ಭಟ್ಕಳ: ತಾಲೂಕಿನ ಪೊಲೀಸ್ ಮೈದಾನದಲ್ಲಿ ನಡೆದ ಎಂಪ್ಲೋಯ್ ಪ್ರೀಮಿಯರ್ ಲೀಗ್ ಸೀಸನ್ 3
ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಚಕ್ರವ್ಯೂಹ ವಾರಿಯರ್ಸ್ ತಂಡವನ್ನು ಮಣಿಸಿದ ಕುರುಕ್ಷೇತ್ರ ಫೈಟರ್ಸ್ ತಂಡವು ಟ್ರೋಫಿ ಗೆಲ್ಲುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಚಕ್ರವ್ಯೂಹ ವಾರಿಯರ್ಸ್

ರನ್ನರಪ್ ಪ್ರಶಸ್ತಿ ಪಡೆದ ಚಕ್ರವ್ಯೂಹ ವಾರಿಯರ್ಸ್‌

ವಿಡಿಯೋ ನೋಡಿ :   https://fb.watch/qj1b87aiXn/?mibextid=Nif5oz

ಈ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಚಕ್ರವರ್ತಿ ಫೈಟರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 8 ಓವರನಲ್ಲಿ 5 ವಿಕಟ್ ನಷ್ಟಕ್ಕೆ 77 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚಕ್ರವ್ಯೂಹ ವಾರಿಯರ್ಸ್ ತಂಡ 8 ಓವರನಲ್ಲಿ 6 ವಿಕೆಟ್ ಕಳೆದುಕೊಂಡು 66 ರನ್ ಮಾತ್ರ ಕಲೆಹಾಕಲು ಸಾಧ್ಯವಾಯಿತು. ಇದರಿಂದ 11 ರನ್ ಗಳಿಂದ ಕುರುಕ್ಷೇತ್ರ ಫೈಟರ್ಸ್ ತಂಡವು ಫೈನಲ್ ಪಂದ್ಯ ಗೆಲ್ಲುವುದರ ಮೂಲಕ ಎಂಪ್ಲೋಯ್ ಪ್ರೀಮಿಯರ್ ಲೀಗ್ ಭಟ್ಕಳ ಸೀಸನ್ 3 ನ
ಚಾಂಪಿಯನ್ ಆಗಿ ಹೊರಹೊಮ್ಮಿತು.

ಉದ್ಯಮಿ ಹಾಗೂ ಸಮಾಜ ಸೇವಕ ಫರಾನ್ ಅವರಿಗೆ ಸನ್ಮಾನ.

ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕುರುಕ್ಷೇತ್ರ ತಂಡದ ಚಂದ್ರಕಾಂತ ಕಂಬಾರ ಪಾಲಾದರೆ. 4 ವಿಕೆಟ್ ಪಡೆದು 117 ರನ್ ಗಳಸಿದ ವಾಸು ಮೊಗೇರ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು. ಚಕ್ರವ್ಯೂಹ ವಾರಿಯರ್ಸ್ ತಂಡದ ಅಭಿಜಿತ್ ನಾಯ್ಕ 5 ಪಂದ್ಯದಲ್ಲಿ 9 ವಿಕೆಟ್ ಪಡೆಯುವುದರ ಮೂಲಕ ಬೆಸ್ಟ್ ಬೌಲರ್ ಎನಿಸಿಕೊಂಡರು. ಅದೇ ರೀತಿ ಸರಣಿ ಶೇಷ್ಠ ಪ್ರಶಸ್ತಿ ಶೇಖರ ಗೊಂಡ , ಬೆಸ್ಟ್ ಪಿಲ್ಡರ್ ಮೋಹನ ಗೊಂಡ, ಬೆಸ್ಟ್ ವಿಕೆಟ್ ಕೀಪರ್ ಶೇಖರ್ ಪೂಜಾರಿ, ಬೆಸ್ಟ್ ಕ್ಯಾಚ್ ಚಕ್ರವ್ಯೂಹ ತಂಡದ ಭಾಸ್ಕರ್ ದೇವಾಡಿಗ, ಅತಿ ಹೆಚ್ಚು ಸಿಕ್ಸ್ ಗಳಸಿದ ಲೋಹಿತ್ ನಾಯ್ಕ ಮೋಸ್ಟ್ ಸಿಕ್ಸ್ರ್ ಪ್ರಶಸ್ತಿ ಪಡೆದರು. ಶಿಸ್ತಿನ ತಂಡವಾಗಿ ಪವರ್ ಸ್ಟಾರ್ ತಂಡ ಹೊರಹೊಮ್ಮಿತು.

ಕ್ರೀಡೆಯಲ್ಲಿ ಸಾಧನೆಗೈದ ಸರ್ಕಾರಿ ನೌಕರಗೆ ಸನ್ಮಾನ

ಕ್ರೀಡೆಯಲ್ಲಿ ಸಾಧನೆಗೈದ ಮಹಿಳಾ ಸರ್ಕಾರಿ ನೌಕರಗೆ ಸನ್ಮಾನ

ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ಇಬ್ಬರು ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಅದೇ ರೀತಿ ಬೆಂಕಿ ಅವಘಡದಲ್ಲಿ ಗಾಯಗೊಂಡ ಮಾರುಕೇರಿ ಮೂಲದ ಯುವಕನಿಗೆ ಸಹಾಯ ನೀಡಲಾಯಿತು. ಉದ್ಯಮಿ ಹಾಗೂ ಸಮಾಜ ಸೇವಕ ಫರಾನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ :  ಸಂಘಟನೆಯಿದ್ದೆಡೆ ಎಲ್ಲವೂ ಸಾಧ್ಯ: ರಾಘವೇಶ್ವರ ಶ್ರೀ ಆಶೀರ್ವಚನ

ಕಿತ್ರೆ ದೇವಿಮನೆ ರಥೋತ್ಸವದ ವಿಡಿಯೋ ನೋಡಿ : https://fb.watch/qhYL1vYhTt/?mibextid=Nif5oz