ಭಟ್ಕಳ (Bhatkal) : ಮರಳು ವ್ಯವಹಾರದ ವಿರುದ್ಧ ಬಿಜೆಪಿಯರು ಹಸಿರು ಪೀಠಕ್ಕೆ ಹೋಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪ ಮಾಡುತ್ತಿದ್ದಾರೆ. ಆದರೆ, ಹಸಿರು ಪೀಠದ ಮೆಟ್ಟಿಲೇರಿದ ಆ ೧೧ ಜನರಿಗೆ ಬೆನ್ನೆಲುಬಾಗಿ ನಿಂತು ಹಣವನ್ನು ಕೊಟ್ಟು ಎಲ್ಲಾ ಸಹಕಾರ ಕೊಟ್ಟಿರುವುದು (sand politics) ಇದೇ ಕಾಂಗ್ರೆಸ್‌ ಮುಖಂಡರು (Congress leaders) ಎಂದು ಮಾಜಿ ಶಾಸಕ ಸುನೀಲ ನಾಯ್ಕ (Sunil Naik) ಹೊಸ ಬಾಂಬ್‌ ಸಿಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮರಳು ಅಭಾವಕ್ಕೆ ಬಿಜೆಪಿ (BJP) ನೇರ ಕಾರಣ ಎಂದು ಕಾಂಗ್ರೆಸ್ ಮಾಡಿದ ಆರೋಪದ ಹಿನ್ನೆಲೆ ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಶರಾವತಿ (Sharavati) ಎಡ ಮತ್ತು ಬಲ ದಂಡೆ ಭಾಗದಲ್ಲಿ ನನ್ನ ಅರ್ಧ ಗುಂಟೆ ಜಾಗವಿಲ್ಲ. ಆದರೆ ಸಚಿವ ಮಂಕಾಳ ವೈದ್ಯರ (Mankal Vaidya)  ಜಾಗ ಆ ಭಾಗದಲ್ಲಿ ಸಾಕಷ್ಟಿದೆ. ಅದೇ ರೀತಿ ಅವರದ್ದೇ ರೇತಿ ದಿಬ್ಬೆಗಳು ಎಷ್ಟಿದೆ ಎಂಬುದನ್ನು ತಿಳಿಸಲಿ. ಜಿಲ್ಲೆಯಾದ್ಯಂತ (Uttara Kannada) ಮರಳು ಸಮಸ್ಯೆ ತಲೆದೋರಲು ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ. ಅವರು ಮರಳನ್ನು ಉದ್ಯಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ‘ನಾಯಕತ್ವ ವಿಕಸನ ಕಾರ್ಯಾಗಾರ’

ನನ್ನ ಅವಧಿಯಲ್ಲಿಯು ಸಹ ಹಸಿರು ಪೀಠಕ್ಕೆ ಉಡುಪಿಯ (Udupi) ಓರ್ವರು ಹೋಗಿದ್ದರು ಸಹ ಮೂವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಸಂಪ್ರದಾಯ ಮರಳುಗಾರಿಕೆ ಮೂಲಕ ತಾಲೂಕಿಗೆ ಮರಳು ಬರುವಂತೆ ಮಾಡಿದ್ದೇನೆ. ಆದರೆ ಸಚಿವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಇದರಿಂದ ರಾಜಕಾರಣ ಮಾಡಬೇಕು ಎನ್ನುವ ಉದ್ದೇಶ ನಮಗಿಲ್ಲ. ಒಂದು ವರ್ಷದಿಂದ ರೇತಿಯ ಸಮಸ್ಯೆ ಎದುರಾಗಿದೆ. ಆದರೆ ನಾವು ಇದೆ ಮೊದಲು ಬಾರಿಗೆ ಸುದ್ದಿಗೋಷ್ಠಿ ಕರೆದಿದ್ದೇವೆ. ಈಗ ಅವರದ್ದೆ ಸರಕಾರ. ಅವರದ್ದೇ ಉಸ್ತುವಾರಿ ಸಚಿವರಿದ್ದಾರೆ. ಸರಕಾರ ನಡೆಸುತ್ತಿರುವ ಅವರೇ ಬಂದು ಮಾಧ್ಯಮದ ಎದುರು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಸರ್ಕಾರ ನಡೆಸುತ್ತಿರುವವರೇ ತಮ್ಮ ಅಳಲನ್ನು ಹೇಳಿಕೊಳ್ಳುತ್ತಿರುವುದು ನೋಡಿದರೆ ಬಹಳ ಮುಜುಗರ ಹಾಗೂ ನಾಚಿಕೆಗೇಡಿನ ಸಂಗತಿ. ನೀತಿ ನಿಯಮಗಳನ್ನು ಮಾಡುವುದು ಸರ್ಕಾರ. ತಮ್ಮ ಕೈಯಲ್ಲಿ ಅಧಿಕಾರ ಇಟ್ಟುಕೊಂಡು ಕಪಟ ನಾಟಕವನ್ನಾಡಿದ್ದಾರೆ. ಸಚಿವರು ಅವರ ಕಪಟ ನಾಟಕವನ್ನು ಬ್ಲಾಕ್ ಅಧ್ಯಕ್ಷರ ಮೂಲಕ ಮಾಡಿಸಿದ್ದಾರೆ ಎಂದರು.

