ಕಾರವಾರ (Karwar): ಮನೆಯ ಗೋಡೆ ಕೆಡವದೇ ಗೋಡೆಯ ಹೊರಗಿನಿಂದ ಕಾಮಗಾರಿ ಮಾಡಲು ಲಂಚ ಪಡೆದಿದ್ದ ಯಲ್ಲಾಪುರ (Yallapur) ಪಟ್ಟಣ ಪಂಚಾಯತ ಸದಸ್ಯನಿಗೆ ಎರಡು ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ. ೫೦೦೦ ದಂಡ ವಿಧಿಸಲಾಗಿದೆ (Court Order). ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ೩ ತಿಂಗಳ ಕಾರಾವಾಸ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯಲ್ಲಾಪುರ ಪಟ್ಟಣ ಪಂಚಾಯತ್ ಸದಸ್ಯ ರವಿ ಸೋಮಯ್ಯ ದೇವಾಡಿಗ ಶಿಕ್ಷೆಗೆ ಒಳಪಟ್ಟ ಅಪರಾಧಿಯಾಗಿದ್ದಾರೆ. ಯಲ್ಲಾಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ ೫ ರಲ್ಲಿ ತಟಗಾರ ರಸ್ತೆ ಪಕ್ಕದದಲ್ಲಿರುವ ನರಸಿಂಹಯ್ಯ ವೆಂಕಟರಮಣ ಭಟ್ ರವರ ಮನೆಯ ಹಿಂಬದಿಯಿಂದ ಹಾದು ಹೋಗುವ ಹೊಸ ಬಡಾವಣೆ ರಸ್ತೆಗೆ ಪಟ್ಟಣ ಪಂಚಾಯತಿ ವತಿಯಿಂದ ಹೊಸದಾಗಿ ಚರಂಡಿ ನಿರ‍್ಮಿಸಲಾಗುತ್ತಿತ್ತು.

ಇದನ್ನೂ ಓದಿ :  ಐ.ಆರ್.ಬಿ. ಕಾಮಗಾರಿ ಮಾಹಿತಿ ನೀಡದಿದ್ದರೆ ಹೋರಾಟ

ಈ ಚರಂಡಿ ನಿರ‍್ಮಿಸುವ ಕಾಮಗಾರಿಗೆ ಒತ್ತುವರಿ ಗೋಡೆಯನ್ನು ತೆಗೆದು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದರು. ಅದಕ್ಕೆ ರವಿ ಸೋಮಯ್ಯ ದೇವಾಡಿಗ ಇವರು, ಮನೆಯ ಗೋಡೆಯನ್ನು ಕೆಡವದೇ ಹೊರಗಿನಿಂದ ತೆಗೆದುಕೊಂಡು ಕಾಮಗಾರಿಯನ್ನು ಮುಂದುವರೆಸಲು ೧೦ ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದಾಗ ಆಪಾದಿತ ೫ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟರು. ಮೊದಲ ಹಂತದಲ್ಲಿ ರೂ ೫೦೦ ಪಡೆದು ಉಳಿದ ರೂ. ೪೫೦೦ ತಂದು ಕೊಡಲು ತಿಳಿಸಿದ್ದರು.

ಇದನ್ನೂ ಓದಿ :  ಮಾಜಿ ಎಮ್ಮೆಲ್ಸಿ ಶುಭಲತಾ ಅಸ್ನೋಟಿಕರ ನಿಧನ

ರೂ. ೪೫೦೦ ಲಂಚವನ್ನು ಸ್ವೀಕರಿಸುವಾಗ ಟ್ರ್ಯಾಪ್ ಕಾರ‍್ಯಾಚರಣೆ ಮೂಲಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ (Lokayukta) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆಪಾದಿತ ಪ.ಪಂ ಸದಸ್ಯನ ವಿರುದ್ದ ವಿಶೇಷ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು. ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಅವರು ಆರೋಪ ಸಾಬೀತಾದ ಹಿನ್ನೆಲೆ ತೀರ್ಪು ನೀಡಿದ್ದಾರೆ (Court Order). ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಲಕ್ಷ್ಮಿಕಾಂತ ಎಮ್ ಪ್ರಭು ವಾದ ಮಂಡಿಸಿದ್ದರು.

ಇದನ್ನೂ ಓದಿ :  ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಚಾಲನೆ