ಭಟ್ಕಳ (Bhatkal): ಮಹಾತ್ಮ ಗಾಂಧೀಜಿ ಜಯಂತಿಯ (Gandhi Jayanti) ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆಯು (NSS) ದೇಶಾದ್ಯಂತ ಕಾಲೇಜುಗಳಲ್ಲಿ ಸೆಪ್ಟೆಂಬರ್ ೧೭ ರಿಂದ ಅ.೨ರ ವರೆಗೆ ‘ಸ್ವಚ್ಛ ತಾ ಹೀ ಸೇವಾ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅದರಂತೆ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ (Sudhindra College) ಎನ್.ಎಸ್.ಎಸ್ ಘಟಕವು ಅ. ೨ರಂದು ಭಟ್ಕಳದ ಮುಂಡಳ್ಳಿ ಗ್ರಾಮದ ನೆಸ್ತಾರ ಕಡಲ ತೀರದಲ್ಲಿ ಪ್ಲಾಸ್ಟಿಕ್ ಮುಕ್ತ ಬೀಚ್ ಅಭಿಯಾನವನ್ನು ಹಮ್ಮಿಕೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಉನ್ನತ ಭಾರತ ಅಭಿಯಾನ, ಯುತ್ ರೆಡ್ ಕ್ರಾಸ್ ಘಟಕ, ರೊಟರಾಕ್ಟ ಘಟಕದ ಸ್ವಯಂಸೇವಕರ ಸಹಕಾರದೊಂದಿಗೆ ಸಮುದ್ರ ತೀರವನ್ನು ಸ್ವಚ್ಛಗೊಳಿಸಲಾಯಿತು. “ಗಾಂಧಿ ಇನ್ ಮಿ” ಎಂಬ ಡಿಜಿಟಲ್ ಪ್ರತಿಜ್ಞೆಯನ್ನು ಪಡೆಯುವ ಮಾಹಿತಿಯನ್ನು ಸರ್ವರಿಗೂ ನೀಡಲಾಯಿತು. NSS ಸ್ವಯಂಸೇವಕರು, ಕಾರ್ಯಕ್ರಮ ಅಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಿಜೆಪಿಯಿಂದ ಶಾಲಾವರಣ ಸ್ವಚ್ಛತೆ