ಭಟ್ಕಳ (Bhatkal): ಶಿಥಿಲಾವ್ಯವಸ್ಥೆಯಲ್ಲಿದ್ದ ತಾಲೂಕಿನ ಹೆಬಳೆ ಪಂಚಾಯತ ವ್ಯಾಪ್ತಿಯ ತೆಂಗಿನಗುಂಡಿ ಗ್ರಾಮದ ಅಂಗನವಾಡಿ (Anganwadi) ಕಟ್ಟಡದ ನವೀಕರಣಕ್ಕೆ ಬೈಲೂರಿನ ಉದ್ಯಮಿ ಮಾಸ್ತಪ್ಪ ನಾಯ್ಕ ಧನ ಸಹಾಯ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಅಂಗನವಾಡಿ (Anganwadi) ಕಟ್ಟಡವು ೧೯೯೮ರಲ್ಲಿ ನಿರ್ಮಾಣಗೊಂಡ ಬಳಿಕ ಯಾವುದೇ ರೀತಿಯ ದುರಸ್ತಿ ಕಾರ್ಯ ನಡೆದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಕಟ್ಟಡದಲ್ಲಿ ಮತ್ತು ಅದರ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಪಾಳು ಬಿದ್ದ ಕಟ್ಟಡದ ಹಾಗೆ ಭಾಸವಾಗುತ್ತಿತ್ತು. ಇದನ್ನು ಮನಗಂಡ ಊರಿನ ಯುವಕ ವಿಶ್ವ ನಾಯ್ಕ ತಮ್ಮ ಗೆಳೆಯರೊಂದಿಗೆ ಚರ್ಚಿಸಿ ಅಂಗನವಾಡಿ ದುರಸ್ತಿಗೆ ಪಣತೊಟ್ಟರು.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಶಿಥಿಲಾವ್ಯವಸ್ಥೆಗೊಂಡಿರುವ ಅಂಗನವಾಡಿ ಕಟ್ಟಡದ ನವಿಕರಣಕ್ಕೆ ಬೈಲೂರಿನ ನಿವಾಸಿಯಾಗಿರುವ ಯಂಗ್ ಒನ್ ಇಂಡಿಯಾ ಸಂಸ್ಥಾಪಕ ಹಾಗೂ ಉದ್ಯಮಿ ಮಾಸ್ತಪ್ಪ ನಾಯ್ಕ ತೆರಳಿ ಅಂಗನವಾಡಿ ಕಟ್ಟಡದ ಪರಿಸ್ಥಿತಿಯನ್ನು ಹೇಳಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ಯಮಿ ಮಾಸ್ತಪ್ಪ ನಾಯ್ಕ ಅಂಗನವಾಡಿ ನವಿಕರಣಕ್ಕೆ ತಗಲುವ ವೆಚ್ಚವನ್ನು ತಾವೇ ಪೂರ್ತಿ ಭರಿಸುವುದಾಗಿ ಹೇಳಿದರು. ಅದರಂತೆ ೨೦ ಸಾವಿರ ರೂ.ಗಿಂತಲೂ ಅಧಿಕ ಹಣದಲ್ಲಿ ಅಂಗನವಾಡಿ ಕಟ್ಟಡವನ್ನು ನವೀಕರಣಗೊಳಿಸಿದ್ದಾರೆ. ಅಂಗನವಾಡಿ ಸುತ್ತಮುತ್ತ ಸ್ವಚ್ಚಗೊಳಿಸಿ, ಕಟ್ಟಡಕ್ಕೆ ಸುಣ್ಣಬಣ್ಣ ಬಳಿದು ಅಂಗನವಾಡಿಗೆ ಸುಂದರ ರೂಪ ನೀಡಿದ್ದಾರೆ. ಊರಿನ ಯುವಕರಾದ ರಾಘವೇಂದ್ರ ನಾಯ್ಕ, ನಾರಾಯಣ ನಾಯ್ಕ, ಧನರಾಜ ನಾಯ್ಕ, ಹರೀಶ ನಾಯ್ಕ, ಅಭಿಷೇಕ ನಾಯ್ಕ, ಅನಿಲ ನಾಯ್ಕ, ನಿತಿನ್ ನಾಯ್ಕ ಶ್ರಮದಾನ ಮಾಡುವ ಮೂಲಕ ಅಂಗಡಿವಾಡಿ ನವೀಕರಣಕ್ಕೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಂಸದ ಕಾಗೇರಿ