ಭಟ್ಕಳ(Bhatkal): ಅಟಲ್ ಟಿಂಕರಿಂಗ್ ಲ್ಯಾಬ್ಸ್‌ (Atal tinkering labs) ಮ್ಯಾರಥಾನ್ ವಿದ್ಯಾರ್ಥಿ ಇನ್ನೋವೇಶನ್ ಇಂಟರ್ನಶಿಪ್‌ಗೆ (innovation internship) ಭಟ್ಕಳ ಮೂಲದ ನಿತ್ಯಾನ್ವಿತಾ ಪುರಾಣಿಕ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿತ್ಯಾನ್ವಿತಾ ಪುರಾಣಿಕ ಭಟ್ಕಳದ ನರಸಿಂಹಮೂರ್ತಿ ಪುರಾಣಿಕ, ನಿಶ್ಚಿತಾ ಪುರಾಣಿಕ ದಂಪತಿಯ ಪುತ್ರಿ. ಬೆಂಗಳೂರಿನ ನಿಟ್ಟೆ ಇಂಟರ್‌ನ್ಯಾಶನಲ್ ಸ್ಕೂಲಿನಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ದೇಶದಾದ್ಯಂತ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ನಡೆಸಿರುವ ಎಟಿಎಲ್ ಮ್ಯಾರಥಾನ್ ೨೦೨೩-೨೦೨೪ ಇದರಲ್ಲಿ ಭಾಗವಹಿಸಿದ್ದಳು. ದೇಶದಾದ್ಯಂತದಿಂದ ಸುಮಾರು ೨೦ ಸಾವಿರ ಮಾದರಿಗಳ ಪೈಕಿ ಈಕೆ ಸಲ್ಲಿಸಿರುವ ಮೂಲಮಾದರಿ (prototype) ನಾವಿನ್ಯತೆ ತಾಂತ್ರಿಕ ಮಾದರಿ (innovated technical prototype) ಅಗ್ರ ೫೦೦ರಲ್ಲಿ ಆಯ್ಕೆಯಾಗಿದೆ. ಈ ಮೂಲಕ ದೇಶದ ಪ್ರಮುಖ ಕಂಪೆನಿಗಳಲ್ಲಿ ವಿದ್ಯಾರ್ಥಿ ಇನ್ನೋವೇಶನ್ ಇಂಟರ್ನಶಿಪ್‌ಗೆ (innovation internship) ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.

ಇದನ್ನೂ ಓದಿ : ಈ ಗಣೇಶೋತ್ಸವಕ್ಕೆ ಮುಸ್ಲಿಂ ಮಹಿಳೆ ನೇತೃತ್ವ !