ಹೊನ್ನಾವರ (Honavar): ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ೮೦ ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಅರೇಅಂಗಡಿಯ ಹೈನಗದ್ದೆ ನಿವಾಸಿ ನಾಗರಾಜ ಗಣಪತಿ ಮಹಾಲೆಯವರ ಮನೆಯಲ್ಲಿ ಕಳ್ಳತನ ನಡೆದಿದೆ‌. ಅ.೩ರ ಮಧ್ಯಾಹ್ನ ೩ ಗಂಟೆಯಿಂದ ಮರುದಿನ ಬೆಳಿಗ್ಗೆ ೧೦ರ ನಡುವಿನ ಘಟನೆ ನಡೆದಿದೆ. ಹೊನ್ನಾವರ (Honavar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ಕ್ರಮ‌ಕೈಗೊಂಡಿದ್ದಾರೆ.

ಇದನ್ನೂ ಓದಿ : Navaratri Utsav/ ಮೊದಲ ದಿನವೇ ೧.೩೪ ಲಕ್ಷಕ್ಕೂ ಹೆಚ್ಚು ಭಕ್ತರು

ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಮನೆಯ ಒಳಗಡೆ ಕಳ್ಳರು ಒಳನುಗ್ಗಿದ್ದಾರೆ. ಕೋಣೆಯಲ್ಲಿರುವ ಕಟ್ಡಿಗೆಯ ಕಪಾಟಿನ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದಿದ್ದಾರೆ. ಕಪಾಟಿನ ಡ್ರಾವರನ್ನು ಮೀಟಿ ಮುರಿದು ಅದರಲ್ಲಿದ್ದ ೮೦ ಸಾವಿರ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ : ಶ್ರೀ ಗುರು ಸುಧೀಂದ್ರ ಕಾಲೇಜು ಶೇ.೯೪ ಫಲಿತಾಂಶ