ಭಟ್ಕಳ (Bhatkal) : ಯಮುನಾ ನಾಯ್ಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿ ತಕ್ಷಣ ಅತ್ಯಾಚಾರ, ಕೊಲೆ ಮಾಡಿದ ಪಾಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಶ್ರೀರಾಮಸೇನೆ (Shriram Sena) ಡಿವೈಎಸ್ಪಿಗೆ ಮನವಿ (petition) ಸಲ್ಲಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಡಿವೈಎಸ್ಪಿ ಕಚೇರಿಗೆ ತೆರಳಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದ ನಿಯೋಗದಿಂದ ಡಿವೈಎಸ್ಪಿ ಅನುಪಸ್ಥಿತಿಯಲ್ಲಿ ನಗರ ಠಾಣೆಯ ಪಿ.ಐ. ಗೋಪಿಕೃಷ್ಣ ಮನವಿ (petition) ಸ್ವೀಕರಿಸಿದರು.

ಇದನ್ನೂ ಓದಿ : ಸೆಪ್ಟೆಂಬರ್‌ ೨೩ರಂದು ವಿವಿಧ ಅಡಿಕೆ ಧಾರಣೆ

ಮನವಿಯಲ್ಲಿ ೨೦೧೦ರ ಅಕ್ಟೋಬರ್ ೨೩ ಕ್ಕೆ ಯಮುನಾ ನಾಯ್ಕ ಅತ್ಯಾಚಾರ ಹಾಗೂ ಕೊಲೆಯ ಭೀಕರ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಅಮಾಯಕ ವೆಂಕಟೇಶ ಹರಿಕಾಂತನನ್ನು ಬಂಧಿಸಿ ೬-೮ ತಿಂಗಳು ಬಂಧನದಲ್ಲಿ ಇರಿಸಿ ನಂತರ ನಿರಪರಾಧಿ ಎಂದು ೨೦೧೭ ರಲ್ಲಿ ಹೈಕೋರ್ಟ ಆದೇಶದಂತೆ ಬಿಡುಗಡೆಯಾದರು. ಜೊತೆಗೆ ಈ ಪ್ರಕರಣದ ಮರುತನಿಖೆಗೆ ಆದೇಶವಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಯಮುನಾ ನಾಯ್ಕ ಪ್ರಕರಣ ಶೀಘ್ರ ಮರುತನಿಖೆಗೆ ಆಗ್ರಹ

ಆದರೆ ೭ ವರ್ಷ ಕಳೆದರೂ ನಿಜವಾದ ಆರೋಪಿಗಳ ಬಂಧನವಾಗದಿರುವುದು ದುರ್ದೈವ್ವ, ತನಿಖೆಯ ಆಮೆಗತಿ ಸೂಚಿಸುತ್ತದೆ. ನೊಂದ ಕುಟುಂಬಕ್ಕೆ ನ್ಯಾಯ ಇದು ವಿಳಂಭವಾಗುತ್ತಿರುವುದರಿಂದ ವಿಶ್ವಾಸ ಕಳೆದುಕೊಳ್ಳುತ್ತಿದೆ. ಅತ್ಯಾಚಾರಿ, ಕೊಲೆ ಪಾತಕರಿಗೆ ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿ ತಕ್ಷಣ ಅತ್ಯಾಚಾರ, ಕೊಲೆ ಮಾಡಿದ ಪಾಪಿಗಳಿಗೆ ಉಗ್ರ ಶಿಕ್ಷೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ :  ೨೬ರಿಂದ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಜಯಂತ ಮಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಆಡ್ಲಾರ್, ತಾಲೂಕಾ ಅಧ್ಯಕ್ಷ ರಾಜು ನಾಯ್ಕ .ರಾಮದಾಸ ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.