ಶಿರಸಿ (Sirsi) : ಜೀವನ ಬೇಜಾರಾಗಿ ಸಾವಿಗೆ ಶರಣಾದರೆ ಹಿರಿಯ ಅಧಿಕಾರಿಗಳೇ ಕಾರಣ ಎಂದು ಪತ್ರ ಬರೆದು ಬೆದರಿಕೆ ಹಾಕಿರುವ ಬಗ್ಗೆ ಸಿಬ್ಬಂದಿ ವಿರುದ್ಧ ಅಬಕಾರಿ ಅಧಿಕಾರಿ (excise officer) ದೂರು ದಾಖಲಿಸಿದ್ದಾರೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಸಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿಯಲ್ಲಿ ನಿಯೋಜನೆ ಮೇಲೆ ಚಾಲಕ ಕರ್ತವ್ಯ ನಿರ್ವಹಿಸುತ್ತಿರುವ ಡಿ.ಎಂ.ಗಾಯಕವಾಡ ವಿರುದ್ಧ ಉಪ ಅಧೀಕ್ಷಕ ಶಿವಪ್ಪ ಹೆಚ್.ಎಸ್. ದೂರು ದಾಖಲಿಸಿದ್ದಾರೆ. ಆರೋಪಿ ಡಿ.ಎಂ.ಗಾಯಕವಾಡ ಕರ್ತವ್ಯದ ಅವಧಿಯಲ್ಲಿ ಪಾನ ಮತ್ತನಾಗಿ ಬಂದಿರುವ ಬಗ್ಗೆ ಹಲವಾರು ಬಾರಿ ವೈದ್ಯರಿಂದ ಕುಡಿತದ ಪ್ರಮಾಣ ಪತ್ರ ಪಡೆದು ಮೇಲಾಧಿಕಾರಿಗಳಿಗೆ ಉಪ ಅಧೀಕ್ಷಕ ಶಿವಪ್ಪ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಾಯಕವಾಡ ವಿರುದ್ಧ ತಿಳುವಳಿಕೆ ನೋಟಿಸ್ ಜಾರಿ ಮಾಡಲು ಶಿಸ್ತು ಪ್ರಾಧಿಕಾರ ಸೂಚಿಸಿತ್ತು.
ಇದನ್ನೂ ಓದಿ : ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ
ಅದರಂತೆ ಉಪ ಅಧೀಕ್ಷಕ ಶಿವಪ್ಪ ಹೆಚ್.ಎಸ್. ಸೆ.೧೯ರಂದು ನೋಟಿಸ್ ಜಾರಿ ಮಾಡಿದ್ದರು. ನಂತರ ಚಾಲಕ ಡಿ.ಎಂ.ಗಾಯಕವಾಡ ಕಾರವಾರದ (Karwar) ಅಬಕಾರಿ ಉಪ ಆಯುಕ್ತರಿಗೆ ಪತ್ರ ಬರೆದು ನನಗೆ ಮಾನಸಿಕ ಕಿರುಕುಳ ಕೊಡುತ್ತಿರುವುದರಿಂದ ಸಾವಿಗೆ ಶರಣಾಗುವ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದು ಬೆದರಿಕೆ ಹಾಕಿರುವುದಾಗಿ ಉಪ ಅಧೀಕ್ಷಕರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ : ವಕೀಲನ ಮಾವನ ಮೇಲೆ ಆಟೋ ಚಾಲಕನಿಂದ ಹಲ್ಲೆ
ಪ್ರತಿಯಾಗಿ ಉಪ ಅಧೀಕ್ಷಕರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬರುವಂತೆ ತಿಳಿಸಿದ್ದರು. ದೂರುದಾರರ ಕೋರಿಕೆಯಂತೆ ಶಿರಸಿಯ ೧ನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯವು (JMFC) ಎನ್ಸಿ ಪ್ರಕರಣದಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಆದೇಶ ಮಾಡಿದೆ. ಅದರಂತೆ ನಿನ್ನೆ ಸೆ.೭ರಂದು ಶಿರಸಿ (Sirsi) ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Video Call ಮಾಡಿ ವಿವಾಹಿತ ಮಹಿಳೆಯೆದುರು ಬೆತ್ತಲೆ; ದೂರು