ಭಟ್ಕಳ (Bhatkal): ಮುರುಡೇಶ್ವರದಿಂದ (Murudeshwar) ತಿರುಪತಿಗೆ (Tirupati) ನೇರ ರೈಲು ಸೇವೆಗೆ ಭಾರತೀಯ ರೈಲ್ವೆ (Indian Railway) ಅನುಮತಿ ನೀಡಿರುವ ಶುಭ ಸುದ್ದಿ (Good News) ಬಂದಿದೆ. ಕುಂದಾಪುರ (Kundapur) – ಉಡುಪಿಯಿಂದ (Udupi) ನೇರ ರೈಲು ಸೇವೆ ಬೇಕು ಎನ್ನುವ ದಶಕಗಳ ಕನಸು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ (Kota Srinivas Poojari) ಪ್ರಯತ್ನದಿಂದ ನನಸಾಗಿದೆ. ಇದರ ಲಾಭ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರಿಗೂ ಸಿಕ್ಕಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೈದರಾಬಾದಿನ (Hyderabad) ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ-ಮಂಗಳೂರು (Mangaluru) ವಾರಕ್ಕೆರಡು ದಿನದ ರೈಲನ್ನು ಮುರುಡೇಶ್ವರಕ್ಕೆ (Murdeshwar) ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ. ಬುಧವಾರ ಮತ್ತು ಶನಿವಾರ ಸಂಜೆ ೪ ಗಂಟೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ ೧೧ ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಹೈದರಾಬಾದಿನ ಕಾಚಿಗುಡ ತಲುಪಲಿದೆ. ಹೈದರಾಬಾದ್‌ನಿಂದ ಮುರುಡೇಶ್ವರಕ್ಕೆ ಹೊರಡುವ ರೈಲು ಶುಕ್ರವಾರ ಮತ್ತು ಮಂಗಳವಾರ ಸಂಜೆ ೫ ಗಂಟೆಗೆ ರೇಣಿಗುಂಟ ನಿಲ್ದಾಣಕ್ಕೆ ಬರಲಿದ್ದು, ಅಲ್ಲಿಂದ ಹೊರಟು ಮರುದಿನ ಮಧ್ಯಾಹ್ನ ೨ಕ್ಕೆ ಮುರುಡೇಶ್ವರ ತಲುಪಲಿದೆ.
ಇದನ್ನೂ ಓದಿ : ಕಾರವಾರದಿಂದ ತಿರುಪತಿಗೆ ರೈಲು ಓಡಿಸಲು ಆಗ್ರಹ
ಮುರುಡೇಶ್ವರದ ಮೂಲಕ ಕುಂದಾಪುರ, ಉಡುಪಿ, ಸುರತ್ಕಲ್ (Suratkal), ಮೂಲ್ಕಿ ನಗರಗಳು, ಕೊಯಂಬತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್‌ವರೆಗೆ ರೈಲು ಸಂಪರ್ಕ ದೊರಕಿದೆ. ವಿಜಯ ದಶಮಿಯ (Vijayadashami) ಶುಭ ಸಂದರ್ಭದಲ್ಲಿ ಕರಾವಳಿಗೆ ರೈಲು ಘೋಷಣೆಯಾಗಬೇಕು ಎನ್ನುವ ಕಾರಣಕ್ಕೆ ಸತತವಾಗಿ ದಿಲ್ಲಿಯ ಅಧಿಕಾರಿಗಳ ಜತೆ ಸಭೆಯ ಮೇಲೆ ಸಭೆ ನಡೆಸಿದ ಪರಿಣಾಮ ವಿಜಯದಶಮಿ ಸಂದರ್ಭದಲ್ಲಿ ಈ ರೈಲಿನ ವಿಸ್ತರಣೆಗೆ ಆದೇಶ ದೊರಕಿದೆ (Good news).
ಇದನ್ನೂ ಓದಿ : ಶಿವಮೊಗ್ಗ ಸಹಿತ ೧೨ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್