ಭಟ್ಕಳ (Bhatkal) : ಜಿಲ್ಲೆಯಲ್ಲಿ ಮರಳಿನ ಅಭಾವ (sand shortage) ಮತ್ತು ಅರಾಜಕತೆಗೆ ಹಸಿರು ಕೋರ್ಟನಲ್ಲಿ ದಾವೆ ಹಾಕಿದ್ದ ಜಿಲ್ಲೆಯ (Uttara kannada) ಬಿಜೆಪಿಗರೇ (BJP) ಕಾರಣ. ಜನ ಸಾಮಾನ್ಯರಿಗೆ ಮತ್ತು ಇದನ್ನೇ ನಂಬಿ ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕರು ಸೇರಿದಂತೆ ಸಾಕಷ್ಟು ದುಡಿಯುವ ಕಾರ್ಮಿಕರಿಗೆ ಸಮಸ್ಯೆ ಆಗಿದೆ. ಇದರಿಂದ ಜಿಲ್ಲೆಯಲ್ಲಿ ಕಾಮಗಾರಿ ನಿಂತಿದೆ. ನ್ಯಾಯಾಲಯದಲ್ಲಿನ ದಾವೆ ವಾಪಸ್ಸು ತೆಗೆದುಕೊಂಡರೆ ಮಾತ್ರ ಜನಸಾಮಾನ್ಯರಿಗೆ ಅನೂಕೂಲವಾಗುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಸೋಮವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಡೀ‌ ಜಿಲ್ಲೆಯಲ್ಲಿ ರೇತಿಯ ಸಮಸ್ಯೆ ಉಲ್ಬಣವಾಗಿದೆ. ಇದು ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಇದಕ್ಕೆ ಸ್ಪಷ್ಟೀಕರಣ ನೀಡಬೇಕಾಗಿದೆ. ಜನರಲ್ಲಿ ರೇತಿ ಅಭಾವ (sand shortage) ಸೃಷ್ಟಿಯಾಗಲಿಕ್ಕೆ ಬಿಜೆಪಿಯವರು ಕಾಂಗ್ರೆಸ್ ಹಾಗೂ ಉಸ್ತುವಾರಿ ಸಚಿವ‌ ಮಂಕಾಳ ವೈದ್ಯ (Mankal Vaidya) ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಕಾರವಾರದಲ್ಲಿ (Karwar) ನಡೆದ ಜಿಲ್ಲಾ ಕೆಡಿಪಿಯಲ್ಲಿ ರೇತಿಯ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಸಚಿವರು ಸವಿಸ್ತಾರವಾಗಿ ಉತ್ತರಿಸಿ ಸ್ಪಷ್ಟಪಡಿಸಿದ್ದಾರೆ ಎಂದರು.

ಇದನ್ನೂ ಓದಿ : ಅಕ್ಟೋಬರ್‌ ೭ರಂದು ವಿವಿಧೆಡೆ ಅಡಿಕೆ ಧಾರಣೆ

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಶಾಸಕರಿಂದ ಸಚಿವರಾಗುವ ತನಕ ಎಲ್ಲಿಯೂ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಂಡ ನಾಯಕರಾಗಿದ್ದಾರೆ. ಜನರಿಗೆ ರೇತಿ ವಿಚಾರದಲ್ಲೂ ಎಲ್ಲಿಯೂ ವ್ಯತ್ಯಾಸ ಆಗದಂತೆ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ಸರಕಾರಿ, ಖಾಸಗಿ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ರೇತಿ ಅಭಾವ ಆಗದಂತೆ ಸಚಿವ ಮಂಕಾಳ ವೈದ್ಯ ನೋಡಿಕೊಂಡಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಅಧಿಕೃತವಾಗಿ ನಿಂತು ಹೋದ ಮರಳು ಪಾಸನ್ನು ಪುನಃ ಆರಂಭಿಸಿ ಆ ಮೂಲಕ ಜನಸಾಮಾನ್ಯರಿಗೆ ಮರಳು ಸಿಗುವಂತೆ ಮಾಡಿದ್ದಾರೆ‌ ಎಂದರು.

