ಭಟ್ಕಳ (Bhatkal):  ಇಲ್ಲಿನ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪುರಸಭೆ ಗಾರ್ಡನ್‌ಗೆ ನುಗ್ಗಿ ಕಾರು ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅಪಘಾತದಲ್ಲಿ (Car Accident) ಚಾಲಕ ಮುಹಮ್ಮದ್ ಶಾಹಿದ್‌ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರು ಭಟ್ಕಳ ತಾಲೂಕಿನ ಹನೀಫಾಬಾದ್‌ನಿಂದ ಗುಳ್ಮಿಗೆ ತೆರಳುತ್ತಿತ್ತು ಎನ್ನಲಾಗಿದೆ. ಹೊಟೇಲ್ ಕ್ವಾಲಿಟಿ ಬಳಿ ಕೆಳಮುಖ ರಸ್ತೆಯಲ್ಲಿ ಕಾರು ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರು ಪುರಸಭೆಯ ಆಡಳಿತದಲ್ಲಿರುವ ಗಾರ್ಡನ್‌ಗೆ ನುಗ್ಗಿದೆ. ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಸ್ಥಳಕ್ಕಾಗಮಿಸಿ ಚಾಲಕ ಹೊರಹೋಗಲು ಸಹಾಯ ಮಾಡಿದ್ದಾರೆ. ಘಟನೆ ವೇಳೆ ಕಾರಿನಲ್ಲಿ ಪ್ರಯಾಣಿಕರಿರಲಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಭಟ್ಕಳ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಅಂತರ ಧರ್ಮೀಯ ಜೋಡಿಗೆ ನೆರವಾದವನ ವಿರುದ್ಧ ಕ್ರಮಕ್ಕೆ ವಿಹಿಂಪ ಆಗ್ರಹ