ಭಟ್ಕಳ (Bhatkal) : ಆಟೋ ಚಾಲಕನೋರ್ವ (Auto driver) ತಲವಾರ ರೀತಿಯ ಆಯುಧದಿಂದ ತನ್ನ ಮಾವನ ಮೇಲೆ ಹಲ್ಲೆ (Assault) ನಡೆಸಿರುವ ಬಗ್ಗೆ ವಕೀಲರೊಬ್ಬರು ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಚೌತನಿ ಉಗ್ರಾಣಿಮನೆಯ ಮಾದೇವ ಅಲಿಯಾಸ್‌ ದೇವೇಂದ್ರ ನಾರಾಯಣ ನಾಯ್ಕ ವಿರುದ್ಧ ಮುಂಡಳ್ಳಿ ನಿವಾಸಿ ವಕೀಲ (Advocate) ಉದಯ ಹೊನ್ನಪ್ಪ ನಾಯ್ಕ ದೂರು ದಾಖಲಿಸಿದ್ದಾರೆ. ಆರೋಪಿಯ ಮನೆಯ ಪಕ್ಕದಲ್ಲಿಯೇ ವಾಸವಾಗಿರುವ ವಕೀಲ ಉದಯ ನಾಯ್ಕರ ಮಾವ ವಿಠ್ಠಲ ಜಟ್ಟಾ ನಾಯ್ಕ ಅವರು ತಮ್ಮ ಅಣ್ಣ ನಡೆಸುತ್ತಿದ್ದ ಮಾರುತಿ ಪ್ರಿಂಟಿಂಗ್‌ ಪ್ರೆಸ್‌ನ ಹಳೆಯ ಕಟ್ಟಡ ಕೆಡವುತ್ತಿದ್ದಾಗ ಈ ಘಟನೆ ನಡೆದಿದೆ. ಗೋಡೆ ತೆಗೆಯುವ ವಿಷಯಕ್ಕೆ ಮನೆಯೊಳಗಿಂದ ಕೂಗುತ್ತ ಬಂದ ಆರೋಪಿ ಮಾದೇವ, ತನ್ನ ಆಟೋದಲ್ಲಿದ್ದ ತಲವಾರ ರೀತಿಯ ಆಯುಧ ತೆಗೆದುಕೊಂಡು ಕೊಲೆ ಮಾಡುವ ಉದ್ದೇಶದಿಂದ ವಿಠ್ಠಲ ನಾಯ್ಕರ ತಲೆಯ ಮೇಲೆ ಹೊಡೆದು (Assault) ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸೈ ಸೋಮರಾಜ ರಾಥೋಡ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : Video Call ಮಾಡಿ ವಿವಾಹಿತ ಮಹಿಳೆಯೆದುರು ಬೆತ್ತಲೆ; ದೂರು