ಭಟ್ಕಳ(Bhatkal): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಶಾಖೆ ವತಿಯಿಂದ ಭಟ್ಕಳ ಸರಕಾರಿ ಆಸ್ಪತ್ರೆಯ (Gvoernment hospital) ರೋಗಿಗಳಿಗೆ ಅನುಕೂಲವಾಗುವಂತಹ ೫೬ ಸಾವಿರ ರೂಪಾಯಿ ಮೊತ್ತದ ಏರ್ಪೋರ್ಟ್ ಕುರ್ಚಿಯನ್ನು ತಾಲೂಕು ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಹಸ್ತಾಂತರಿಸಿದರು(handed over).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಡಾ.ಸವಿತಾ ಕಾಮತ ಮಾತನಾಡಿ, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದ ಬಗ್ಗೆ ಶ್ಲಾಘಿಸಿ ಅಭಿನಂದಿಸಿದರು. ಈ ಹಿಂದೆ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಶಾಖೆಯು ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಬ್ಯಾಗ್ ವಿತರಿಸಿದ್ದರು. ಗೋಶಾಲೆಗಳಿಗೆ, ರೋಗಿಗಳಿಗೆ, ವಿವಿಧ ಸಂಘ-ಸಂಸ್ಥೆಗಳಿಗೆ ,ವಿವಿಧ ಕಾರ್ಯಕ್ರಮಗಳಿಗೆ ಧನಸಹಾಯ ಮಾಡಿದ್ದರು ಎಂದು ನೆನಪಿಸಿಕೊಂಡರು.

ಇದನ್ನೂ ಓದಿ : ಶ್ರೀ ಗಣೇಶನಿಗೆ ಸಂಭ್ರಮದ ಸ್ವಾಗತ

ಹಸ್ತಾಂತರ (handed over) ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಕಾರ್ಯದರ್ಶಿ ಗಣೇಶ ಹೆಗಡೆ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ಪಿಯು ಕಾಲೇಜಿನ ಉಪನ್ಯಾಸಕ ಮಂಜುನಾಥ ನಾಯ್ಕ, ಸಂಘದ ನಿರ್ದೇಶಕರಾದ ಗಣಪತಿ ಭಟ್, ಕೇಶವ ಮೊಗೇರ ವೈದ್ಯ, ಸತೀಶ್. ಬಿ. ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಸುಧಾಕರ್ ನಾಯ್ಕ ಮಣ್ಕುಳಿ, ನಜೀರ ಕಾಸಿಂಜೀ, ಇತರರು ಹಾಜರಿದ್ದರು.

ಇದನ್ನೂ ಓದಿ : ಭಗವಂತ- ಭಕ್ತರ ನಡುವಿನ ಸಂಬಂಧಸೇತು ಗುರು: ರಾಘವೇಶ್ವರ ಶ್ರೀ