ಭಟ್ಕಳ (Bhatkal): ಮೀನುಗಾರಿಕೆಗೆ (fishing) ತೆರಳಿದ್ದ ಮೀನುಗಾರನೋರ್ವ ದೋಣಿ (fishing boat) ಪಲ್ಟಿಯಾದ ಪರಿಣಾಮ ಸಾವನ್ನಪ್ಪಿದ (fisherman dies) ಘಟನೆ ಮುರುಡೇಶ್ವರದಲ್ಲಿ(Murudeshwar) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತ ಮೀನುಗಾರನನ್ನು ಮುರ್ಡೇಶ್ವರದ (Murdeshwar) ಮಾವಳ್ಳಿ ನಿವಾಸಿ ಹೈದರ್ ಅಲಿ ಎಂದು ತಿಳಿದು ಬಂದಿದೆ. ಇವರು ಇಂದು ಗುರುವಾರ ಬೆಳಗಿನ ಜಾವ ೬.೩೦ಕ್ಕೆ ಅರಬ್ಬಿ ಸಮುದ್ರದಲ್ಲಿ (Arabian sea) ಮೀನುಗಾರಿಕೆಗೆ ತೆರಳಿದ್ದರು. ಮೀನು ಬಲೆ ಹಾಕಿ ಮರಳಿ ವಾಪಸ್ ಬರುವಾಗ ಸಮುದ್ರದ ಅಲೆ ಬೋಟ್ಗೆ ಅಪ್ಪಳಿಸಿದೆ. ಬೊಟ್ ಪಲ್ಟಿಯಾಗಿ ನೀರಿನಲ್ಲಿ ಮುಳುಗಿದ್ದರಿಂದ ಬೋಟ್ನಲ್ಲಿ ಇದ್ದ ಎಲ್ಲರೂ ನೀರಿನಲ್ಲಿ ಬಿದ್ದಿದ್ದಾರೆ. ಅವರ ಪೈಕಿ ಹೈದರ ಅಲಿ ನೀರು ಕುಡಿದು ಸಮುದ್ರದಲ್ಲಿ ಮುಳುಗಿದ್ದರು. ಅವರನ್ನು ಹುಡುಕಾಡಿ ಮೇಲೆ ತಂದು ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ (RNS Hospital) ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು (fisherman dies). ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).
ಇದನ್ನೂ ಓದಿ : ಸೆಪ್ಟೆಂಬರ್ ೧೨ರಂದು ವಿವಿಧೆಡೆ ಅಡಿಕೆ ಧಾರಣೆ