ಕುಂದಾಪುರ (Kundapur) : ಬೈಂದೂರು (byndur) ಮಾಜಿ ಶಾಸಕ (former MLA) ಕೆ. ಲಕ್ಷ್ಮೀನಾರಾಯಣ (K Laxminarayan) (85) ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು (K Laxminarayan) ಕೆಲ ಸಮಯದಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆ ಪತ್ನಿ ನಿಧನರಾಗಿದ್ದರು. ಇಂದು ಸೆ.೨೭ರಂದು ಸಂಜೆ ೪.೩೦ಕ್ಕೆ ಬನಶಂಕರಿ ಚಿತಾಗಾರದಲ್ಲಿ ಲಕ್ಷ್ಮೀನಾರಾಯಣ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.

ಇದನ್ನೂ ಓದಿ : ತಾಯಿ ಜೊತೆ ಮಾತನಾಡಲು ಯಾಸಿನ್‌ ಭಟ್ಕಳ್‌ಗೆ ಅನುಮತಿ

೨೦೦೮ರಲ್ಲಿ ಬೈಂದೂರು ಬಿಜೆಪಿ (BJP) ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಸಲ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಉದ್ಯಮಿಯಾಗಿ ಹೆಸರುಗಳಿಸಿದ್ದ ಇವರು ಸ್ನಾತಕೋತ್ತರ ಪದವಿ ಪಡೆದಿದ್ದರು.

ಇದನ್ನೂ ಓದಿ : ಸ್ಮಶಾನ ಹತ್ತಿರ ಜೂಜಾಡುತ್ತಿದ್ದ ೮ ಜನರು ಪೊಲೀಸ್ ವಶಕ್ಕೆ