ಬೆಂಗಳೂರು (Bengaluru) : A.R.M. 3D ವಿಶ್ವದಾದ್ಯಂತ  ಯಶಸ್ವಿಯಾಗಿ ಓಡುತ್ತಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಕೇವಲ ಐದು ದಿನಗಳಲ್ಲಿ, ಎ.ಆರ್.ಎಂ. ಸಿನೆಮಾ (ARM Cinema) ಪ್ರಪಂಚದಾದ್ಯಂತ 50 ಕೋಟಿ ರೂ.ಗೂ ಹೆಚ್ಚು ಬಾಚುವಲ್ಲಿ ಯಶಸ್ವಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎ.ಆರ್.ಎಂ. (ARM Cinema) ಮೂಲಕ ಟೊವಿನೋ ಥಾಮಸ್ (Tovino Thomas) ದೊಡ್ಡ ಯಶೋಗಾಥೆ ಬರೆಯುತ್ತಿದ್ದಾರೆ. ಚಿತ್ರಕ್ಕೆ ಭಾರತ (India) ಮಾತ್ರವಲ್ಲದೆ ವಿದೇಶಗಳಿಂದಲೂ ಉತ್ತಮ ಕಲೆಕ್ಷನ್ ಬರುತ್ತಿದೆ.

ಇದನ್ನೂ ಓದಿ : ಮೂವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಮಲಯಾಳಿ (Malayalam) ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಈ 3ಡಿ ಚಿತ್ರವನ್ನು ಓಣಂ (Onam) ಸೀಸನ್‌ನಲ್ಲಿ ಪ್ರೇಕ್ಷಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಯೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಬೇಟೆ ಮುಂದುವರಿಸಿದೆ. ‘ಇದೊಂದು ವಿಶ್ವದರ್ಜೆಯ 3ಡಿ ಅನುಭವ’ ಎಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದಾರೆ.

ಇದನ್ನೂ ಓದಿ : ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮೂವರಿಗೆ ಚೂರಿ ಇರಿತ

ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಬಜೆಟ್‌ ಸಿನಿಮಾ ಎನ್ನಲಾದ ಟೋವಿನೋ ಥಾಮಸ್‌ ನಟನೆಯ ಎಆರ್‌ಎಂ ಸಿನಿಮಾ. ಮಲಯಾಳಂ ಚಿತ್ರರಂಗದಲ್ಲಿ ಹೀರೋಗಿರಿಯ ಸಿನಿಮಾಗಳಿಗೆ ಕಟ್ಟು ಬೀಳದೆ ತಮ್ಮದೇ ಆದ ಮಾದರಿಯಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟ ಟೋವಿನೊ ಥಾಮಸ್, ಒಂದರ ಮೇಲೊಂದು ಹಿಟ್ ಸಿನಿಮಾ ನೀಡುವ ಜೊತೆಗೆ ಅಭಿಮಾನಿಗಳನ್ನೂ ಸಹ ಸಂಪಾದಿಸುತ್ತಿದ್ದಾರೆ.

ಇದನ್ನೂ‌ ಓದಿ : ನರೇಂದ್ರ ಮೋದಿ ಜನ್ಮದಿನ‌ ನಿಮಿತ್ತ ಬಿಜೆಪಿಯಿಂದ‌ ಪೂಜೆ

ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರವನ್ನು ಮ್ಯಾಜಿಕ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಂ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಡಾ. ಜಕಾರಿಯಾ ಥಾಮಸ್ ನಿರ್ಮಿಸಿದ್ದಾರೆ. ಚಿತ್ರವನ್ನು ಜಿತಿನ್ ಲಾಲ್ (Jithin Lal) ನಿರ್ದೇಶಿಸಿದ್ದಾರೆ. ಸುಜಿತ್ ನಂಬಿಯಾರ್ ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ : ಭಟ್ಕಳ ತಾಲೂಕಿನೆಲ್ಲೆಡೆ ಅನಂತ ಚತುರ್ದಶಿ ವ್ರತಾಚರಣೆ

ಕೃತಿ ಶೆಟ್ಟಿ (Krithi Shetty), ಐಶ್ವರ್ಯ ರಾಜೇಶ್ (Aishwarya Rajesh) ಮತ್ತು ಸುರಭಿ ಲಕ್ಷ್ಮಿ (Surabhi Lekshmi) ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.  ಬಾಸಿಲ್ ಜೋಸೆಫ್, ಜಗದೀಶ್, ಹರೀಶ್ ಉತ್ತಮನ್, ಕಬೀರ್ ಸಿಂಗ್, ಪ್ರಮೋದ್ ಶೆಟ್ಟಿ ಮತ್ತು ರೋಹಿಣಿ ಕೂಡ ತಾರಾಗಣದಲ್ಲಿದ್ದಾರೆ.