ಭಟ್ಕಳ (Bhatkal): ಅಕ್ಕಪಕ್ಕದ ತಾಲೂಕುಗಳಿಂದ ಭಟ್ಕಳಕ್ಕೆ ಮರಳು ಸಿಗುವಂತೆ ಹೊಸದಾಗಿ ಮರಳು ಸಾಗಾಟ ನೀತಿ (sand policy) ರಚಿಸಬೇಕು. ಇಲ್ಲವಾದಲ್ಲಿ ಎಲ್ಲಾ ಕಟ್ಟಡ ಸಂಬಂಧಿತ ಅಸೋಸಿಯೇಶನ್ ವತಿಯಿಂದ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಭಟ್ಕಳ ಇಂಜಿನಿಯರ್ (Engineer) ಹಾಗೂ ಆರ್ಕಿಟೆಕ್ಚರ್ (architecture) ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ನಾಯ್ಕ ಎಚ್ಚರಿಸಿದ್ದಾರೆ. ಅವರು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಹಿಂದೆ ಅಕ್ಕಪಕ್ಕದ ತಾಲೂಕಿನವರು ಭಟ್ಕಳದಿಂದ ಮರಳು ಪಡೆದುಕೊಳ್ಳುತ್ತಿದ್ದರು. ಈಗ ಅಕ್ಕ ಪಕ್ಕದ ತಾಲೂಕಿನವರಿಂದ ನಮಗೆ ಈಗ ಅವರಿಂದ ಮರಳು ಲಭ್ಯತೆ ಸಿಗುವಂತೆ ನಮ್ಮಲ್ಲಿನ ಶಾಸಕರು, ಸಚಿವರು ಸರಕಾರವು ಹೆಚ್ಚಿನ ಮುತುವರ್ಜಿ ವಹಿಸಬೇಕು. ಮರಳು ಸಾಗಾಟದ ನೀತಿಯನ್ನು ರಚಿಸಿ ಭಟ್ಕಳಕ್ಕೆ ಮರಳು ಸಿಗುವಂತೆ ಮಾಡಿ ಸಮಸ್ಯೆ ಪರಿಹರಿಸಿಕೊಡಬೇಕು ಎಂದು ನಾಗೇಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ : child marriage/ ಕಾರವಾರದ ಮಹಿಳೆ ಸಹಿತ ಐವರ ವಿರುದ್ಧ ಪ್ರಕರಣ
‘ಮರಳು ಒಂದು ನೈಸರ್ಗಿಕವಾದ ಸ್ವಾಭಾವಿಕ ವಸ್ತು ಆಗಿದೆ. ಆದರೆ ಇಲ್ಲಿ ತಾರತಮ್ಯ ನಡೆಯುತ್ತಿದೆ. ಮರಳಿನ ಸಮಸ್ಯೆ ಈ ಹಿಂದೆ ಇದ್ದರೂ ಈಗ ತೀವ್ರವಾಗಿದೆ. ಇದರಿಂದ ಕಟ್ಟಡ ಗುತ್ತಿಗೆದಾರರಿಗೆ, ಇಂಜಿನಿಯರ, ಆರ್ಕಿಟೆಕ್ಚರ, ಕಟ್ಟಡ ಕಾರ್ಮಿಕರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಅತೀ ಶೀಘ್ರವಾಗಿ ಇಲಾಖೆಯ ಅಧಿಕಾರಿಗಳು, ಶಾಸಕರು, ಸಚಿವರು ಸಮಸ್ಯೆ ಪರಿಹರಿಸಿಕೊಡಬೇಕು. ಹೊನ್ನಾವರ, ಕುಂದಾಪುರ (Kundapur), ಉಡುಪಿ (Udupi) ಮತ್ತು ಮಂಗಳೂರು (Mangaluru) ಭಾಗದಿಂದ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಂಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ
ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ ಪೂಜಾರಿ ಮಾತನಾಡಿ, ‘ಈ ಕುರಿತು ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ. ಈ ಬಗ್ಗೆ ಮನವಿಯನ್ನು ಸಲ್ಲಿಸಿ ಅವರಿಗೆ ಮರಳು ಸಮಸ್ಯೆಯ ಕುರಿತು ಮನವರಿಕೆ ಮಾಡಲಿದ್ದೇವೆ. ನಮಗೆ ಶೀಘ್ರದಲ್ಲಿ ಕುಂದಾಪುರದಿಂದ ಮರಳು ಲಭ್ಯತೆ ಸಿಗುವಂತೆ ಮಾಡಿಕೊಡಬೇಕು ಎಂದರು.