ಇದನ್ನೂ ಓದಿ : ಹೈ ಅಲರ್ಟ್‌ ಆದ ಇಂಟೆಲ್‌ ಏಜೆನ್ಸಿಗಳು

ಈಗಿನ ಸಚಿವರು ಮೊದಲು ಶಾಸಕರಾಗಿದ್ದ ಅವಧಿಯಲ್ಲೂ ಮರಳಿನ ಸಮಸ್ಯೆ ಇತ್ತು. ಈಗ ಮತ್ತೆ ಅವರ ಅವಧಿಯಲ್ಲಿ ಮರಳು ಸಮಸ್ಯೆ ಎದುರಾಗಿದೆ. ನನ್ನ ಅವಧಿಯಲ್ಲಿ ತಲೆದೋರದ ಮರಳು ಸಮಸ್ಯೆ ಅವರ ಎರಡೂ ಅವಧಿಯಲ್ಲಿ ಯಾಕೆ ಬರುತ್ತದೆ? ೨೦೧೮ ರಿಂದ ೨೦೨೩ತನಕ ನಾನು ಶಾಸಕನಿದ್ದ ವೇಳೆ ಯಾವುದೆ ಸಮಸ್ಯೆ ಇರಲಿಲ್ಲ. ಭಟ್ಕಳ ಸರ್ಕಲ್ ನಿಂದ ರಂಗಿನಕಟ್ಟೆ ತನಕ ೨೫ ರಿಂದ ೩೦ ಮರಳು ಲಾರಿಗಳು ನಿಂತುಕೊಂಡಿರುತ್ತಿತ್ತು. ಕೇವಲ ೮ ರಿಂದ ೯ ಸಾವಿರಕ್ಕೆ ಬಡವರಿಗೆ ಮರಳು ಸಿಗುವಂತೆ ಒಬ್ಬ ಶಾಸಕನಾಗಿ ನಾನು ಮಾಡಿದ್ದೇನೆ. ಸಾವಿರಾರು ಕುಟುಂಬಗಳು ಮರಳನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ.  ಆದರೆ ಸಚಿವರು ಮರಳುಗಾರಿಕೆಯನ್ನು ಉದ್ಯಮವನ್ನಾಗಿ ಮಾಡುವ ಉದ್ದೇಶ ಇಟ್ಟುಕೊಂದಿದ್ದಾರೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ : ಕಡಲಾಮೆಗಾಗಿ ೪ ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪನೆ

