ಕಾರವಾರ (Karwar) : ಮನೆಯಲ್ಲಿ ಒಬ್ಬರೇ ಇದ್ದಾಗ ಕಾಲೇಜು ಪ್ರಾಂಶುಪಾಲರೊಬ್ಬರು (Principal) ಹಣೆಯಲ್ಲಿನ ಗಂಭೀರ ಗಾಯದಿಂದ  ರಕ್ತಸ್ರಾವವಾಗಿ ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ಮೃತರ ಸಹೋದರ ಅನುಮಾನ ವ್ಯಕ್ತಪಡಿಸಿದ್ದಾರೆ (suspect death).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೋರಿಭಾಗ ಕಿನ್ನರ ಮೂಲದ ಪ್ರಕಾಶ ವಿಶ್ವನಾಥ ಕಲ್ಗುಟಕರ (೫೯) ಮೃತರು. ಮಲ್ಲಿಕಾರ್ಜುನ  ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಇವರು ಹಬ್ಬುವಾಡದ ಲಲಿತಾ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಸಾರಾಯಿ ಕುಡಿಯುವ ಚಟಗಾರರಾಗಿದ್ದ ಇವರು ರಾತ್ರಿ ಸಮಯದಲ್ಲಿ ಮನೆಯೊಳಗೆ ಇದ್ದಾಗ ಮನೆಯ ಬಾಗಿಲನ್ನು ಲಾಕ್‌ ಮಾಡದೆ ನಶೆಯಲ್ಲಿ ಇರುತ್ತಿದ್ದರು.

ಇದನ್ನೂ ಓದಿ : ಜೀವಕ್ಕೆ ಆಪತ್ತು ತಂದ ಅತಿವೇಗದ ಚಾಲನೆ

ಸೆ.೨೮ರಂದು ಬೆಳಿಗ್ಗೆ ೯ರ ಸುಮಾರಿಗೆ ಕಾಲೇಜಿನ ಜವಾನ ಲಲತಾ ಅಪಾರ್ಟಮೆಂಟಿನಲ್ಲಿ ಇವರಿಗೆ ಊಟ ಕೊಟ್ಟು ಹೋಗಿದ್ದರು. ಅದೇ ದಿನ ಮನೆಯ ಕೋಣೆಯಲ್ಲಿ ಮಲಗಿದ ವೇಳೆ ಸಾರಾಯಿ ಕುಡಿದ ನಶೆಯಲ್ಲಿ ಮಂಚದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದಾಗ ಪಕ್ಕದಲ್ಲಿದ್ದ ಪ್ಲೈವುಡ್‌ ಕಟ್ಟಿಗೆ ಹಣೆಗೆ ಬಡಿದು ಗಂಭೀರ ಗಾಯಗೊಂಡಿದ್ದಾರೆ. ಮಲಗುವ ಕೋಣೆಯಿಂದ ಹಾಲ್‌ಗೆ ಸೋಫಾ ಮೇಲೆ ಕುಳಿತು, ಅಲ್ಲಿಂದ  ಅಡುಗೆ ಕೋಣೆಗೆ ಹೋಗುವಾಗ ವಿಪರೀತ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Honavar TP Veeragrani/ ಆರ್‌ಡಿಪಿಆರ್ ಕ್ರೀಡಾಕೂಟಕ್ಕೆ ತೆರೆ

ಈ ಬಗ್ಗೆ ದೂರು ದಾಖಲಿಸಿರುವ (case registered) ಮೃತರ ಸಹೋದರ ಲಕ್ಷ್ಮೀಕಾಂತ ಮರಣದಲ್ಲಿ ಸಂಶಯ ಕಂಡುಬರುತ್ತಿದೆ (suspect death) ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಶಹರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಗಾಂಜಾ ಸೇವಿಸಿದ ಕಾರವಾರದ ಯುವಕ‌ ಸೆರೆ