ಬೆಂಗಳೂರು (Bengaluru): ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ನಿರ್ಮಿಸಿದ ಎ ಆರ್ ಎಂ ಸಿನಿಮಾ (ARM movie) ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿಡುಗಡೆಯಾಗಿ ೪ ದಿನಕ್ಕೆ ೫೪ ಕೋಟಿ ಕಲೆಕ್ಷನ್ ಆಗಿದೆ. ನೂರು ಕೋಟಿ ಕಲೆಕ್ಷನ್ ನತ್ತ ಮುನ್ನುಗುತ್ತದೆ ಎಂದು ಚಿತ್ರತಂಡ ಹೇಳಿದೆ. ಬುಕ್ ಮೈ ಶೋನಲ್ಲಿ (book my show) ೨೪ ಗಂಟೆಗಳಲ್ಲಿ ೧.೫೨ ಲಕ್ಷ ಟಿಕೆಟ್ ಬುಕ್ ಆಗಿದೆ. ಭಾರತದಲ್ಲಿ ಗೋಟ್ (Goat) ಮತ್ತು ಸ್ತ್ರೀ ಚಿತ್ರಗಳಿಗಿಂತಲೂ ಹೆಚ್ಚು ಬುಕ್ ಆದ ಮೊದಲ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ವಿಡಿಯೋ ಸಹಿತ ಇದನ್ನೂ ಓದಿ :  ಭಗವದ್ಗೀತಾ ಕಂಠಪಾಠ ಸ್ಪರ್ಧೆ-೨೦೨೪ ಉದ್ಘಾಟನೆ

ಇದೇ ಚಿತ್ರವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ (hombale films) ಸಂಸ್ಥೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಪುಲ್ ಕಲೆಕ್ಷನ್ ಕಾಣುತ್ತಿದೆ. ಈ ಚಿತ್ರದಲ್ಲಿ ನಟ ಟೊವಿನೋ ಥಾಮಸ್‌ (Tovino Thomas) ಮೂರು ಶೇಡ್‌ಗಳಲ್ಲಿ ಅಭಿನಯಿಸಿದ್ದಾರೆ. ತಮಿಳು (Tamil), ತೆಲುಗು (Telugu) ಮತ್ತು ಮಲಯಾಳಂ (Malayalam) ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿಯರಾದ ಕೃತಿ ಶೆಟ್ಟಿ (Krithi Shetty), ಐಶ್ವರ್ಯ ರಾಜೇಶ್ (Aishwarya Rajesh) ಮತ್ತು ಸುರಭಿ ಲಕ್ಷ್ಮಿ (Surabhi Lakshmi) ಎಆರ್‌ಎಂ ಸಿನಿಮಾದಲ್ಲಿ (ARM Movie) ಇದ್ದಾರೆ .

ವಿಡಿಯೋ ಸಹಿತ ಇದನ್ನೂ ಓದಿ : ವಿಶೇಷ ಶಾಲೆಗೆ SKDRP ಅನುದಾನ ಮಂಜೂರು

ಚಿತ್ರದ ಸುತ್ತಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯೋರ್ವರು ಕಥೆಯನ್ನು ವಿವರಿಸುತ್ತಾರೆ. ಹಿಂಸಾಚಾರ ಮತ್ತು ನಾಯಕನ ಪ್ರವೇಶವನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಎಆರ್​​ಎಂ ಭರ್ಜರಿ ಆ್ಯಕ್ಷನ್​ ಸೀನ್​ಗಳೊಂದಿಗೆ ಅದ್ಭುತ ಸಿನಿಮೀಯ ಅನುಭವ ಇದೆ.

ಇದನ್ನೂ ಓದಿ : ರಾಮಚಂದ್ರಾಪುರ ಮಠ- ಗೋಕರ್ಣ ದೇಗುಲ ಒಂದೇ ನಾಣ್ಯದ ಎರಡು ಮುಖಗಳು

ಉತ್ತರ ಕೇರಳದ (Kerala) ವಿವಿಧ ಸಮಯಾವಧಿಯಲ್ಲಿನ (೧೯೦೦, ೧೯೫೦ ಮತ್ತು ೧೯೯೦) ನಿರೂಪಣೆಗಳನ್ನು ಒಳಗೊಂಡಿದೆ. ಟೊವಿನೋ ಥಾಮಸ್​​​ ಮೂರು ವಿಭಿನ್ನ ಪಾತ್ರಗಳನ್ನು ಅಭಿನಯಿಸಿದ್ದಾರೆ. ಮಣಿಯನ್, ಕುಂಜಿಕ್ಕೆಲು ಮತ್ತು ಅಜಯನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭೂಮಿಯ ಸಂಪತ್ತನ್ನು ರಕ್ಷಿಸುವ ಹೋರಾಟವಿದೆ. ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಒಂದು ಬಲವಾದ ಕಥೆಯೊಂದಿಗೆ ದೃಶ್ಯ ಚಮತ್ಕಾರವಿರಲಿದೆ ಎಂಬ ಭರವಸೆ ನೀಡಿದೆ.

ಇದನ್ನೂ ಓದಿ : human chain/ ಮಳೆಯಲ್ಲೇ ನಿಂತ ಶಾಲಾ ಮಕ್ಕಳು

ಎಆರ್​​ಎಂ​​ ಟೊವಿನೋ ಥಾಮಸ್ ಅವರ ೫೦ನೇ ಚಿತ್ರ. ಟ್ರೇಲರ್​ನಿಂದ ಸಾಕಷ್ಟು ಕುತೂಹಲ ಹುಟ್ಟಿಸಿದೆ‌. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‌ ನಿರ್ವಹಿಸಲು ನಟ ಕಳರಿಪಯಟ್ಟುವಿನ ವ್ಯಾಪಕ ತರಬೇತಿ ಪಡೆದಿದ್ದರು. ಕಾಂತಾರ (Kantara) ಖ್ಯಾತಿಯ ವಿಕ್ರಮ್ ಮೂರ್ ಮತ್ತು ಫೀನಿಕ್ಸ್ ಪ್ರಭು ಸ್ಟಂಟ್ಸ್ ಸಂಯೋಜಿಸಿದ್ದಾರೆ.

ಇದನ್ನೂ ಓದಿ : ಕಾಮುಕ ಶಿಕ್ಷಕ ಸಾದಿಕ್‌ ಅಮಾನತು