ಬೆಂಗಳೂರು (Bengaluru): ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ (Partagali Jeevottam Math) ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ (Partagali Swamiji) ದಿಗ್ವಿಜಯ ಮಹೋತ್ಸವವು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ಸಮಾಜ ಬಾಧವರ ಹರ್ಷೊದ್ಘಾರಗಳ ನಡುವೆ ವೈಭವಯುತವಾಗಿ ನಿನ್ನೆ ಭಾನುವಾರ ನೇರವೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ ಭಕ್ತರ ಕೋರಿಕೆಯ ಮೇರೆಗೆ ೪೫ ವರ್ಷದ ಬಳಿಕ ಶ್ರೀಗಳು (Partagali Swamiji) ಕ್ರೋಧಿ ನಾಮ ಸಂವತ್ಸರದ ಚಾತುರ್ಮಾಸ್ಯ (chaturmasya) ವ್ರತ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ಆರಂಭಿಸಿದ್ದರು. ೧೮ ಸೆಪ್ಟೆಂಬರ್ ೨೦೨೪ ಬುಧವಾರದಂದು ತಮ್ಮ ಚಾತುರ್ಮಾಸ್ಯ ವ್ರತವನ್ನು ಮೃತಿಕ ವಿಸರ್ಜನೆಯ ಮುಖೇನ ಸಂಪನ್ನಗೊಳಿಸಿದರು.

ಇದನ್ನೂ ಓದಿ :  ಸೆಪ್ಟೆಂಬರ್‌ ೩೦ರಂದು ವಿವಿಧೆಡೆ ಅಡಿಕೆ ಧಾರಣೆ

೨೮ ರಂದು ಬೆಳಿಗ್ಗೆ ಗೋವಾದ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ ೨೭ ನವೆಂಬರ್ ೨೦೨೫ ರಿಂದ ೭ ಡಿಸೆಂಬರ್ ೨೦೨೫ ರವರಿಗೆ ನಡೆಯಲಿರುವ ಮಠದ ೫೫೦ ವರ್ಷದ ಮಹೋತ್ಸವದ ಸಮಯದಲ್ಲಿ ಸ್ಥಾಪಿಸಲಿರುವ ೭೭ ಅಡಿ ಬೃಹತ್ ಶ್ರೀ ರಾಮಚಂದ್ರ ದೇವರ ಕಂಚಿನ ಪ್ರತಿಮೆಯ ಪ್ರತಿ ಕೃತಿಯನ್ನು ಪರಮಪೂಜ್ಯ ಸ್ವಾಮೀಜಿಯವರು ಅನಾವರಣಗೊಳಿಸಿದರು. ಬಳಿಕ ಶ್ರೀಗಳ ಬೃಹತ್ ಶ್ರೀ ರಾಮ ನಾಮ ಜಪ ಅಭಿಯಾನ ಹಿನ್ನೆಲೆ ಸುಮಾರು ೩೦೦೦ಕ್ಕೂ ಅಧಿಕ ಜಾಪಕರಿಂದ, ೩೯,೦೬,೫೭೫ ಶ್ರೀ ರಾಮ ನಾಮ ತಾರಕ ಮಂತ್ರದ ಜಪವು ೨ ಗಂಟೆಗಳ ಅವಧಿಯಲ್ಲಿ ನಡೆಯಿತು.

ಇದನ್ನೂ ಓದಿ  :  ಜಲ ಜೀವನ ಮಿಷನ್‌ ಗೆ ಅಂತಾರಾಷ್ಟ್ರೀಯ ಮನ್ನಣೆ

೨೯ ರಂದು ಬೆಳಿಗ್ಗೆ ಆರೋಗ್ಯ ತಪಾಸಣೆ, ೨೫೦ಕ್ಕೂ ಅಧಿಕ ಜನರಿಂದ ರಕ್ತದಾನ ಶಿಬಿರ ನಡೆಯಿತು. ದ್ವಾರಕನಾಥ ಭವನದಿಂದ ಆರಂಭವಾದ ದಿಗ್ವಿಜಯ ಮಹೋತ್ಸವವು ನ್ಯಾಷನಲ್ ಕಾಲೇಜ್ ಸಿಗ್ನಲ್, ಗಾಂಧಿ ಬಜಾರ್ ರೋಡ್ ಮೂಲಕ ಪುನಹ ದ್ವಾರಕನಾಥ ಭವನಕ್ಕೆ ಬಂದು ತಲುಪಿತು. ಈ ವೇಳೆ ೯ ವಿವಿಧ ರೋಡ್ ಶೋಗಳು, ೯ ಅತಿ ಆಕರ್ಷಿತ ಟ್ಯಾಬ್ಲೋಗಳು ಜನಾಕರ್ಷಣೆಗೊಂಡವು. ಕರಾವಳಿಯ ಹುಲಿಯ ವೇಷ, ಚೆಂಡೆ ವಾದನೆ, ಕರ್ನಾಟಕ ಮತ್ತು ಕೇರಳದ ಜನಪದ ವೇಷಗಳು ಈ ದಿಗ್ವಿಜಯ ಮಹೋತ್ಸವದ ಚಂದವನ್ನು ಇನ್ನಷ್ಟು ಹೆಚ್ಚಿಸಿತ್ತು.

ಇದನ್ನೂ ಓದಿ :  ಸಾಧಕರ ತರಬೇತುದಾರಳಿಗೆ ಸನ್ಮಾನ

ಶ್ರೀ ಮಠದ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಶ್ರೀನಿವಾಸ ದೆಂಪೊ, ಬೆಂಗಳೂರು ಚಾತುರ್ಮಾಸ್ಯ ಕಮಿಟಿಯ ಗೌರವಾಧ್ಯಕ್ಷ ದಯಾನಂದ ಪೈ, ಅಧ್ಯಕ್ಷ ಅಮರನಾಥ ಕಾಮತ, ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಸೇರಿದಂತೆ ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಸಹಸ್ರಾರು ಸಮಾಜ ಬಾಂಧವರು ದಿಗ್ವಿಜಯ ಮಹೋತ್ಸವದಲ್ಲಿ ಪಾಲ್ಗೊಂಡು, ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದುಕೊಂಡರು. ಶ್ರೀಗಳು ೧ನೇ ಅಕ್ಟೋಬರ್ ೨೦೨೪ ರಂದು ತಮ್ಮ ಮುಂದಿನ ಅನಂತ ನಗರದ ಮೊಕ್ಕಾಂಗೆ ತೆರಳಿಲಿದ್ದಾರೆಂದು ಬೆಂಗಳೂರು ಚಾತುರ್ಮಾಸ್ಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕಾಮತ ತಿಳಿಸಿದ್ದಾರೆ.

ಇದನ್ನೂ ಓದಿ :  ಅಂದರ್‌-ಬಾಹರ್‌ ಆಡುತ್ತಿದ್ದ ಐವರ ವಿರುದ್ಧ ಪ್ರಕರಣ