ಭಟ್ಕಳ(Bhatkal): ಇಲ್ಲಿನ ಬ್ಲಾಕ್ ಕಾಂಗ್ರೆಸ್ (Congress) ವತಿಯಿಂದ ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ (Gandhi jayanti) ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ (Lal Bahadur Shastri) ಜಯಂತಿ ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ(Mankal Vaidya), ಮಹಾತ್ಮ ಗಾಂಧೀಜಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣಿಯಲ್ಲಿ ಇದ್ದವರು. ಇಂದಿಗೆ ೧೦೦ ವರ್ಷಗಳ ಹಿಂದೆ ಬೆಳಗಾವಿಯಲಿ ಅಧಿವೇಶನ ಮಾಡಿ ಭಾರತದಿಂದ ಬ್ರಿಟಿಷ್ ರನ್ನು ಹೇಗೆ ಓಡಿಸಬೇಕು ಎಂಬ ಯೋಜನೆ ರೂಪಿಸಿದರು. ನಾವು ಕಾಂಗ್ರೆಸ್ ಪಕ್ಷದವರು ಎಲ್ಲಾ ಕಡೆಗಳಲ್ಲಿ ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಇದು ನಮ್ಮೆಲ್ಲರ ಯೋಗ ಎಂದು ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : Tippu Flag/ ಧಾರವಾಡದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ !
ಜಾಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ಇಮ್ರಾನ್ ಲಂಕಾ ಮಾತನಾಡಿ, ನಾವು ಸಣ್ಣವರಿದ್ದಾಗ ಗಾಂಧಿ ಜಯಂತಿ ಕಾರ್ಯಕ್ರಮ ಮಾಡುತ್ತ ಗಾಂಧಿಜಿಯವರ ಆದರ್ಶ ಗುಣಗಳನ್ನು ಕೇಳುತ್ತ ಬಂದಿದ್ದೀವೆ. ಗಾಂಧೀಜಿ ಬ್ರಿಟಿಷರ ವಿರುದ್ದ ಹೋರಾಡುತ್ತ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ : ವಿದ್ಯುತ್ ತಂತಿ ತಗುಲಿ ಯುವಕ ಸಾವು
ತಂಜೀಮ್ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ ಮಾತನಾಡಿ, ಗಾಂಧೀಜಿಯವರು ಎಲ್ಲ ವರ್ಗದ ಸಮಾಜದವರಿಗೂ ಸಮಾನತೆಗಾಗಿ ಹೋರಾಟ ಮಾಡಿದವರು. ಇಂದು ನಮ್ಮ ಸಮಾಜಕ್ಕೆ ಏನಾಗಬೇಕು ಎನ್ನುವುದನ್ನು ಗಾಂಧೀಜಿಯವರ ಸಂದೇಶ ಸಾರುವ ಕೆಲಸ ಮಾಡೋಣ ಎಂದರು.
ಇದನ್ನೂ ಓದಿ : ಐಸಿಎಸ್ಇ ಪಠ್ಯಪುಸ್ತಕದಲ್ಲಿ ಕವಿ ಶ್ರೀಧರ ಶೇಟ್ ಕವನ
ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಮಹಾತ್ಮ ಗಾಂಧೀಜಿಯವರು ನಮ್ಮ ಪಕ್ಷದ ನೇತೃತ್ವ ವಹಿಸಿ ಇಂದಿಗೆ ೧೦೦ ವರ್ಷ ಸಂದಿದೆ. ಗಾಂಧೀಜಿಯವರ ಬಗ್ಗೆ ಬಿಜೆಪಿಯವರು ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ. ಅವರು ಮಾಡಿದ ಮಹತ್ಕಾರ್ಯವನ್ನು ನಾವು ಪಾಲಿಸಿಕೊಂಡು ಹೋಗಬೇಕಾಗಿದೆ ಎಂದರು.
ಇದನ್ನೂ ಓದಿ : Meesho App / ಆನ್‌ಲೈನ್ ಶಾಪಿಂಗ್‌ನಲ್ಲಿ ೬೩ ಸಾವಿರ ರೂ. ವಂಚನೆ
ಇದಕ್ಕೂ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀ ಯವರ ಫೋಟೋಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಗ್ಯಾರಂಟಿ ಅಧ್ಯಕ್ಷರಾದ ರಾಜು ನಾಯ್ಕ ಸ್ವಾಗತಿಸಿದರು. ಜಗದೀಶ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ (Gandhi Jayanti) ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಯನಾ ನಾಯ್ಕ, ಪುರಸಭೆ ಪ್ರಭಾರ ಅಧ್ಯಕ್ಷ ಅಲ್ತಾಪ್ ಖರೂರಿ, ನಾರಾಯಣ ನಾಯ್ಕ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