ಶಿವಮೊಗ್ಗ (Shivamogga): ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡೇಟು ಬಿದ್ದಿದೆ. ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರೌಡಿ ಶೀಟರ್ ಅಮ್ಮು ಅಲಿಯಾಸ್ ಹಬಿಬುಲ್ಲಾ ಎಂಬುವವನ ಕಾಲಿಗೆ ಗುಂಡೇಟು ತಗುಲಿದೆ. ಶಿವಮೊಗ್ಗ (Shivamogga) ನಗರದ ಹೊರವಲಯದಲ್ಲಿರುವ ಗರುಡ ಲೇಔಟ್ ನಲ್ಲಿ ರೌಡಿ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಈತನ ಮೇಲೆ ಉದ್ಯಮಿ ನಾಸೀರ್ ಖಾನ್ ಮೇಲೆ ಆಯುಧಗಳಿಂದ ಹಲ್ಲೆ ಮಾಡಿದ ಆರೋಪವಿದೆ.

ಇದನ್ನೂ ಓದಿ : ಸಂಸದರ ಅಹವಾಲು ಸ್ವೀಕಾರ ಸ್ಥಳ ಬದಲಾವಣೆ

ಪೊಲೀಸರು ಹಿಡಿಯುವ ವೇಳೆ ಈತ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ. ಈ ವೇಳೆ ರೌಡಿಗೆ ತುಂಗಾನಗರ ಠಾಣೆ ಇನ್ಸ್ಪೆಕ್ಟರ್ ಗುರುರಾಜ ಎಚ್ಚರಿಕೆ ನೀಡಿದ್ದರು. ಆದರೂ ಪಿಸಿ ಜಯಪ್ಪ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದ. ಈ ವೇಳೆ ಆರೋಪಿ ಕಾಲಿಗೆ  ಇನ್ಸ್ಪೆಕ್ಟರ್ ಗುರುರಾಜ ಫೈಯರ್ ಮಾಡಿದ್ದಾರೆ.

ಇದನ್ನೂ ಓದಿ : ಮೊಯಿದ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ

ಜುಲೈ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಹಬಿಬುಲ್ಲಾನನ್ನು 307 ಪ್ರಕರಣದಲ್ಲಿ ಬಂಧಿಸಲು ಹೋದಾಗ ಈ  ಘಟನೆ ನಡೆದಿದೆ. ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದರೋಡೆಕೋರನಿಗೆ ಗುಂಡಿನೇಟು; ಪೊಲೀಸರಿಗೆ ಗಾಯ

ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನಕುಮಾರ, ಸೆ. ೧೩ರಂದು ತುಂಗಾನಗರ ಠಾಣೆಯಲ್ಲಿ 307 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವ್ಯಕ್ತಿಯೊಬ್ಬರಿಗ ಬೆನ್ನಿಗೆ ಚಾಕು ಹಾಕಿ ಆರೋಪಿ ಪರಾರಿಯಾಗಿದ್ದ. ಆರೋಪಿ ಪತ್ತೆಗಾಗಿ ಸಿಪಿಐ ಗುರುರಾಜ ನೇತೃತ್ವದ ತಂಡ ರಚನೆ‌ ಮಾಡಲಾಗಿತ್ತು. ಆರೋಪಿ ಹುಡುಕಾಟ ನಡೆಸುವ ವೇಳೆ ಪೊಲೀಸರ ಮೇಲೆ ಹಬೀಬುಲ್ಲಾ ಹಲ್ಲೆಗೆ ಮುಂದಾಗಿದ್ದ ಎಂದಿದ್ದಾರೆ.

ಇದನ್ನೂ ಓದಿ :  ಅ.೧೦ರಿಂದ ಸಾರ್ವಜನಿಕ ಶಾರದೋತ್ಸವ

ಆರೋಪಿ ಇಷ್ಟು ದಿನ ಕಾಣೆಯಾಗಿದ್ದ. ಇವತ್ತು ಆರೋಪಿ ಇರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಆಗ ಗಾಳಿಯಲ್ಲಿ ಗುಂಡು ಹಾರಿಸಿ ಸಿಪಿಐ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಆಗ ಹಲ್ಲೆ ಮಾಡಲು ಮುಂದಾದಾಗ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಗಮನಸೆಳೆದ ದಸರಾ ಕಾವ್ಯೋತ್ಸವ

ಆರೋಪಿ ಹಬೀಬುಲ್ಲಾ ಮೇಲೆ ರೌಡಿ ಶೀಟರ್, ಕೊಲೆ ಕೇಸ್ ಸೇರಿ ಆರು ಪ್ರಕರಣಗಳಿವೆ. ೨೦೨೦ ರಲ್ಲಿ ಜೈಲಿಗೆ ಹೋಗಿ ಜುಲೈನಲ್ಲಿ ಬಿಡುಗಡೆಯಾಗಿ ಮತ್ತೆ ಕೊಲೆ ಮಾಡಲು ಯತ್ನ ನಡೆಸಿದ್ದ. ಈಗ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಮಿಥುನಕುಮಾರ ತಿಳಿಸಿದ್ದಾರೆ.