ಇದನ್ನೂ ಓದಿ : ಶಿವಮೊಗ್ಗದಲ್ಲೂ ಗುಂಡಿನ ಸದ್ದು

೫ ವರ್ಷದ ಹಿಂದೆ ನಿಂತು ಹೋಗಿದ್ದ ಮರಳು ಪಾಸನ್ನು ಮತ್ತೆ ನೀಡುತ್ತಿರುವುದು ಕಾನೂನು ಬಾಹಿರ ಎಂದು ಕುಮಟಾ (Kumta) ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಆರೋಪಿಸಿದ್ದರು. ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಇನ್ನು ಮರಳುಗಾರಿಕೆ ವಿರುದ್ದವಾಗಿ ಕಳೆದ ಏ.೪ರಂದು ಜಿಲ್ಲೆಯ ಬಿಜೆಪಿಯಲ್ಲಿ ಗುರುತಿಸಿಕೊಂಡ ಕೆಲ ಮುಖಂಡರುಗಳೇ ಚೆನ್ನೈ ಹಸಿರು ಕೋರ್ಟಲ್ಲಿ ದೂರು ನೀಡಿದ್ದಾರೆ. ನವೆಂಬರ್ ೪ರಂದು ನ್ಯಾಯಾಲಯದಲ್ಲಿ ಮತ್ತೆ ಪ್ರಕರಣ ಮುಂದುವರೆಯಲಿದೆ. ಇದು ವಿಚಾರಣಾ ಹಂತದಲ್ಲಿದೆ. ಈಗಾಗಲೇ ನ್ಯಾಯಾಲಯದಲ್ಲಿ ನಾಲ್ಕೈದು ಬಾರಿ ವಾದ ಮಂಡನೆ ಆಗಿದೆ ಎಂದು ಹೇಳಿದರು.

ಇದನ್ನೂ ಓದಿ : ಸಂಸದರ ಅಹವಾಲು ಸ್ವೀಕಾರ ಸ್ಥಳ ಬದಲಾವಣೆ

ಜನಸಾಮಾನ್ಯರ ಆಶೋತ್ತರವನ್ನು ಗಮನಿಸಿ ಸಚಿವ ಮಂಕಾಳ ವೈದ್ಯ ಅವರು ಪಾಸ್ ವ್ಯವಸ್ಥೆ ಮಾಡಿದ್ದರು. ಇದರ ವಿರುದ್ದ ಬಿಜೆಪಿಯವರು ನ್ಯಾಯಾಲಯಕ್ಕೆ ಹೋಗುವ ಕೆಲಸ ಮಾಡಿದ್ದಾರೆ. ೧೧ ಜನ ಸಹಿಯಿರುವ ಪ್ರತಿಯಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಜಾನನ ಹೆಗಡೆ ಮತ್ತು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಬಾಲಕೃಷ್ಣ ಗೌಡ ಸೇರಿದಂತೆ ಬಿಜೆಪಿ ಪಕ್ಷದಲ್ಲಿ ನಿರತರರು ಇದ್ದಾರೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ :ಮೊಯಿದ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ

ಇನ್ನೊಂದು ಕಡೆ ಗಜಾನನ ಹೆಗಡೆ ಎನ್ನುವವರು ವಿಚಾರಣಾ ಹಂತದಲ್ಲಿರುವವಾಗಲೇ ಅಧಿಕೃತ ಪಾಸನ್ನು ರೇತಿಗೆ ನೀಡಬೇಕು ಎಂದು ಪ್ರತಿ ವರ್ಷ ಅರ್ಜಿ ಹಾಕುತ್ತಿದ್ದಾರೆ‌. ಅವರಿಗೆ ಮಾತ್ರ ರೇತಿಯ ಲಭ್ಯತೆ ಸಿಗಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ರೇತಿಯ ಅಭಾವ ಉಂಟಾಗಿ ಜನರು ದಂಗೆ ಎದ್ದು ಸರಕಾರಕ್ಕೆ, ಸಚಿವರಿಗೆ ಸಮಸ್ಯೆ ತಂದೊಡ್ಡುವ ಕೆಲಸ ಇವರದ್ದಾಗಿದೆ ಎಂದು ಹೇಳಿದರು.

