ಭಟ್ಕಳ (Bhatkal): ಅಪ್ರಾಪ್ತ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನಿಗೆ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದ ವ್ಯಕ್ತಿಯ ಮೇಲೆ ಸುಮೊಟೋ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (VHP) ಭಟ್ಕಳ ಘಟಕದಿಂದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೋಲಿಸ್ ನಿರೀಕ್ಷಕರಿಗೆ ಶನಿವಾರದಂದು ಮನವಿ ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇಂದು (ಅ.೫) ಸಂಜೆ ೫ ಗಂಟೆಗೆ ಭಟ್ಕಳದ ಹುರುಳಿಸಾಲಿನಲ್ಲಿ ಮಹಾರಾಷ್ಟ್ರದ (Maharashtra) ಅಪ್ರಾಪ್ತ ಹಿಂದೂ ಹುಡುಗಿಯನ್ನು ಓಡಿಸಿಕೊಂಡು ಬಂದ ಜಾರ್ಖಂಡ (jarkhand) ಮೂಲದ ಅಪ್ರಾಪ್ತ ಮುಸ್ಲಿಂ ಹುಡುಗನಿಗೆ ಹಾಗೂ ಅಪ್ರಾಪ್ತ ವಯಸ್ಸಿನ ಹಿಂದು ಹುಡುಗಿಗೆ ಒಂದೇ ಮನೆಯಲ್ಲಿ ಒಟ್ಟಿಗೆ ಇರಲು ಬಾಡಿಗೆ ಮನೆ ಕೊಡಿಸಲು ಬಂದಾಗ ಸ್ಥಳೀಯರು ಅನುಮಾನಗೊಂಡಿದ್ದರು. ವಿಚಾರಿಸಿದಾಗ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿ ಎಂದು ಗಮನಕ್ಕೆ ಬಂದಾಗ ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಜೋಡಿಯನ್ನು ಒಪ್ಪಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ರಾಯಣ್ಣ ಚೆನ್ನಮ್ಮ ಬ್ರಿಗೇಡ್: ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ

ಈ ಪ್ರಕರಣದಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ಇಬ್ಬರೂ ಸಹ ಅಪ್ರಾಪ್ತ ವಯಸ್ಸಿನವರು ಹಾಗೂ ಬೇರೆ ಬೇರೆ ಕೋಮಿನವರು ಎಂದು ಗೊತ್ತಿದ್ದರೂ ಸಹ ಯುವಕ ಅವರಿಗೆ ನೆರವಾಗಿದ್ದಾನೆ. ಅವರ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಅವರಿಬ್ಬರನ್ನು ಒಂದೇ ಮನೆಯಲ್ಲಿ ಇರಿಸುವ ಉದ್ದೇಶದಿಂದ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದ್ದಾನೆ. ಯುವಕನ ಮೇಲೆ ಲವ್ ಜಿಹಾದ್ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಈ ಮೊದಲು ಸಹ ಇಂತಹ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಸಂದೇಹವಿದೆ. ಈಗಾಗಲೇ ಇಂತಹ ಹಲವಾರು ಪ್ರಕರಣಗಳು ನಡೆಯುತ್ತಿದ್ದು ಈ ಪ್ರಕರಣವು ಬೆಳಕಿಗೆ ಬಂದಿದೆ ಎಂದು ವಿಶ್ವ ಹಿಂದು ಪರಿಷತ್ (VHP) ಮನವಿಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಅಕ್ಟೋಬರ್‌ ೫ರಂದು ವಿವಿಧೆಡೆ ಅಡಿಕೆ ಧಾರಣೆ

ಈ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಓಡಿಸಿಕೊಂಡು ಬಂದಂತ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಹುಡುಗನಿಗೆ ಮನೆ ಕೊಡಿಸಲು ಸಹಾಯ ಮಾಡಿದ ವ್ಯಕ್ತಿಯು ಸಹ ಅಪರಾಧಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಈತನ ಮೇಲೆ ಸುಮೊಟೋ ಕೇಸ್ ದಾಖಲಿಸಬೇಕು. ಜೊತೆಗೆ ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಭಟ್ಕಳ ಹಿಂದೂ ಪರಿಷತ್ ಆಗ್ರಹಿಸಿದೆ.

ಇದನ್ನೂ ಓದಿ : ಜರ್ಮನಿ ಹೊರಟ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸಂಘಟನೆ ಕಾರ್ಯದರ್ಶಿ ಮಂಜುನಾಥ ದೇವಾಡಿಗ, ಶ್ರೀಕಾಂತ ನಾಯ್ಕ, ರಾಘವೇಂದ್ರ ನಾಯ್ಕ, ಲೋಕೇಶ ದೇವಾಡಿಗ, ಶಿವರಾಮ ದೇವಾಡಿಗ, ದಯಾನಂದ ಜಾಲಿ, ವಿವೇಕ ನಾಯ್ಕ ಜಾಲಿ, ಕುಮಾರ ನಾಯ್ಕ ಹನುಮಾನ ನಗರ, ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : Bhat N Bhat ಖ್ಯಾತಿಯ ಸುದರ್ಶನ ಭಟ್ ಈಗ ಸಂಸಾರಿ