ಭಟ್ಕಳ (Bhatkal) : ಕರ್ನಾಟಕ ವಿಶ್ವವಿದ್ಯಾಲಯದ (KUD) ೨೦೨೪ನೇ ಸಾಲಿನ ಘಟಿಕೋತ್ಸವ (Convocation) ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ರ್ಯಾಂಕ್ ಪಡೆದ ಶ್ರೀ ಗುರು ಸುಧೀಂದ್ರ ಕಾಲೇಜಿನ (SGS College) ಇಬ್ಬರು ವಿದ್ಯಾರ್ಥಿನಿಯರಿಗೆ ಗೌರವಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಬಿಎ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಪಡೆದ ವಿದ್ಯಾರ್ಥಿನಿ ವೃಂದಾ ಆರ್. ಜೋಗಿ ( ಭಟ್ಕಳದ ವೀಣಾ ಹಾಗೂ ರಾಮನಾಥ ಜೋಗಿಯವರ ಪುತ್ರಿ ), ಬಿಸಿಎ ವಿಭಾಗದಲ್ಲಿ ತೃತೀಯ ರ್ಯಾಂಕ್ ಪಡೆದ ದೀಕ್ಷಾ ಖಾರ್ವಿ ( ಭಟ್ಕಳದ ಮಂಗಲಾ ಹಾಗೂ ನಾಗಪ್ಪಾ ಖಾರ್ವಿಯವರ ಪುತ್ರಿ ) ಯವರಿಗೆ ಪದಕ ಸಹಿತ ರ್ಯಾಂಕ್ ಫಲಕ ಪ್ರದಾನ ಮಾಡಲಾಗಿದೆ.
ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಮಾಹಿತಿ ನೀಡಿದ ಎಸ್ಪಿ ನಾರಾಯಣ ಎಂ.
೨೦೨೨-೨ ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ (KUD) ಮಟ್ಟದಲ್ಲಿ ಬಿ.ಕಾಂ ಕೋರ್ಸನಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾಮತ (ಭಟ್ಕಳದ ರೇಖಾ ಮತ್ತು ರಾಜೇಂದ್ರ ಕಾಮತರವರ ಪುತ್ರಿ) ಇವರಿಗೆ ಡಾ. ಡಿ.ಸಿ.ಪಾವಟೆ ಗೋಲ್ಡನ್ ಜ್ಯುಬಿಲಿ ಸ್ಕಾಲರಶಿಪ್ ಲಭಿಸಿದೆ. ಈ ವಿದ್ಯಾರ್ಧಿಗಳಿಗೆ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ (Higher Education) ಸಚಿವ ಡಾ.ಎಂ.ಸಿ. ಸುಧಾಕರ (Dr MC Sudhakar) ಸಹಿತ ಗಣ್ಯರು ಪದಕ ಸಹಿತ ರ್ಯಾಂಕ್ ಫಲಕ ಮತ್ತು ಸ್ಕಾಲರ್ಶಿಪ್ ಪ್ರದಾನ ಮಾಡಿದರು. ಈ ಯುವಪ್ರತಿಭೆಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಇದನ್ನೂ ಓದಿ : ತಾಯಿ ಜೊತೆ ಮಾತನಾಡಲು ಯಾಸಿನ್ ಭಟ್ಕಳ್ಗೆ ಅನುಮತಿ