ಭಟ್ಕಳ (Bhatkal) : ತಾಲೂಕಿನ ಶಿರಾಲಿಯ ಸಾಲೆಮನೆಯ ಮಠದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ (Kannada sahitya parishat) ದಸರಾ ಕಾವ್ಯೋತ್ಸವವು (dasara kavyotsava) ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸಾಹಿತಿಯೂ ಆಗಿರುವ ನ್ಯಾಯವಾದಿ ಶಂಕರ ಕೆ. ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸುತ್ತಮುತ್ತಲಿನ ವಿದ್ಯಮಾನಗಳಿಗೆ ಕವಿಮನಸಿನ ಪ್ರತಿಸ್ಪಂದನದಿಂದ ಕಾವ್ಯ ಸೃಷ್ಟಿಯಾಗುತ್ತದೆ. ಅಂತಹ ಕಾವ್ಯ ಸಮಾಜಕ್ಕೆ ಬೆಳಕನ್ನು ಚೆಲ್ಲುತ್ತದೆ. ಉತ್ತರ ಕನ್ನಡ ಜಿಲ್ಲೆಯ ದಿನಕರ ದೇಸಾಯಿ (Dinakar Desai), ಗೌರೀಶ ಕಾಯ್ಕಿಣಿ (Gourish Kaikini), ಯಶವಂತ ಚಿತ್ತಾಲ (Yashavant Chittal), ವಿಡಂಬಾರಿಯವರು (Vidambari) ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಸರಾ ಕಾವ್ಯೋತ್ಸವದಂತಹ (Dasara Kavyotsava) ಕಾರ್ಯಕ್ರಮದ ಮೂಲಕ ಸಾಹಿತ್ಯಾಸಕ್ತರಿಗೆ, ಬರಹಗಾರರಿಗೆ ವೇದಿಕೆ ಒದಗಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದ ಶಂಕರ ನಾಯ್ಕ, ಸ್ವರಚಿತ ಕವಿತೆ ವಾಚಿಸಿದರು.
ಇದನ್ನೂ ಓದಿ : ದೇವರ ವಿಗ್ರಹ ಭಗ್ನ; ಆತಂಕದ ವಾತಾವರಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ದೇವಾಲಯಗಳು ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಜೊತೆಗೆ ವೈಚಾರಿಕತೆಯನ್ನು ಮೂಡಿಸುವ ಕೇಂದ್ರವೂ ಆಗಬೇಕು. ಈ ನೆಲೆಯಲ್ಲಿ ದಸರಾ ಕಾವ್ಯೋತ್ಸವ ಸಿದ್ಧಿವಿನಾಯಕ ದೇಗುಲದಲ್ಲಿ ನಡೆಯುತ್ತಿರುವುದು ವಿಶೇಷ. ಈ ಸಂದರ್ಭದಲ್ಲಿ ಮಠದ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸಾಹಿತ್ಯಿಕ ಕಾರ್ಯಕ್ರಮದ ಜೊತೆಗೆ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಪುರಸ್ಕರಿಸುತ್ತಿರುವುದು ವಿಶಿಷ್ಠವಾಗಿದೆ. ಇಂತಹ ಕಾರ್ಯಕ್ರಮದ ಮೂಲಕ ಹಿರಿಯ ಕವಿಗಳ ಜೊತೆಗೆ ಉದಯೋನ್ಮುಖ ಕವಿಗಳಿಗೆ ವೇದಿಕೆಯನ್ನೊದಗಿಸುವ ಕಾರ್ಯವನ್ನು ಪರಿಷತ್ತು ಮಾಡುತ್ತಿದೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಪ್ರವಾಸಕ್ಕೆ ಬಂದಿದ್ದ ಪಿಯು ವಿದ್ಯಾರ್ಥಿ ನೀರುಪಾಲು
ಕವಿಗೋಷ್ಠಿಯಲ್ಲಿ ಸಾಹಿತಿ ಶ್ರೀಧರ ಶೇಟ, ಸುರೇಶ ಮುರ್ಡೇಶ್ವರ, ನಂದನ ನಾಯ್ಕ, ಎಚ್.ಎನ್. ನಾಯ್ಕ, ರಾಘವೇಂದ್ರ ಮಡಿವಾಳ, ಕೃಷ್ಣ ಮೊಗೇರ ಅಳ್ವೆಕೋಡಿ, ರಾಜೀವಿ ಮೊಗೇರ, ಹೇಮಲತಾ ರಾವ್, ನಾಗರತ್ನ ನಾಯ್ಕ ಮುಂತಾದ ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪದವಿ ಪೂರ್ವ ಹಂತದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಇದನ್ನೂ ಓದಿ : ಸಹ ಕೈದಿ ಮೇಲೆ ಮಾರಣಾಂತಿಕ ಹಲ್ಲೆ
ಶಿಕ್ಷಕ ದೇವಿದಾಸ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೇಮಲತಾ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಮಂಜುನಾಥ ನಾಯ್ಕ, ರಾಜೇಶ ಮೊಗೇರ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮಾರಣಾಂತಿಕ ಹಲ್ಲೆ ಯತ್ನ; ಜೀವ ಬೆದರಿಕೆ