ಕುಮಟಾ (Kumta) : ಪರಂಪರಾಗತವಾಗಿ ಬೆಳೆದು ಬಂದ ಯಕ್ಷಗಾನ (Yakshagana) ಕಲೆ ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೊಲನಗದ್ದೆ ಗ್ರಾ.ಪಂ. ಅಧ್ಯಕ್ಷ ಎಮ್ ಎಮ್ ಹೆಗಡೆ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಗುಡೇಅಂಗಡಿಯಲ್ಲಿ ಶ್ರೀ ಕಾಂಚಿಕಾಂಬಾ ಕೃಪಾ ಪೋಷಿತ ಯಕ್ಷಗಾನ (Yakshagana) ಮಂಡಳಿ, ಚಿಣ್ಣರ ಯಕ್ಷಗಾನ ಮಂಡಳಿ ಹಾಗೂ ಶ್ರೀ ಕಾಂಚಿಕಾಂಬಾ ಮಹಿಳಾ ಯಕ್ಷಗಾನ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ದಸರಾ ಉತ್ಸವದ ಪ್ರಯುಕ್ತ ಆಯೋಜಿಸಲಾದ “ಯಕ್ಷ ಸಪ್ತ ಸಂಭ್ರಮ“ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗುಡೇಅಂಗಡಿ ಗ್ರಾಮದ ಸಮಾನ ಮನಸ್ಕರು, ತಾ.ಪಂ ಮಾಜಿ ಸದಸ್ಯ ಜಗನ್ನಾಥ ನಾಯ್ಕರ ಸಾರಥ್ಯದಲ್ಲಿ ಕಳೆದ ೨೦ ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಇಂತಹ ಕೆಲಸಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಇದನ್ನೂ ಓದಿ : ದಸರಾ, ದೀಪಾವಳಿ ನಿಮಿತ್ತ ಹೆಚ್ಚುವರಿ ರೈಲು ಓಡಾಟ
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕಾಂಚಿಕಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್ ಎಸ್ ಹೆಗಡೆ ಮಾತನಾಡಿ, ಅನೇಕ ಕಿರಿಯ ಕಲಾವಿದರನ್ನು ಸೃಷ್ಟಿಸುವ ಮೂಲಕ ಯಕ್ಷಗಾನ ಕಲೆಯನ್ನು ಉಳಿಸುವ ಕೆಲಸ ಸ್ವಾಗತಾರ್ಹ. ಇಲ್ಲಿ ತರಬೇತಿ ಪಡೆದ ಕಲಾವಿದರು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಯಶಸ್ಸು ಗಳಿಸುವ ಮೂಲಕ ರಾಜ್ಯ, ದೇಶವ್ಯಾಪಿ ಹೆಸರು ಮಾಡಿ ಊರಿಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಇದನ್ನೂ ಓದಿ : ಆತ್ಮಹತ್ಯೆ ಬೆದರಿಕೆ ; ಸಿಬ್ಬಂದಿ ವಿರುದ್ಧ ಅಧಿಕಾರಿಯಿಂದ ದೂರು
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗಗನ್ ಮಾರುತಿ ನಾಯ್ಕ, ರಕ್ಷಿತಾ ಭದ್ರು ಮಡಿವಾಳ ಇವರನ್ನು ಗೌರವಿಸಲಾಯಿತು. ಅಘನಾಶಿನಿಯ ಗಾನ ಗಂಧರ್ವ ಚಿಣ್ಣರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪುರುಸೋತ್ತಮ ನಾಯ್ಕ ಇವರನ್ನು ಗೌರವಿಸಲಾಯಿತು. ಮಂಡಳಿಯ ರೂವಾರಿ ಜಗನ್ನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಡ ಗ್ರಾ.ಪಂ. ಅಧ್ಯಕ್ಷೆ ಗೀತಾ ನಾಯ್ಕ, ಯುವಕ ಮಂಡಳಿ ಅಧ್ಯಕ್ಷ ಲಕ್ಷ್ಮೀಶ ನಾಯ್ಕ, ಮಂಡಳಿಯ ಅಧ್ಯಕ್ಷ ವಿಷ್ಣು ನಾಯ್ಕ, ಕಾರ್ಯದರ್ಶಿ ನಾರಾಯಣ ಭಟ್ಟ ಆರೋಗ್ಯ ಇಲಾಖೆ ಇನ್ನಿತರರು ಇದ್ದರು. ಶಿಕ್ಷಕ ಚಿದಾನಂದ ಸ್ವಾಗತಿಸಿ ವಂದಿಸಿದರು.
ಇದನ್ನೂ ಓದಿ : ಲಾಭದಾಸೆಗೆ ಅರ್ಧ ಕೋಟಿ ಕಳಕೊಂಡ ಮುರ್ಡೇಶ್ವರದ ಗೃಹಿಣಿ