ಭಟ್ಕಳ(Bhatkal): ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ (kick boxing) ಚಾಂಪಿಯನ್ ಶಿಪ್ -೨೦೨೪ರಲ್ಲಿ ಭಾರತ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದು ನಾಡಿಗೆ ಕೀರ್ತಿ ತಂದ ಭಟ್ಕಳದ ಧನ್ವಿತಾ ವಾಸು ಮೊಗೇರ ಅವಳನ್ನು ಕರಾವಳಿ ಕಾವಲು ಪಡೆಯ (coastal security police) ಪಿಐ ಕುಸುಮಾಧರ ಕೆ. ಸನ್ಮಾನಿಸಿ ಗೌರವಿಸಿದರು (Dhanvita honored).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಯುರೋಪ್ (europe) ದೇಶದ ಹಂಗೇರಿಯ (Hangeri) ಬುಡಾಪೆಸ್ಟ್ ನಲ್ಲಿ ಆಗಸ್ಟ್ ೨೩ ರಿಂದ ಸೆಪ್ಟೆಂಬರ್ ೧ರ ತನಕ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ (Karnataka) ರಾಜ್ಯದಿಂದ ಧನ್ವಿತಾ ವಾಸು ಮೊಗೇರ ಪ್ರತಿನಿಧಿಸಿದ್ದರು. ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟು ಧನ್ವಿತಾ ವಾಸು ಮೊಗೇರ ೭ ರಿಂದ ೯ ವರ್ಷ ವಯೋಮಿತಿಯ ಬಾಲಕಿಯರ -೧೮ಕೆಜಿ ಪಾಯಿಂಟ್ ಫೈಟ್ ವಿಭಾಗದಲ್ಲಿ ಚಿನ್ನದ ಪದಕವನ್ನು (golden model) ಗೆದ್ದು ವಲ್ಡ್ ಚಾಂಪಿಯನ್ (world champion) ಆಗಿ ಹೊರಹೊಮ್ಮಿದ್ದಳು. ಈ ಹಿನ್ನೆಲೆಯಲ್ಲಿ ಧನ್ವಿತಾ ವಾಸು ಮೊಗೇರ ಅವಳನ್ನು ಕರಾವಳಿ ಕಾವಲು ಪಡೆಯ (coastal security police) ಪಿಐ ಕುಸುಮಾಧರ ಕೆ. ಸನ್ಮಾನಿಸಿ ಗೌರವಿಸಿದರು (Dhanvita honored).
ಇದನ್ನೂ ಓದಿ : ಪಾಳುಬಿದ್ದ ಅಂಗನವಾಡಿ ಕಟ್ಟಡ ನವೀಕರಣ