ಭಟ್ಕಳ(Bhatkal): ಮುರ್ಡೇಶ್ವರದ (Murdeshwar) ಯಮುನಾ ನಾಯ್ಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಯನ್ನು ಕೋರ್ಟ್ ಆದೇಶದಂತೆ ಶೀಘ್ರ ಮುಗಿಸಬೇಕು ಎಂದು ಶ್ರೀರಾಮ ಸೇನೆ (Shriram Sena) ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ೨೦೧೦ರ ಅಕ್ಟೋಬರ್ ೨೩ರಂದು ಇಡೀ ರಾಜ್ಯವೇ ಬೆಚ್ಚಿಬಿದ್ದಂತಹ ಯಮುನಾ ನಾಯ್ಕ ರೇಪ್ ಅಂಡ್ ಮರ್ಡರ್ ಕೇಸ್ ನಡೆದಿತ್ತು. ಈ ಪ್ರಕರಣದಲ್ಲಿ ಯಾರು ಆರೋಪಿತರು? ಅವರು ಹೇಗೆ ಬಚಾವಾದರು ಅಥವಾ ಬಚಾವ್ ಮಾಡಿದವರು ಯಾರು ಎಂದು ಗೊತ್ತಿಲ್ಲ. ಆದರೆ ಒಬ್ಬ ಅಮಾಯಕ ವೆಂಕಟೇಶ ಹರಿಕಾಂತ ಈ ಕೇಸಿಗೆ ಸಂಬಂಧಿಸಿದಂತೆ ಆರು ವರ್ಷ ಎಂಟು ತಿಂಗಳು ನರಕಯಾತನೆ ಅನುಭವಿಸಿದ್ದಾನೆ. ಅವನು ಮಾಡಲಾರದ ಅಪರಾಧಕ್ಕೆ ಈ ಶಿಕ್ಷೆ ಅನುಭವಿಸಿದ್ದಾನೆ. ನಮ್ಮ ವ್ಯವಸ್ಥೆ ಹೇಗೆ ಹದಗೆಟ್ಟು ಹೋಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಅವರು ವಿಷಾದಿಸಿದರು.
ಇದನ್ನೂ ಓದಿ : ೨೬ರಿಂದ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ
೨೦೧೭ರಲ್ಲಿ ಹೈಕೋರ್ಟ್ (High court) ವೆಂಕಟೇಶ್ ಹರಿಕಾಂತ ಅವರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಈ ಕೇಸಿನ ಮರುತನಿಖೆ ಆಗಬೇಕು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧನ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ಆದೇಶವಾಗಿ ಏಳು ವರ್ಷವಾದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಹಾಗೂ ತನಿಖೆಯಾಗುತ್ತಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ? ಇದರ ಹಿನ್ನೆಲೆ ಏನಿದೆ? ಈ ಕೇಸಿನ ಹಿಂದೆ ಯಾರ ಕೈವಾಡವಿದೆ? ಪೊಲೀಸ್ ಇಲಾಖೆಯನ್ನು ಏಕೆ ಕಟ್ಟಿ ಹಾಕಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ : ಅಂದರ ಬಾಹರ ಆಡುತ್ತಿದ್ದವರ ೭ ಬೈಕ್ ವಶಕ್ಕೆ
೨೦೧೧ರಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲ್ಯಾಬ್ ರಿಪೋರ್ಟ್ ಬಂದಿದೆ. ಅದರಲ್ಲಿ ವೆಂಕಟೇಶ ಹರಿಕಂತ್ರ ರವರ ಪಾತ್ರ ಇಲ್ಲದಿರುವುದು ತಿಳಿದು ಬಂದಿತ್ತು. ಆದರೆ ಆ ವರದಿಯನ್ನು ಕೊಡಲು ವಿಳಂಬ ನೀತಿಯನ್ನು ಪಾಲಿಸಿ ಆ ವ್ಯಕ್ತಿಗೆ ನರಕಯಾತನೆ ನೀಡಿದ್ದಾರೆ. ಇದರಿಂದ ಕಾನೂನಿನ ಮೇಲೆ, ನ್ಯಾಯಾಂಗದ ಮೇಲೆ ಹಾಗೂ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ತಾತ್ಸಾರ, ತಿರಸ್ಕಾರ ಭಾವನೆ ಉಂಟಾಗಿದೆ. ಇಲಾಖೆ ಹಾಗೂ ಕೋರ್ಟ್ ಈ ಬಗ್ಗೆ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಮರು ತನಿಖೆಗೆ ಆದೇಶ ನೀಡಿ ಏಳು ವರ್ಷ ಆಗಿದೆ. ಕೋರ್ಟ್ ಪೊಲೀಸ್ ಇಲಾಖೆಗೆ ಚಾಟಿ ಬೀಸಬೇಕಿತ್ತು. ಅವರು ಸಹ ಸುಮ್ಮನಿದ್ದಾರೆ ಏಕೆಂದು ತಿಳಿಯುತ್ತಿಲ್ಲ. ಆದಷ್ಟು ಬೇಗ ತನಿಖೆಯನ್ನು ಮಾಡಿ ಈ ಸಮಾಜದಲ್ಲಿ ಸತ್ತವರನ್ನು ಸಮಾಧಿ ಮಾಡುವ ಬದಲು ಬಡವರಿಗೆ ಬಲಹೀನರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಭಟ್ಕಳ ಡಿವೈಎಸ್ಪಿ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಇಂತಹ ಕೊಲೆಯ ಆರೋಪಿ ಪತ್ತೆಯಾಗದಿರುವುದು ಐದಾರು ಪ್ರಕರಣಗಳು ಇವೆ. ಡಾ. ಚಿತ್ತರಂಜನ್, ತಿಮ್ಮಪ್ಪ ನಾಯ್ಕ , ಪರೇಶ ಮೇಸ್ತ…. ಈ ಯಾವ ಕೇಸುಗಳಿಗೂ ಇವತ್ತಿನವರೆಗೂ ನ್ಯಾಯ ಸಿಗಲಿಲ್ಲ. ಈ ಎಲ್ಲ ಕೇಸುಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾದಂತಹ ಕೇಸ್ ಗಳಾಗಿವೆ. ಈ ಜಿಲ್ಲೆಯಲ್ಲಿ ಇಂತಹ ಸಾವುಗಳಿಗೆ ನ್ಯಾಯ ಇಲ್ಲ. ಕೊಲೆಗೆಡುಕರು, ಅಪರಾಧಿಗಳು, ರೇಪಿಸ್ಟರು, ಆರಾಮಾಗಿರುವಂತಹ ವ್ಯವಸ್ಥೆ ಈ ಜಿಲ್ಲೆಯಲ್ಲಿ ಆಗುತ್ತಿದೆ. ಸಮಾಜದಲ್ಲಿ ಈ ವಿಷಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಹಾಗೂ ಮುಂದಿನ ದಿನಗಳಲ್ಲಿ ಈ ಎಲ್ಲಾ ಕೇಸ್ ಗಳ ಬಗ್ಗೆ ಹೋರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರರು.
ಈ ಸುದ್ದಿಗೋಷ್ಠಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜಯಂತ ಮಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಆಡ್ಲಾರ್, ತಾಲೂಕಾಧ್ಯಕ್ಷ ರಾಜು ನಾಯ್ಕ, ರಾಮದಾಸ ಉಪಸ್ಥಿತರಿದ್ದರು.
ಇದನ್ನೂ ಓದಿ : ಕಳುವಾದ ಮೊಬೈಲ್ ಪತ್ತೆ