ಪುತ್ತೂರು (Puttur): ಕನ್ನಡಿಗರ ಮನಗೆದ್ದಿರುವ ಭಟ್ ಎನ್ ಭಟ್ (Bhat N Bhat) ಹೆಸರಿನ ಯೂಟ್ಯೂಬ್ ಖ್ಯಾತಿಯ ಸುದರ್ಶನ್ ಭಟ್ ಬೆದ್ರಡಿ ಕೃತಿ ಎನ್ನುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ ಎನ್ ಭಟ್ (Bhat N Bhat) ಯೂಟ್ಯೂಬ್ ಚಾನೆಲ್ ಮೂಲಕ ಕರಾವಳಿಯ ಅಡುಗೆಗಳ ಬಗ್ಗೆ ತಮ್ಮ ವಿಭಿನ್ನ ನಿರೂಪಣೆ ಮಾಡುತ್ತಾ, ಅಡುಗೆ ಮಾಡುತ್ತಿದ್ದ ವಕೀಲ ಸುದರ್ಶನ್ ಭಟ್ ಬೆದ್ರಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ವೃತ್ತಿಯಲ್ಲಿ ವಕೀಲರಾಗಿರುವ ಸುದರ್ಶನ್ ಭಟ್ , ಅಡುಗೆ ಭಟ್ಟರು ಆಗಿದ್ರು. ಶುಕ್ರವಾರ ಸುದರ್ಶನ್ ಪುತ್ತೂರು ಹವ್ಯಕ ಸಭಾ ಭವನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೃತಿ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ : ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು
ಸುದರ್ಶನ್ ಭಟ್, ಕಾಸರಗೋಡಿನ ಸೀತಂಗೋಳಿಯವರು. ಕೃತಿ ಕಡಬ ತಾಲೂಕಿನ ಬೆಳಂದೂರಿನವರು. ಖಾಸಗಿ ಶಾಲೆ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಭಟ್ ಎನ್ ಭಟ್ ಚಾನೆಲ್ ಯಶಸ್ಸಿಗೆ ಮನೆಯ ಎಲ್ಲ ಸದಸ್ಯರು ಕೆಲಸ ಮಾಡ್ತಿದ್ದಾರೆ. ಕಾನೂನು ಕಲಿತಿರುವ ಸುದರ್ಶನ್ ಭಟ್ ಅಡುಗೆ ಮಾಡಿದ್ರೆ, ಸಹೋದರ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಅಕ್ಕ ಕೂಡ ಸಬ್ ಟೈಟಲ್ ಸೇರಿದಂತೆ ಯುಟ್ಯೂಬ್ ಕೆಲಸದಲ್ಲಿ ಸಹಾಯ ಮಾಡ್ತಾರೆ.
ಇದನ್ನೂ ಓದಿ : ಬಚ್ಚಲು ಕೋಣೆಯಲ್ಲಿ ನೇಣು ಬಿಗಿದುಕೊಂಡ ಕೃಷಿಕ