ಭಟ್ಕಳ (Bhatkal): ತಾಲೂಕಿನ ಶಿರಾಲಿ ಮತ್ತು ಹೆಬಳೆ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಸದಸ್ಯತ್ವ (BJP membership) ಅಭಿಯಾನ ಕಾರ್ಯಕ್ರಮ ಇಂದು ಬುಧವಾರ ಆಯೋಜಿಸಲಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿಜೆಪಿ ಸದಸ್ಯತ್ವ (BJP membership) ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ನಂತರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸೆ. ೨ರಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ (JP Nadda), ಪ್ರಧಾನಮಂತ್ರಿ (Prime Minister)  ನರೇಂದ್ರ ಮೋದಿ (Narendra Modi), ಅಮಿತ್ ಷಾ (Amit sha) ಹಾಗೂ ಪಕ್ಷದ ಎಲ್ಲಾ ಹಿರಿಯ-ಕಿರಿಯರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ೮೮೦೦೦೦೨೦೨೪ ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಟ್ಟು ಅವರು ಬಿಜೆಪಿಯ ಸದಸ್ಯತ್ವಕ್ಕೆ ನೊಂದಣಿ ಮಾಡಿದ್ದಾರೆ. ಈ ಅಭಿಯಾನ ಈ ತಿಂಗಳ ೨೫ರ ತನಕ ಮೊದಲನೇ ಹಂತದಲ್ಲಿ ನಡೆಯಲಿದೆ. ನಂತರ ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಹಂತದ ಅಭಿಯಾನ ನಡೆಯಲಿದೆ ಎಂದರು.

ಇದನ್ನೂ ಓದಿ : ಕಾಂಗ್ರೆಸ್ ವಿರುದ್ಧ‌ ಕಿಡಿಕಾರಿದ ಸಂಸದ ಕಾಗೇರಿ

ನಮ್ಮ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಬಿಜೆಪಿಗೆ ನೊಂದಾಯಿಸುವ ಗುರಿ ನಾವು ಹೊಂದಿದ್ದೇವೆ. ಭಟ್ಕಳ ಮಂಡಲದಲ್ಲಿ ೪೫,೦೦೦ ಸದಸ್ಯರನ್ನು ಮಾಡಬೇಕೆಂಬ ಗುರಿ ನಾವು ಹೊಂದಿದ್ದೇವೆ. ಈ ಸದಸ್ಯತ್ವ ಅಭಿಯಾನದ ಹಿನ್ನೆಲೆಯಲ್ಲಿ ನಾನು ಜಿಲ್ಲೆಯ ಅನೇಕ ಕಡೆ ಪ್ರವಾಸ ಕೈಗೊಂಡಿದ್ದೇನೆ. ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ನಾಯಕರು ಈ ಅಭಿಯಾನಕ್ಕೆ ಕೆಲಸ ಮಾಡುತ್ತಿದ್ದಾರೆ. ಸದಸ್ಯತ್ವ ಅಭಿಯಾನ ಈ ಕಾರಣಕ್ಕಾಗಿ ಯಶಸ್ವಿಯಾಗಿ ನಡೆಯುತ್ತಿದೆ. ಅದಕ್ಕೆ ಇನ್ನಷ್ಟು ವೇಗ ಕೊಡುವ ಹಿನ್ನೆಲೆಯಲ್ಲಿ ನಾನು ಸಹ ಇವತ್ತು ಭಟ್ಕಳದಲ್ಲಿ ಎರಡು ಕಡೆ ಸದಸ್ಯತ್ವ ಅಭಿಯಾನದ ಸಭೆಯನ್ನು ನಡೆಸಿದ್ದೇನೆ ಎಂದರು.

ಇದನ್ನೂ ಓದಿ : ಸೆಪ್ಟೆಂಬರ್‌ ೧೮ರಂದು ವಿವಿಧೆಡೆ ಅಡಿಕೆ ಧಾರಣೆ

ಭಟ್ಕಳದ ಶಿರಾಲಿಯಲ್ಲಿ ಹಾಗೂ ಹೆಬಳೆ ಶಕ್ತಿ ಕೇಂದ್ರದಲ್ಲಿ ಸಭೆಯಾಗಿದೆ. ಅಕ್ಟೋಬರ್ ೨ ರಂದು ಗಾಂಧಿ ಜಯಂತಿ (Gandhi Jayanti) ಅಂಗವಾಗಿ ಮಹಾ ಸ್ವಚ್ಛತಾ ಅಭಿಯಾನ ಜನಾಂದೋಲನವನ್ನು ಮಾಡುವ ಸಿದ್ಧತೆ ನಡೆದಿದೆ. ನಿನ್ನೆ ಸೆ.೧೭ ರಿಂದ ಅ.೨ರ ವರೆಗೆ ಪಕ್ಷದ ವತಿಯಿಂದ ಸೇವೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ. ಸರ್ಕಾರದ ವತಿಯಿಂದ ಕೂಡ ನಡೆಯುತ್ತಿದೆ ಎಂದು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : ಅನಂತಕುಮಾರ ಹೆಗಡೆಗೆ ಟಿಕೆಟ್‌ ತಪ್ಪಲು ನಾನೇ ಕಾರಣ ಎಂದ ಬಿಜೆಪಿ ಮುಖಂಡ

ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಕಾಮಗಾರಿ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಿದ್ದೇವೆ. ಜನರ ಹಲವಾರು ಬೇಡಿಕೆಗಳು ಇದ್ದು ಅವರ ಬೇಡಿಕೆಗೆ ಅನುಗುಣವಾಗಿ ಹೊಸದಾಗಿ ನೀಲ ನಕ್ಷೆ ತಯಾರಿಸಿ ಎಲ್ಲೆಲ್ಲಿ ಬೈಪಾಸ್ ಹಾಗೂ ಅಂಡರ್ ಪಾಸ್ ಬೇಕಾಗುತ್ತದೆ. ಅಲ್ಲಿ ನಿರ್ಮಿಸುವ ಕೆಲಸ ಮಾಡಲಾಗುವುದು. ರಸ್ತೆಯ ಮೇಲೆ ಬಿದ್ದಿರುವ ಹೊಂಡಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಉತ್ತಮ ರಸ್ತೆಯ ನಿರ್ಮಾಣ ಮಾಡಲಾಗುವುದು ಎಂದರು.

ಇದನ್ನೂ ಓದಿ :  ಪ್ಯಾನ್ ಇಂಡಿಯಾ ಸ್ಟಾರ್ ಆದ ಟೋವಿನೋ ಥಾಮಸ್!

ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತರಾಮ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಮಂಡಲ ಉಪಾಧ್ಯಕ್ಷರಾದ ಗಣಪತಿ ದೇವಾಡಿಗ, ಮಂಜಪ್ಪ ನಾಯ್ಕ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ರವಿ ನಾಯ್ಕ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠ ಸಂಚಾಲಕ ಭಾಸ್ಕರ ದೈಮನೆ, ಗ್ರಾಮೀಣ ಹಾಗೂ ಪಂಚಾಯತ ರಾಜ್ ಜಿಲ್ಲಾ ಸಹ ಸಂಚಾಲಕ ಮೋಹನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯ ವಿಡಿಯೋವನ್ನು  ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.