವನ್ನು ಸಮಾಜದ ಹಿರಿಯರಾದ ಆನೇಕಾರ ಗಣಪಯ್ಯ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು. ಲೋಹಿತ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ : ಮಠಕ್ಕೆ ಇದ್ದಂತೆ ಶಿಷ್ಯರಿಗೂ ಚೌಕಟ್ಟು ಅಗತ್ಯ: ಶ್ರೀ