ಭಟ್ಕಳ (Bhatkal) : ತಾಲೂಕಿನ ಭೂಮಾಪಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಭೂಮಾಪಕ ವಾಸುದೇವ ಮೊಗೇರ ಅವರನ್ನು ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -೨೦೨೪ (best officer) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜನಸ್ನೇಹಿ ಅಧಿಕಾರಿ ಎಂದೇ ಹೆಸರು ಪಡೆದಿರುವ ವಾಸುದೇವ ಮೊಗೇರ ಅವರು ಸಾರ್ವಜನಿಕರು ಯಾವುದೇ ಸಮಸ್ಯೆಯನ್ನು ತೆಗೆದುಕೊಂಡು ಹೋದರು ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುತ್ತಾರೆ. ಅವರ ಕಾರ್ಯವೈಖರಿ ಗುರುತಿಸಿ ಬೆಂಗಳೂರಿನಲ್ಲಿ (Bengaluru) ಕಂದಾಯ ಸಚಿವ (revenue minister) ಕೃಷ್ಣ ಬೈರೇಗೌಡ (Krishna byregowda) ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ “ವರ್ಷದ ಅತ್ಯುತ್ತಮ ಅಧಿಕಾರಿ” (best officer) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ : RNS college/ ೯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