ಯಾದಗಿರಿ(Yadgir): ತಾಲೂಕಿನ ಜಿನಕೇರಾ ತಾಂಡದಲ್ಲಿ ಸೋಮವಾರ ಸಿಡಿಲು ಬಡಿದು (lightning) ನಾಲ್ವರು ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಿಶನ್ ನಾಮಣ್ಣ ಜಾಧವ (33), ಚನ್ನಪ್ಪ ನಾಮಣ್ಣ ಜಾಧವ (24 ), ಸುನಿಬಾಯಿ ರಾಥೋಡ್(30) ಮತ್ತು ನೇನು ನಿಂಗಪ್ಪ ಜಾಧವ (18) ಮೃತ ಪಟ್ಟವರು. ಇವರು ತಾಂಡಾದ ಜಮೀನಿನಲ್ಲಿ ಈರುಳ್ಳಿ ಸಸಿ ನಾಟಿ ಮಾಡುತ್ತಿದ್ದಾಗ ಧಾರಾಕಾರವಾಗಿ ಮಳೆ ಬಂದಿದೆ(Heavy rain). ಇದರಿಂದ ಜಮೀನಿನ ಬಳಿಯ ದುರುಗಮ್ಮ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ವೇಳೆ ಸಿಡಿಲು ಬಡಿದಿದೆ (lightning). ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರು ಎಳೆದಿದ್ದಾರೆ. ಮೌನೇಶ ಹೊನ್ನಪ್ಪ, ಗಣೇಶ ಮೌನೇಶ, ದರ್ಶನ್ ಕಿಶನ್ ಎಂಬುವವರು ಸಹ ಸಿಡಿಲಿನ ಆಘಾತಕ್ಕೆ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಯಾದಗಿರಿ (Yadagiri) ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ :  ೨೬ರಿಂದ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