ನನ್ನ ಅವಧಿಯಲ್ಲಿಯು ಹಸಿರು ಪೀಠಕ್ಕೆ ಉಡುಪಿಯ ಓರ್ವರು ಕೋರ್ಟ ಹೋಗಿದ್ದರು. ಆದರೆ ನಾನು ಕಾರವಾರ(Karwar), ಉಡುಪಿ(Udupi), ಮಂಗಳೂರಿನ (Mangaluru) ಮೂವರೂ ಜಿಲ್ಲಾಧಿಕಾರಿಗಳ ಸಚಿವ ಸಿ.ಸಿ.ಪಾಟೀಲರವರ (C.C. Patil) ನೇತೃತ್ವದಲ್ಲಿ ಸಭೆ ಮಾಡಿಸಿದ್ದೆ. ಜನರಿಗೆ ರೇತಿ ಸಿಗುವಂತೆ ಮಾಡಿದ್ದೆ. ಆದರೆ ಈ ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದ್ದೆ? ನನಗೆ ರಾಜಕಾರಣ ಮಾಡುವ ಉದ್ದೇಶವಿಲ್ಲ. ಆದರೆ ಕಾಂಗ್ರೆಸ್ ಅವರು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಯಾರಿಗೂ ರೇತಿ ಸಿಗುತ್ತಿಲ್ಲ. ಒಬ್ಬ ಮಾಜಿ ಶಾಸಕನಾಗಿ ನನಗೇ ರೇತಿ‌ ಸಿಗುತ್ತಿಲ್ಲ. ಹೀಗಿರುವಾಗ ಸಾಮಾನ್ಯ ಜನರು ಎಷ್ಟು ಪರದಾಡುತ್ತಿದ್ದಾರೆ ಎಂದು ಸಚಿವರು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ : ತಿಂಗಳ ಕಾಲ ಕೋಮಾದಲ್ಲಿದ್ದ ಯುವಕ ನಿಧನ 

ನನ್ನ ಅವಧಿಯಲ್ಲಿ ನಾನು ಎಲ್ಲಿಯೂ ಸಹ ರೇತಿ ನಿಲ್ಲಿಸುವ ಕೆಲಸ ಮಾಡಿಲ್ಲ. ಸಚಿವರಿಗೆ ರಾಜಕಾರಣ (Sand Politics) ಉದ್ದೇಶ ಇದ್ದರೆ ಮಾಡಲಿ, ಆದರೆ ಜನರ ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು. ಎಲ್ಲೆಲ್ಲೋ ಸಭೆಯನ್ನು ಮಾಡಿ ಬೆಂಗಳೂರಿನಲ್ಲಿ ಕುಳಿತುಕೊಳ್ಳುವುದಲ್ಲ. ಜನರ ಸಮಸ್ಯೆ ಅರಿಯಬೇಕಾದರೆ ಕ್ಷೇತ್ರದಲ್ಲಿ ಇರುವಂತಹ ಕೆಲಸ ಮಾಡಿ. ಆಗ ತಾಲೂಕಿನಲ್ಲಿರುವ ಸಮಸ್ಯೆ ಬಗ್ಗೆ ನಿಮಗೆ ಅರಿವಾಗುತ್ತದೆ. ನಿಮಗೂ ಕೂಡ ಕಷ್ಟಗಳ ಬಗ್ಗೆ ಅರಿವಾಗಬೇಕೆಂದರೆ ತಿಂಗಳಲ್ಲಿ ೨೫ ದಿನಗಳ ಕಾಲ ನಮ್ಮ ಕ್ಷೇತ್ರದಲ್ಲಿ ಇರುವಂತಹ ಕೆಲಸ ಮಾಡಿ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆ ಹರಿಸಿ. ಇಲ್ಲವಾದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿ. ಆಗ ಓರ್ವ ಮಾಜಿ ಶಾಸಕನಾಗಿ ಪರಿಹಾರ ಮಾಡುವಂತ ಕೆಲಸ ನಾನು ಮಾಡುತ್ತೇನೆ ಎಂದರು.

ಇದನ್ನೂ ಓದಿ : ಮುರ್ಡೇಶ್ವರದಿಂದ ತಿರುಪತಿಗೆ ನೇರ ರೈಲು

ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ , ನಿಗಮ ಮಂಡಳಿ ಮಾಜಿ ಅಧ್ಯಕ್ಷಗೋವಿಂದ ನಾಯ್ಕ. ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಹಾಗೂ ಶ್ರೀಧರ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಪ್ರಕೋಷ್ಟ ಸಹಸಂಚಾಲಕ ಮೋಹನ ನಾಯ್ಕ, ಮಾಜಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಭಾಸ್ಕರ ದೈಮನೆ, ಉದಯ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು.

ಮಾಜಿ ಶಾಸಕ ಸುನೀಲ ನಾಯ್ಕರ ಸುದ್ದಿಗೋಷ್ಠಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ಸ್ಟೇಟ್ ಬ್ಯಾಂಕ್ ನೌಕರಗೆ ೧೩.೫೦ ಲಕ್ಷ ರೂ. ಪಂಗನಾಮ