ಭಟ್ಕಳ (Bhatkal): ಗಣೇಶೋತ್ಸವದ (Ganeshotsava) ವಿಸರ್ಜನಾ ಮೆರವಣೆಯಲ್ಲಿ ಪಾಲ್ಗೊಂಡ ವ್ಯಕ್ತಿಯೋರ್ವ ಅಕಸ್ಮಾತ್ ಅಸ್ವಸ್ಥರಾಗಿ ಸಾವನ್ನಪ್ಪಿರುವ (died) ಘಟನೆ ಚೌತನಿ ರಸ್ತೆಯ ಸದಾಪ್ ಕೊಲ್ಡಡ್ರಿಂಕ್ಸ್ ಸಮೀಪ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೂಲತಃ ಮಣ್ಕುಳಿ ವಿ.ವಿ.ರಸ್ತೆಯ ೧ನೇ ಕ್ರಾಸ್ ನಿವಾಸಿಯಾಗಿದ್ದ ಮಾರುತಿ ಚೌಡಯ್ಯ ದೇವಾಡಿಗ (62) ಮೃತ ದುರ್ದೈವಿ. ಇವರು ಜನತಾ ಬ್ಯಾಂಕ್ ನಿವೃತ್ತ ನೌಕರರು. ಸದ್ಯ ಮಾವಿನ ಕಟ್ಟೆ ಬೆಂಗ್ರೆಯಲ್ಲಿ ವಾಸವಾಗಿದ್ದರು.

ಇದನ್ನೂ ಓದಿ : ಸೆ.೨೦ರಿಂದ ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆಗಾಗಿ ಅಹೋರಾತ್ರಿ ಧರಣಿ

ಭಟ್ಕಳ ತಾಲೂಕಿನಾದ್ಯಂತ ೫ ದಿನಗಳ ಕಾಲ ಪ್ರತಿಷ್ಠಾಪನೆಗೊಂಡ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬುಧವಾರ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಇವರು ಪಾಲ್ಗೊಂಡಿದ್ದರು. ಸದಾಫ್ ಕೋಲ್ಡ್‌ ಡ್ರಿಂಕ್ಸ್ ಬಳಿ ಆಕಸ್ಮಾತ ಅಸ್ವಸ್ಥರಾಗಿ ಸ್ಥಳದಲ್ಲಿ ಕುಸಿದು ಬಿದ್ದರು. ಅವರನ್ನು ಹೆಚ್ಚಿನ ಉಪಚಾರಕ್ಕೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಪೂರ್ವದಲ್ಲಿ ಸಾವನ್ನಪ್ಪಿದ್ದಾರೆ (Died). ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case registered).

ಇದನ್ನೂ ಓದಿ :  ಬೋಟ್‌ ಪಲ್ಟಿಯಾಗಿ ಮೀನುಗಾರ ಸಾವು