ಇದನ್ನೂ ಓದಿ :  ದರೋಡೆಕೋರನಿಗೆ ಗುಂಡಿನೇಟು; ಪೊಲೀಸರಿಗೆ ಗಾಯ

ಸರಾಗವಾಗಿ ಮತ್ತು ಅಧಿಕೃತ ಪಾಸ್ ಮೂಲಕ ಜನರಿಗೆ ಸಿಗುತ್ತಿದ್ದ ರೇತಿಯನ್ನು ಅರಾಜಕತೆಯಾಗಿ ಮಾಡಿದ್ದು ಬಿಜೆಪಿಯವರೇ. ಇದಕ್ಕೆ ಬಿಜೆಪಿಗರೇ ನೇರವಾಗಿ ಕಾರಣ ಮತ್ತು ಹೊಣೆ. ಬಿಜೆಪಿಗರು ಜನರಲ್ಲಿ ಕ್ಷಮೆ ಕೇಳಬೇಕು. ಬಿಜೆಪಿಯವರು ನ್ಯಾಯಾಲದಲ್ಲಿ ಹಾಕಿದ ದಾವೆ ವಾಪಸ್ಸು ತೆಗೆದುಕೊಂಡರೆ ಸಚಿವರು ಹಾಗೂ ಸರಕಾರ ರೇತಿ ನೀಡುವ ಕೆಲಸ ಮಾಡುವ ಪ್ರಯತ್ನ ಮಾಡಿ ಇದರಿಂದ ಜನಸಾಮಾನ್ಯರಿಗೆ ಅನೂಕುಲವಾಗುತ್ತಲಿದೆ. ಮುಂದಿನ ಆದೇಶದ ತನಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಜೂನ್ ನಿಂದ ರೇತಿ ಕಾರ್ಯ ಸ್ಥಗಿತಕೊಂಡಿದ್ದು, ಸದ್ಯ ಈ ಕುರಿತು ಸರಕಾರ ಅಥವಾ ಸಚಿವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವಾಗಿದೆ ಎಂದರು.

ಇದನ್ನೂ ಓದಿ :  ಅ.೧೦ರಿಂದ ಸಾರ್ವಜನಿಕ ಶಾರದೋತ್ಸವ

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ‘ಜನಸಾಮಾನ್ಯರಲ್ಲಿ ರೇತಿ ಸ್ಥಗಿತಕ್ಕೆ ಸರಕಾರ ಮತ್ತು ಸಚಿವರು ಕಾರಣ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿಯವರು ಧಾಂದಲೆ ಮಾಡಿಕೊಂಡು ಜನರಿಗೆ ಸಮಸ್ಯೆ ಕೊಡುತ್ತಿದ್ದಾರೆ‌. ಪಾಸ್ ನೀಡಿದ್ದು ಮತ್ತು ಮರಳುಗಾರಿಕೆ ಬಂದ್ ಮಾಡಿಸಬೇಕು ಎಂದು ಹೇಳುವ ಬಿಜೆಪಿಗರು ನ್ಯಾಯಾಲಯದಲ್ಲಿ ಹಾಕಿದ ದಾವೆ ವಾಪಸ್ದು ತಗೆದುಕೊಳ್ಳಲಿ. ಅದರ ಬದಲು ಸರಕಾರಕ್ಕೆ ಮತ್ತು ಸಚಿವರನ್ನು ರೇತಿ ವಿಚಾರದಲ್ಲಿ ಆರೋಪಿಸಬೇಡಿ. ಸಚಿವ ಮಂಕಾಳ ವೈದ್ಯ ಅವರು ಚುನಾವಣೆ ಅವಧಿಯಲ್ಲಿ ಮಾತ್ರ ರಾಜಕೀಯ ಮಾಡುತ್ತಾರೆ. ಉಳಿದ ಸಮಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಬಿಜೆಪಿಯವರಿಂದ ಜಿಲ್ಲೆಯಲ್ಲಿ ಜನಸಾಮಾನ್ಯರು ಸಮಸ್ಯೆ ಎದುರಿಸುವಂತೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ಗಮನಸೆಳೆದ ದಸರಾ ಕಾವ್ಯೋತ್ಸವ

ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಡಿ.ಸಿ.ಸಿ. ಸದಸ್ಯ ಜಾಕಿ ಅಲ್ಮೇಡಾ, ಕಾಂಗ್ರೆಸ್ ಮುಖಂಡ ನಾರಾಯಣ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಅಣ್ಣಪ್ಪ ಗೌಡ ಮುಂತಾದವರು ಇದ್ದರು.