ಭಟ್ಕಳ (Bhatkal): ನಗರೋತ್ಥಾನ (Urban development) ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವ ಹಾಗೂ ಈಗಾಗಲೇ ಮಾಡಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂದು ನಗರದ ವಿ.ಟಿ.ರಸ್ತೆಯ ನಾಗರಿಕರು ಆರೋಪಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಗರಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಆಸರಕೇರಿ ವೆಂಕಟೇಶ್ವರ ಯುವಕ ಸಂಘದ ನೇತೃತ್ವದಲ್ಲಿ ವಿ.ಟಿ.ರಸ್ತೆಯ ಆಸರಕೇರಿ ಮತ್ತು ಸೋನಾರಕೇರಿ ವಾರ್ಡಿನ ನಾಗರಿಕರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ವಾರ್ಡಿನ ಅನೇಕ ಸಮಸ್ಯೆಗಳ ಬಗ್ಗೆ ಕಳೆದ ಹಲವು ಬಾರಿ ಚರ್ಚೆಯಾಗಿದೆ. ಆದರೆ ಇನ್ನೂ ತನಕ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು  ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಚಕ್ರ ಎಸೆತದಲ್ಲಿ ದೇಶಕ್ಕೆ ತೃತೀಯ ಸ್ಥಾನ

ನಗರೋತ್ಥಾನ (Urban development) ಯೋಜನೆಯಡಿಯಲ್ಲಿ ಸೋನಾರಕೇರಿಯಿಂದ ಆಸರಕೇರಿಯ ಮುಖ್ಯ ರಸ್ತೆಗೆ ಡಾಂಬರೀಕರಣ ಮಾಡಲು ಅನುದಾನ ಮಂಜೂರಾಗಿ ೨ ವರ್ಷ ಕಳೆದಿದೆ‌. ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ನಗರ ಭಾಗದ ಈ ಮುಖ್ಯ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಓಡಾಟವಿರುವ ಕಾರಣ ಸಂಪೂರ್ಣ ಹದಗೆಟ್ಟ ರಸ್ತೆಯಲ್ಲಿ ನಾಗರಿಕರು ದಿನನಿತ್ಯ ಓಡಾಡುವುದು ದುಸ್ತರವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ :  ಸತತ ೨ನೇ ಬಾರಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕಿಗೆ ಸಮಗ್ರ ವೀರಾಗ್ರಣಿ

ಈ ಎರಡೂ ವಾರ್ಡಗಳಲ್ಲಿ ಪ್ರಮುಖ ರಥ ಜಾತ್ರೆ, ಉತ್ಸವ ಹಾಗೂ ಭಜನೆ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ. ರಸ್ತೆಯ ದುಸ್ತಿತಿಯ ಕಾರಣ ಈ ಎಲ್ಲಾ ಕಾರ್ಯಕ್ರಮಕ್ಕೂ ಕಳೆದ ಎರಡು ವರ್ಷದಿಂದ ಅನಾನುಕೂಲವಾಗಿದೆ. ಗುತ್ತಿಗೆದಾರ ಸಮರ್ಪಕವಾಗಿ ಈ ಕೂಡಲೇ ಕಾಮಗಾರಿ ಪೂರ್ಣಗೊಳಿಸದಿದ್ದರೆ, ಅತಿ ಹೆಚ್ಚು ತೊಂದರೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಬಿಜೆಪಿ ಯುವ ಮೋರ್ಚಾದಿಂದ ಸದಸ್ಯತ್ವ ಅಭಿಯಾನ

ಈ ನಗರೋತ್ಥಾನ ಯೋಜನೆಯ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಉಭಯ ವಾರ್ಡಗಳಲ್ಲಿ ಮಾಡಿರುವ ಕಾಂಕ್ರಿಟ್ ರಸ್ತೆಯ ಕಾಮಗಾರಿ ತೀರಾ ಕಳಪೆ ಮಟ್ಟದ್ದಾಗಿರುತ್ತದೆ. ಇದರ ಬಗ್ಗೆ ಮರಸಭೆಗೆ ಮಾಹಿತಿ ಇದ್ದರೂ ಗುತ್ತಿಗೆದಾರನ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿರುವುದು ದುರಾದೃಷ್ಟವಾಗಿದೆ. ಆದ ಕಾರಣ, ಕಳಪೆ ಕಾಮಗಾರಿ ಹಾಗೂ ವಿಳಂಬ ಕಾಮಗಾರಿ ಮಾಡುತ್ತಿರುವ ಈ ಗುತ್ತಿಗೆದಾರನ ಬಗ್ಗೆ ಜಿಲ್ಲಾಧಿಕಾರಿ (district commissioner) ಗಮನಕ್ಕೆ ತರುವ ಮೂಲಕ ಟೆಂಡರನ್ನು ಮೊಟಕುಗೊಳಿಸಬೇಕು. ಕೂಡಲೇ ಹೊಸ ಟೆಂಡ‌ರ್ ಕರೆದು ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಿ ರಸ್ತೆ ಡಾಂಬರೀಕರಣ ಹಾಗೂ  ಮಂಜೂರಾಗಿರುವ ಇನ್ನಿತರ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ :  ಎಡಿಜಿಪಿ ಚಂದ್ರಶೇಖರ ಅಮಾನತಿಗೆ ಜೆಡಿಎಸ್ ಆಗ್ರಹ

ಈಗಾಗಲೇ ರಸ್ತೆಯು ಸಂಪೂರ್ಣ ಹದಗೆಟ್ಟು ಸಾರ್ವಜನಿಕರು ಓಡಾಡಲು ದುಸ್ತರವಾಗಿರುವುದರಿಂದ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಒಂದು ತಿಂಗಳ ಕಾಲಾವಧಿಯ ಒಳಗೆ ರಸ್ತೆ ಪೂರ್ಣಗೊಳಿಸದಿದ್ದಲ್ಲಿ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಹೊಳೆಯಲ್ಲಿ ಬಿದ್ದು ಕಾಣೆಯಾಗಿದ್ದ ಕೃಷಿಕನ ಮೃತದೇಹ ಪತ್ತೆ

ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷ ವಸಂತ ನಾಯ್ಕ, ಕಾರ್ಯದರ್ಶಿ ಶಶಿಧರ ನಾಯ್ಕ,  ಶ್ರೀಕಾಂತ ನಾಯ್ಕ ,ವೆಂಕಟೇಶ ನಾಯ್ಕ, ಪ್ರಕಾಶ ನಾಯ್ಕ, ಪಾಂಡುರಂಗ ನಾಯ್ಕ, ಪುರಸಭಾ ಸದಸ್ಯರಾದ ಆರ್ ಟಿ ಶೇಟ್, ಸಂದೀಪ ಶೇಟ, ಜಗದೀಶ ಮಹಾಲೆ, ರಾಜೇಶ ಮಹಾಲೆ, ಕೃಷ್ಣ ಮಹಾಲೆ, ಯುವಕ ಸಂಘದ ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.