ಶಂಕರಘಟ್ಟ : ಸಂವಿಧಾನ ಕುರಿತು ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಸೋಮವಾರ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಚರಿಸಿತು.
ಭಾರತದ ಸಂವಿಧಾನದ ಹಿರಿಮೆಯನ್ನು ಮತ್ತು ಸಂವಿಧಾನದ ಆಶಯಗಳ ಅರಿವನ್ನು ಮೂಡಿಸುವ ಜಾಥಾವನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವೆಂಟೇಶ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಇದನ್ನೂ ಓದಿ : ಫೆ.27ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಮ್ಮೇಳನ
ಕುಲಪತಿ ಪ್ರೊ.ಎಸ್.ವೆಂಕಟೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಎಂ.ಆರ್.ಸತ್ಯಪ್ರಕಾಶ್, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಕಛೇರಿ ಅಧೀಕ್ಷಕಿ ಕೆ.ಎಸ್.ಸವಿತಾ, ನಿಲಯ ಪಾಲಕರಾದ ವೆಂಕಟೇಶ್, ಸಿ.ಎಂ.ರಮೇಶ್, ಚಂದ್ರಾನಾಯ್ಕ್, ಸುಧಾಕರ, ಗಿರೀಶ್.ಬಿ, ಬಸವರಾಜ್, ಕುವೆಂಪು ವಿಶ್ವವಿದ್ಯಾಲಯದ ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವಿಡಿಯೋ ನೋಡಿ : ಕುರುಕ್ಷೇತ್ರ ಫೈಟರ್ಸ್ ಚಾಂಪಿಯನ್ https://fb.watch/qjfjehpPZH/?mibextid=Nif5oz