ಇದನ್ನೂ ಓದಿ : Konkani Parishat/ ಕುಮಟಾದ ಅರುಣ ಉಭಯಕರ ಉತ್ತರಾಧಿಕಾರಿ ಆಯ್ಕೆ
ಅಸೋಸಿಯೇಷನ್ ಸದಸ್ಯ ಮಿಸ್ಬ್ ಉಲ್ ಹಕ್ ಮಾತನಾಡಿ, ‘ ಮರಳು ನೀತಿಯಲ್ಲಿ ಸುಧಾರಣೆ ತಂದು ಆ ಮೂಲಕ ನಮ್ಮಲ್ಲಿನ ಸ್ವಾಭಾವಿಕ ಮರಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಎರಡು ಜಿಲ್ಲೆಯ ಮಧ್ಯೆ ಮರಳು ಸಾಗಾಟ ಪರವಾನಿಗೆ ನೀತಿ ಸರಳೀಕರಣಗೊಳಿಸಬೇಕು. ಕೇವಲ ನಮ್ಮ ಹೊನ್ನಾವರದ (Honnavar) ಶರಾವತಿ (Sharavati) ನದಿಯಿಂದನ್ನೇ ಅವಲಂಬಿಸಿಕೊಳ್ಳುವ ಬದಲಿಗೆ ಪಕ್ಕದ ಕುಂದಾಪುರದಿಂದಲೂ ನಮಗೆ ಮರಳು ಸಿಗುವಂತಾಗಿ ಇಲ್ಲಿ ಕಾಮಗಾರಿಗಳು ಮತ್ತೆ ಶುರುವಾಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮರಳಿನ ವಿಚಾರದಲ್ಲಿ ಏಕಸ್ವಾಮ್ಯತೆ ನಡೆಸಬಾರದು ಎಂದರು.
ಇದನ್ನೂ ಓದಿ : ಮರಳು ಅಭಾವಕ್ಕೆ ಬಿಜೆಪಿ ನೇರ ಕಾರಣ ಎಂದ ಕಾಂಗ್ರೆಸ್
ಕರಾವಳಿಯಲ್ಲಿ ಮೀನುಗಾರಿಕೆಯನ್ನು ಅಕ್ಕಪಕ್ಕದ ತಾಲೂಕಿನಲ್ಲಿ ನಡೆಸುತ್ತಾರೆ. ಅಲ್ಲಿ ಮರಳಿಗೆ ಯಾವುದೇ ನಿರ್ಬಂಧವಿಲ. ಈ ಮರಳು ವಿಚಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ತರಹ ಆಗುತ್ತಿದೆ. ಸರಕಾರವು ಉತ್ತಮ ಮರಳು ನೀತಿ ರಚಿಸಿ ನಮ್ಮ ರಾಜ್ಯದಲ್ಲಿಯೇ ಇರುವ ಉಡುಪಿ, ಕುಂದಾಪುರದಿಂದ ಮರಳು ಬರುವಂತೆ ಮಾಡಿ ಸಾಗಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಿಸ್ಬಾ ಉಲ್ ಹಕ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿರಾಜುದ್ದೀನ್ ಮವ್ವಾನ್ ರಶೀದ್, ಐಮನ್ ದಾತಾ, ಉಮರ ಮಿಸ್ಬಾ, ಉಸಾಮಾ ಅಜೇಬ್, ಮೊಹಮ್ಮದ್ ಸುರೇಮ್ ಮುಂತಾದವರು ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : sand politics/ ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್ ಬೆನ್ನೆಲುಬು