ಭಟ್ಕಳ(Bhatkal): ಈ ಬಾರಿ ತೀವ್ರ ಮತ್ಸ್ಯಕ್ಷಾಮ ಉಂಟಾದ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಿಸಲು ತೆರಳಿದ ಮೀನುಗಾರಿಕೆ (fisheries minister) ಸಚಿವ ಮಂಕಾಳ ವೈದ್ಯ (Mankal Vaidya) ತಾವೇ ಖುದ್ದು ತಾವೇ ಬೋಟ್ ಚಲಾಯಿಸಿಕೊಂಡು (Minister boating) ಸಮುದ್ರಕ್ಕೆ ಬಾಗಿನ ಅರ್ಪಿಸುವ ಮೂಲಕ ಗಮನ ಸೆಳೆದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕರಾವಳಿಯ ಉತ್ತರ ಕನ್ನಡ (Uttara Kannada), ಉಡುಪಿ (Udupi), ಮಂಗಳೂರು (Mangaluru) ಭಾಗದಲ್ಲಿ ತೀವ್ರ ಮತ್ಸ್ಯಕ್ಷಾಮ ಉಂಟಾಗಿದೆ. ಮೀನುಗಾರರು ಮೀನುಗಾರಿಕೆಯಲ್ಲಿ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ಮೀನುಗಾರರ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದರು. ಮೀನುಗಾರಿಕಾ ಉದ್ಯಮ ಉನ್ನತ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ :  ಸರ್ಕಾರಿ ಆಸ್ಪತ್ರೆಗೆ ಏರ್ಪೋರ್ಟ್‌ ಕುರ್ಚಿ ಹಸ್ತಾಂತರ

ಬಳಿಕ ಬಾಗಿನ ಅರ್ಪಿಸಲು ಅಳ್ವೆಕೋಡಿ ಬಂದರಿಗೆ ತೆರಳಿದರು. ಖುದ್ದು ತಾವೇ ಬೋಟ್ ಚಲಾಯಿಸಿದ ಸಚಿವರು (Minister Boating), ಸಮುದ್ರಕ್ಕೆ ಬಾಗಿನ ಅರ್ಪಿಸುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಮೀನುಗಾರ ಮುಖಂಡರು, ಸ್ಥಳೀಯ ಮೀನುಗಾರರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಶ್ರೀ ಗಣೇಶನಿಗೆ ಸಂಭ್ರಮದ ಸ್ವಾಗತ