ಶಿರಸಿ (Sirsi) : ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಬೈಕ್‌ ಚಲಾಯಿಸಿದ್ದರಿಂದ ಬೈಕ್‌ ಸಹಿತ ಸವಾರ ಸೇತುವೆಯಿಂದ ನದಿಗೆ ಬಿದ್ದು ಮೃತಪಟ್ಟಿದ್ದಾನೆ. ಶಿರಸಿ ತಾಲೂಕಿನ ಬುಗುಡಿಕೊಪ್ಪದ ಶ್ರೀ ಭೂತೇಶ್ವರ ದೇವಸ್ಥಾನದ ಹತ್ತಿರ ಬನವಾಸಿ (Banavasi) ಪೊಲೀಸ್‌ ಠಾಣೆ ವ್ಯಾಪ್ತಿಯ ಶಿರಸಿ-ಹಾವೇರಿ ರಸ್ತೆಯಲ್ಲಿ ಸೆ. ೧೬ರಂದು ಮಧ್ಯಾಹ್ನ ೧.೪೫ರ ಸುಮಾರಿಗೆ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೊಲ್ಲಾಪುರ (Kolhapur) ಶಿರೋಲ್‌ ನಿವಾಸಿ ಅವಿನಾಶ ಬಾಲಸೋ ಖೋತ (೩೩) ಮೃತ ಯುವಕ. ಶಿರಸಿಯಿಂದ ಹಾವೇರಿ (Haveri) ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ಶ್ರೀ ಭೂತೇಶ್ವರ ದೇವಸ್ಥಾನದ ಬಳಿಯ ಧರ್ಮಾ ನದಿಗೆ (Dharma River) ಯುವಕ ಬೈಕ್‌ ಸಹಿತ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಧಾವಿಸಿ, ವ್ಯಕ್ತಿಯನ್ನು ಉಪಚರಿಸಲು ಮುಂದಾಗಿದ್ದಾರೆ. ಆದರೆ ಯುವಕ ಅದಾಗಲೇ ಮೃತಪಟ್ಟಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವಕನ ಪ್ಯಾಂಟ್‌ ಕಿಸೆಯಲ್ಲಿದ್ದ ಗುರುತಿನ ಚೀಟಿಯಿಂದ ಆತನ ಗುರುತು ಪತ್ತೆಯಾಗಿದೆ. ಬನವಾಸಿ (Banavasi) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ರೈಲಿಗೆ ಸಿಲುಕಿ ಯುವಕನೋರ್ವ ಸಾವು